Oicron Variant: ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೋಗಿ ಲಿವರ್ ಡ್ಯಾಮೇಜ್ ಮಾಡಿಕೊಳ್ಳಬೇಡಿ..!

ಕೊರೊನಾ ಸೋಂಕಿನಿಂದ ಪಾರಾಗಲು ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಶೇಷ ವಸ್ತುಗಳ ಸೇವನೆಯು ತುಂಬಾ ಪ್ರಯೋಜನಕಾರಿ. ಆದರೆ ಇದರಲ್ಲಿ ಮಾಡುವ ತಪ್ಪು ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು.

Written by - Puttaraj K Alur | Last Updated : Jan 18, 2022, 03:09 PM IST
  • ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರಯತ್ನಿಸುವುದರಿಂದ ತೊಂದರೆ ಉಂಟಾಗುತ್ತದೆ
  • ಅಮೃತಬಳ್ಳಿ ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ಹೆಚ್ಚಿನ ಪ್ರಮಾಣದಲ್ಲಿ ಅಮೃತ ಬಳ್ಳಿ ಸೇವಿಸುವುದರಿಂದ ಲೀವರ್ ಡ್ಯಾಮೇಜ್ ಆಗುವ ಸಾಧ್ಯತೆ ಇದೆ
Oicron Variant: ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೋಗಿ ಲಿವರ್ ಡ್ಯಾಮೇಜ್ ಮಾಡಿಕೊಳ್ಳಬೇಡಿ..! title=
ತಜ್ಞರ ಸಲಹೆ ಮೇರೆಗೆ ಅಮೃತಬಳ್ಳಿ ಸೇವಿಸಿರಿ

ನವದೆಹಲಿ: ವೇಗವಾಗಿ ಸೋಂಕು ಹರಡುತ್ತಿರುವ ಓಮಿಕ್ರಾನ್ ರೂಪಾಂತರಿ ವೈರಸ್(Oicron Variant) ಜನರ ಮನಸ್ಸಿನಲ್ಲಿ ತಲ್ಲಣ ಮೂಡಿಸಿದೆ. ಕೊರೊನಾ ಸೋಂಕಿನಿಂದ ಪಾರಾಗಲು ಜನರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಒತ್ತು ನೀಡುತ್ತಿದ್ದಾರೆ. ಇದಕ್ಕಾಗಿ ಅವರು ಹಲವು ವಿಧಾನಗಳಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ನೀವು ಅಲೋಪತಿಯಲ್ಲಿ ಸೂಚಿಸಿರುವ ಆಹಾರ ಸೇವಿಸುತ್ತಿದ್ದರೆ ಅಥವಾ ಆಯುರ್ವೇದದಲ್ಲಿ ಉಲ್ಲೇಖಿಸಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳನ್ನು ಬಳಸುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಮ್ಮ ಈ ಪ್ರಯತ್ನವು ನಿಮಗೆ ಗೊತ್ತಿಲ್ಲದೆ ಸಮಸ್ಯೆಗೆ ಸಿಲುಕಿಸಬಹುದು.

ಆಯುರ್ವೇದದಲ್ಲಿ ಅಮೃತಬಳ್ಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ(Immunity Booster) ಹೆಚ್ಚಿಸಲು ಜನರು ಇದನ್ನು ಹೆಚ್ಚಾಗಿ ಸೇವಿಸುತ್ತಾರೆ. ಅಮೃತಬಳ್ಳಿ ಒಂದು ರೀತಿಯ ಗಿಡಮೂಲಿಕೆಯಾಗಿದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಸೋಂಕು ತಪ್ಪಿಸಲು ಕೊರೊನಾ(Omicron)ಅವಧಿಯಲ್ಲಿ ಇದು ಬಹಳ ಪ್ರಸಿದ್ಧವಾಗಿದೆ. ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಪ್ರಾರಂಭಿಸಿದರು. ಆದರೆ ಇದರ ಅತಿಯಾದ ಸೇವನೆಯು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.

