Kitchen Hacks: ಈ ರೀತಿ ಮಾಡಿದ್ರೆ ನಿಮ್ಮ ಮಸಾಲೆ ಪದಾರ್ಥಗಳು ವರ್ಷಗಳವರೆಗೆ ಹಾಳಾಗುವುದೇ ಇಲ್ಲ!

ಮಳೆಗಾಲದಲ್ಲಿ ಅನೇಕ ಮಸಾಲೆ ಪದಾರ್ಥಗಳು ಹಾಳಾಗಲು ಪ್ರಾರಂಭಿಸುತ್ತವೆ. ಹೀಗಾಗಿ ದೀರ್ಘಕಾಲದವರೆಗೆ ಮಸಾಲೆಗಳನ್ನು ಹೇಗೆ ಬಳಸಬೇಕು ಅನ್ನೋದನ್ನು ತಿಳಿದುಕೊಳ್ಳುವುದು ಮುಖ್ಯ.     

Written by - Puttaraj K Alur | Last Updated : Oct 10, 2022, 03:49 PM IST
  • ಮಸಾಲೆ ಪದಾರ್ಥಗಳನ್ನು ದೀರ್ಘಕಾಲದವರೆಗೆ ಹೇಗೆ ಬಳಸಬೇಕು..?
  • Expiry Dateಗಿಂತ ಮುಂಚಿತವಾಗಿಯೇ ಮಸಾಲೆ ಬಳಸುವುದು ಸೂಕ್ತ
  • ಮಸಾಲೆ ಪದಾರ್ಥಗಳಿಂದ ವಾಸನೆ ಮತ್ತು ಹುಳು ಕಂಡುಬಂದರೆ ಬಳಸಬೇಡಿ
Kitchen Hacks: ಈ ರೀತಿ ಮಾಡಿದ್ರೆ ನಿಮ್ಮ ಮಸಾಲೆ ಪದಾರ್ಥಗಳು ವರ್ಷಗಳವರೆಗೆ ಹಾಳಾಗುವುದೇ ಇಲ್ಲ! title=
ದೀರ್ಘಕಾಲ ಮಸಾಲೆ ಬಳಸುವುದು ಹೇಗೆ?

ನವದೆಹಲಿ: ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಮಸಾಲೆ ಪದಾರ್ಥಗಳಿರುತ್ತವೆ. ಮಸಾಲೆಗಳಿಲ್ಲದ ಅಡುಗೆ ಮನೆಯೇ ಇಲ್ಲ. ರುಚಿ ರುಚಿಯಾದ ಆಹಾರ ತಯಾರಿಸಲು ಮಸಾಲೆ ಪಾರ್ಥಗಳು ಬೇಕೇ ಬೇಕು. ಹೀಗಾಗಿ ಅಡುಗೆ ಮನೆಯಲ್ಲಿ ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಸಂಗ್ರಹಿಸಿ ಇಡಲಾಗುತ್ತದೆ.

ಮಸಾಲೆ ಪದಾರ್ಥಗಳನ್ನು ದೀರ್ಘಕಾಲದವರೆಗೆ ಹೇಗೆ ಬಳಸಬೇಕು ಅನ್ನೋದು ಬಹುತೇಕರ ಪ್ರಶ್ನೆಯಾಗಿರುತ್ತದೆ. ಅಡುಗೆ ಮಾಡಲು ಬಳಸುವ ಈ ಮಸಾಲೆಗಳು ಬೇಗನೆ ಹಾಳಾಗುತ್ತಿರುತ್ತವೆ. ಕೆಲವು ಮಸಾಲೆಗಳ ಪ್ಯಾಕೆಟ್‌ ಮೇಲೆ ಎಷ್ಟು ದಿನಗಳವರೆಗೆ ಬಳಸಬಹುದು ಅನ್ನೋ ಮಾಹಿತಿ ನೀಡಿರುತ್ತಾರೆ. ಮಸಾಲೆಗಳು ದೀರ್ಘಕಾಲದವರೆ ಇಟ್ಟರೂ ಕೆಡುವುದಿಲ್ಲ. ಅವುಗಳನ್ನು ಸೂಕ್ತ ರೀತಿಯಲ್ಲಿ ಇಟ್ಟು ಬಳಸಿದರೆ ವರ್ಷಗಳವರೆಗೆ ಉಪಯೋಗಕ್ಕೆ ಬರುತ್ತವೆ. ಹೌದು, ಮಸಾಲೆಗಳನ್ನು ಸರಿಯಾಗಿ ಇಡದಿದ್ದರೆ ಹವಾಮಾನದಿಂದ ಅವು ಖಂಡಿತ ಹಾಳಾಗುತ್ತವೆ. ಇದಕ್ಕಾಗಿಯೇ ನಾವು ನಿಮಗೆ ಕೆಲವು ಸಲಹೆಗಳನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.

ಇದನ್ನೂ ಓದಿ: Gemology: ಧರಿಸಿದ ಕೇವಲ 30 ದಿನದಲ್ಲಿ ನಿಮ್ಮ ಅದೃಷ್ಟ ಬದಲಿಸುವ ರತ್ನವಿದು.!    

ಪ್ಯಾಕ್ ಮಾಡಿದ ಮಸಾಲೆಗಳನ್ನು ಎಷ್ಟು ದಿನ ಬಳಸಬೇಕು?

ಮಾರುಕಟ್ಟೆಯಿಂದ ಖರೀದಿಸಿದ ಮಸಾಲೆಗಳನ್ನು Expiry Dateಗಿಂತ ಮೊದಲೇ ಬಳಸುವುದು ಹೆಚ್ಚು ಸೂಕ್ತ. ಏಕೆಂದರೆ ಇದರ ನಂತರ ಈ ಮಸಾಲೆಗಳು ನಿಮ್ಮ ಅಡುಗೆಗೆ ರುಚಿಯಾಗುವುದಿಲ್ಲ. Expiry Date ಮುಗಿದ ಬಳಿಕ ಅವುