Remedies To Get Rid Of Poverty: ನೀವೂ ಕೂಡ ನಿಮ್ಮ ಮನೆಗಳಲ್ಲಿ ಈ ಕೆಲಸ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ದೇವಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ

Remedies To Get Rid Of Poverty: ಜನರು ತಿಂಗಳೀಡಿ  ಕಷ್ಟಪಟ್ಟು ದುಡಿಯುತ್ತಾರೆ. ಇದರ ಹೊರತಾಗಿಯೂ, ಹಣ (Remedies to Remove Poverty) ಅವನ ಕೈಯಲ್ಲಿ ನಿಲ್ಲುವುದಿಲ್ಲ. ಇದಕ್ಕೆ ಕಾರಣ ಲಕ್ಷ್ಮಿ ದೇವಿಯ (Goddess Lakshmi) ಕೋಪ.

Written by - Nitin Tabib | Last Updated : Nov 20, 2021, 06:43 PM IST
  • ಪ್ರತಿದಿನ ತಡವಾಗಿ ಮಲಗುವುದು ಒಳ್ಳೆಯದಲ್ಲ
  • ಹಿರಿಯರನ್ನು ಅವಮಾನಿಸಬೇಡಿ
  • ಅಕ್ರಮವಾಗಿ ಗಳಿಸಿದ ಹಣ
Remedies To Get Rid Of Poverty: ನೀವೂ ಕೂಡ ನಿಮ್ಮ ಮನೆಗಳಲ್ಲಿ ಈ ಕೆಲಸ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ದೇವಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ title=
Remedies To Get Rid Of Poverty (File Photo)

ನವದೆಹಲಿ: Remedies To Get Rid Of Poverty - ಹಲವು ಜನರು ತಿಂಗಳೀಡಿ ಕಷ್ಟಪಟ್ಟು ದುಡಿದರು ಕೂಡ ಹಣವು (ಬಡತನವನ್ನು ತೊಡೆದುಹಾಕಲು ಪರಿಹಾರಗಳು) ಅವರ ಕೈಯಲ್ಲಿ ನಿಲ್ಲುವುದಿಲ್ಲ, ಜೊತೆಗೆ ಸಾಲದ ಹೊರೆಯೂ ಹೆಚ್ಚಾಗುತ್ತದೆ.

ಧಾರ್ಮಿಕ ಗ್ರಂಥಗಳ (Astrology) ಪ್ರಕಾರ, ವ್ಯಕ್ತಿಯ ಕರ್ಮಗಳೇ ಲಕ್ಷ್ಮಿ ದೇವಿಯ ಪ್ರಕೋಪಕ್ಕೆ ಕಾರಣ ಎನ್ನಲಾಗುತ್ತದೆ. ವ್ಯಕ್ತಿಯೂ ತನ್ನ ತಪ್ಪು ಕಾರ್ಯಗಳನ್ನು ತೊಡೆದುಹಾಕದಿದ್ದರೆ, ಅವನ ಮನೆಯಲ್ಲಿ ಬಡತನವು (Poverty) ನೆಲೆಸಲು ಪ್ರಾರಂಭಿಸುತ್ತದೆ. ಅಲ್ಲದೆ ವ್ಯಕ್ತಿಯ ಕುಟುಂಬವು ಬಡತನವನ್ನು ತೊಡೆದುಹಾಕಲು ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಇಂದು ನಾವು ನಿಮಗೆ ಕೆಲ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಆ ಕೆಲಸಗಳನ್ನು ಮನೆಯಲ್ಲಿ ಅಪ್ಪಿ-ತಪ್ಪಿಯೂ ಕೂಡ ಮಾಡಬೇಡಿ.