ಇದನ್ನೂ ಓದಿ: ಪಪ್ಪಾಯಿಯ ಪ್ರಯೋಜನ ತಿಳಿದೇ ಇದೆ.. ಆದರೆ ಅದರಿಂದಾಗುವ ಅನಾರೋಗ್ಯದ ಅರಿವಿದೆಯೇ?

ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ

ಅಮೃತ ಬಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಅದರ ಎಲೆ(Giloy)ಗಳಿಂದ ಬೇರುಗಳವರೆಗೆ ಎಲ್ಲಾ ಭಾಗಗಳನ್ನು ಬಳಸಲಾಗುತ್ತದೆ. ಜನರು ಇದರ ಕಾಂಡದಿಂದ ರಸವನ್ನು ತೆಗೆದುಕೊಂಡು ಕುಡಿಯುತ್ತಾರೆ. ಗಿಡಮೂಲಿಕೆಗಳನ್ನು ಪುಡಿಮಾಡಿ ತಿನ್ನುತ್ತಾರೆ. ಆದರೆ ಇತ್ತೀಚೆಗೆ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಸೇರಿದಂತೆ 13 ವೈದ್ಯಕೀಯ ಕೇಂದ್ರಗಳಲ್ಲಿ ನಡೆಸಿದ ಅಧ್ಯಯನವು ಆಘಾತಕಾರಿ ಫಲಿತಾಂಶ ಬಹಿರಂಗಪಡಿಸಿದೆ. ಇದರಲ್ಲಿ ಲಿವರ್ ರಿಸರ್ಚ್ ಕ್ಲಬ್ ಆಫ್ ಇಂಡಿಯಾವು ದೀರ್ಘಕಾಲದವರೆಗೆ ಅಮೃತಬಳ್ಳಿ(Giloy Side Effects)ಯನ್ನು ಸೇವಿಸುವ ಜನರಿಗೆ ದೀರ್ಘಕಾಲದ ಯಕೃತ್ತಿನ ಕಾಯಿಲೆ ಅಥವಾ ಯಕೃತ್ತಿನ ವೈಫಲ್ಯದ ಸಮಸ್ಯೆ ಇರುವುದನ್ನು ಕಂಡುಕೊಂಡಿದೆ.

ವರದಿಗಳ ಪ್ರಕಾರ ಕೆಜಿಎಂಯುನ ಗ್ಯಾಸ್ಟ್ರೋಎಂಟರಾಲಜಿಯ ಸಹ ಪ್ರಾಧ್ಯಾಪಕ ಡಾ.ಅಜಯ್ ಕುಮಾರ್ ಪಟ್ವಾ, ‘ಶೇ.67.4ರಷ್ಟು ರೋಗಿಗಳಲ್ಲಿ ಯಕೃತ್ತಿನ ಸಮಸ್ಯೆಗಳಿಗೆ ಅಮೃತಬಳ್ಳಿ(Sideeffects Of Giloy)ಯೇ ಮುಖ್ಯ ಕಾರಣವಾಗಿದೆ. ಆದರೆ ಈ ಜನರಿಗೆ ಮಧುಮೇಹ, ಥೈರಾಯ್ಡ್, ಅಧಿಕ ರಕ್ತದೊತ್ತಡದಂತಹ ಯಾವುದೇ ಸಮಸ್ಯೆ ಇರಲಿಲ್ಲ’ವೆಂದು ತಿಳಿಸಿದ್ದಾರೆ.

ಇದನ್ನೂ ಓದಿ: Curd: ಮೊಸರಿನೊಂದಿಗೆ ಈ 6 ಪದಾರ್ಥಗಳನ್ನು ಎಂದಿಗೂ ಸೇವಿಸಬೇಡಿ

ಇಂತಹ ಪರಿಸ್ಥಿತಿಯಲ್ಲಿ ಅಮೃತಬಳ್ಳಿ(Giloy Benefits)ಯನ್ನು ಸೇವಿಸುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಅದೇ ರೀತಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇತರ ಪದಾರ್ಥಗಳನ್ನು ಸಹ ವೈದ್ಯರ ಸಲಹೆಯ ಮೇರೆಗೆ ಮತ್ತು ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕು. ಇಲ್ಲದಿದ್ದರೆ ನೀವು ಮುಂಬರುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. 

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News