ಪ್ರತಿದಿನ ತಡವಾಗಿ ಮಲಗುವುದು ಒಳ್ಳೆಯದಲ್ಲ
ಸನಾತನ ಧರ್ಮದಲ್ಲಿ (Sanatana Dharma) ರಾತ್ರಿ ಬೇಗ ಮಲಗುವುದು ಮತ್ತು ಮುಂಜಾನೆ ಎದ್ದೇಳುವುದು ಉತ್ತಮ ಎಂದು ಹೇಳಲಾಗುತ್ತದೆ. ದೀರ್ಘಕಾಲದವರೆಗೆ ಮಲಗುವುದರಿಂದ, ವ್ಯಕ್ತಿಯ ದೈನಂದಿನ ದಿನಚರಿಯು ತೊಂದರೆಗೊಳಗಾಗುತ್ತದೆ, ಅದು ಅವನ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಜನರು ಜೀವನದಲ್ಲಿ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅಶಾಂತಿಯು ಅವನ  ಮನೆಯಲ್ಲಿ ಶಾಶ್ವತ ಸ್ಥಾನವನ್ನು ಪಡೆಯುತ್ತದೆ.

ಹಿರಿಯರನ್ನು ಅವಮಾನಿಸಬೇಡಿ
ಕುಟುಂಬದ ಹಿರಿಯರು ಯಾವುದೇ ಮನೆಯ ನಿಜವಾದ ಅಡಿಪಾಯ. ಹಿರಿಯರನ್ನು ಗೌರವಿಸದ ಮನೆಗಳಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನಿಲ್ಲುವುದಿಲ್ಲ. ಆದುದರಿಂದ, ನಿಮ್ಮ ಹಿರಿಯರನ್ನು ಮರೆಗೂ ಕೂಡ ಅಗೌರವಿಸಬೇಡಿ ಮತ್ತು ಸಾಧ್ಯವಾದಷ್ಟು ಅವರಿಗೆ ಸೇವೆ ಮಾಡಲು ಪ್ರಯತ್ನಿಸಿ.  ನಿಮ್ಮಿಂದಾಗಿ ಅವರ ಕಣ್ಣಿನಿಂದ ಬರುವ ಒಂದೇ ಒಂದು ಕಣ್ಣೀರಿನ ಹನಿ ನಿಮ್ಮ ಬಡತನಕ್ಕೆ ಕಾರಣವಾಗಬಹುದು ಎಂಬುದನ್ನು ನೆನಪಿಡಿ.

ಅಕ್ರಮವಾಗಿ ಗಳಿಸಿದ ಹಣ
ಕಡಿಮೆ ಸಮಯದಲ್ಲಿ ಶ್ರೀಮಂತರಾಗಲು, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಪ್ಪು ಚಟುವಟಿಕೆಗಳಿಂದ ಹಣವನ್ನು ಗಳಿಸುವಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಅವರುಬಡವರಿಗೆ ಕಿರುಕುಳ ನೀಡಿ ಅವರ ಶೋಷಣೆ ಮಾಡಲು ಕೂಡ ಹಿಂಜರಿಯುವುದಿಲ್ಲ.  ಆದರೆ, ಅದು ಅನೈತಿಕ ಮತ್ತು ತಪ್ಪಾಗಿ ಗಳಿಸಿದ ಹಣ. ಅಂತಹ ಹಣವು ಶೀಘ್ರದಲ್ಲೇ ವ್ಯರ್ಥವಾಗುತ್ತದೆ. ಆದ್ದರಿಂದ, ಇಂತಹ ತಪ್ಪು ಕೆಲಸಗಳ ಬಲೆಗೆ ಬೀಳುವ ಬದಲು, ನಿಮ್ಮ ಕಠಿಣ ಪರಿಶ್ರಮ ಮುಂದುವರೆಸಿ,  ಪ್ರಾಮಾಣಿಕವಾಗಿ ಹಣ ಗಳಿಕೆ ಮಾಡಿ. ಅದು ನಿಮ್ಮ ಬಳಿ ಶಾಶ್ವತ ಉಳಿಯುತ್ತದೆ. 

ಇದನ್ನೂ ಓದಿ-

ನಿರ್ಗತಿಕರನ್ನು ಎಂದಿಗೂ ಅಗೌರವ ಮಾಡಬೇಡಿ
ಸನಾತನ ಸಂಸ್ಕೃತಿಯಲ್ಲಿ, ದಾನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ಹೇಳಲಾಗಿದೆ. ತೀಜ್-ಹಬ್ಬಗಳಂದು ಮಾತ್ರವಲ್ಲದೆ ಕಾಲಕಾಲಕ್ಕೆ ಅಗತ್ಯವಿರುವವರಿಗೆ ದಾನ ಮಾಡುವ ಪ್ರಾಚೀನ ಸಂಪ್ರದಾಯವು ದೇಶದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ನಿರ್ಗತಿಕ ಅಥವಾ ಭಿಕ್ಷುಕನು ನಿಮ್ಮಿಂದ ಯಾವುದೇ ಸಹಾಯವನ್ನು ಕೇಳಿದರೆ, ಖಂಡಿತವಾಗಿಯೂ ಅವನಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಿ. ನೀವು ಸಹಾಯ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಕನಿಷ್ಠ ಅವನನ್ನು ಅಗೌರವಗೊಳಿಸಬೇಡಿ. ಯಾವುದೇ ನಿರ್ಗತಿಕರೊಂದಿಗೆ ಅನುಚಿತವಾಗಿ ವರ್ತಿಸುವುದರಿಂದ ದೇವರು ಕೋಪಗೊಳ್ಳುತ್ತಾನೆ ಮತ್ತು ತಾಯಿ ಲಕ್ಷ್ಮಿ ಕೂಡ ಅಂತಹ ಸೊಕ್ಕಿನವರ ಮನೆಯನ್ನು ತೊರೆಯುತ್ತಾಳೆ.

ಇದನ್ನೂ ಓದಿ-Surya Grahan 2021: ಈ ದಿನ ಸಂಭವಿಸಲಿದೆ ವರ್ಷದ ಕೊನೆಯ ಸೂರ್ಯಗ್ರಹಣ, ತಿಳಿಯಿರಿ ಯಾರ ಮೇಲೆ ಯಾವ ಪರಿಣಾಮ ?

ಕುಟುಂಬದಲ್ಲಿ ನಿಂದನೀಯ ಪದಗಳನ್ನು ಬಳಸುವುದನ್ನು ತಪ್ಪಿಸಿ
ಪತಿ-ಪತ್ನಿ ಬಂಡಿಯ ಎರಡು ಚಕ್ರಗಳಾಗಿದ್ದು, ಜೀವನದುದ್ದಕ್ಕೂ ಪರಸ್ಪರ ಸಮತೋಲನ ಕಾಯ್ದುಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಇಂತಹ ಪರಿಸ್ಥಿತಿಯಲ್ಲಿ ಪತಿ-ಪತ್ನಿಯರ ನಡುವೆ ಸದಾ ಜಗಳ ನಡೆಯುತ್ತಿದ್ದರೆ ಮತ್ತು ಅವರು ಪರಸ್ಪರ ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದರೆ, ಅವರ ಮನೆಯಲ್ಲಿ ಬಡತನ ಬರಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಕುಟುಂಬ ಸದಸ್ಯರು ಪರಸ್ಪರ ಜಗಳವಾಡುವ ಮನೆಗಳಲ್ಲಿ ತಾಯಿ ಲಕ್ಷ್ಮಿ ಎಂದಿಗೂ ವಾಸಿಸುವುದಿಲ್ಲ. ಹೀಗಿರುವಾಗ ನೀವು ಲಕ್ಷ್ಮಿ ದೇವಿಯನ್ನು ಸಂತೋಷವಾಗಿರಿಸಲು ಬಯಸಿದರೆ, ಮನೆಯಲ್ಲಿ ಯಾರಿಗೂ ಅವಹೇಳನಕಾರಿ ಪದಗಳನ್ನು ಬಳಸಬೇಡಿ.

ಇದನ್ನೂ ಓದಿ-Home Vastu Tips : ನಿಮ್ಮ ಮನೆಯಲ್ಲಿಯೂ ಈ ತಪ್ಪುಗಳಾಗುತ್ತಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ, ಇಲ್ಲವಾದರೆ ನಿಲ್ಲುವುದೇ ಇಲ್ಲ ಆರ್ಥಿಕ ಸಂಕಷ್ಟ
 
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಆರಂಭಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ)

ಇದನ್ನೂ ಓದಿ-Chandra Grahan 2021: ಚಂದ್ರಗ್ರಹಣದ ಪರಿಣಾಮ 15 ದಿನ ಇರುತ್ತದೆ, ಈ 6 ರಾಶಿಯವರು ಜಾಗರೂಕರಾಗಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News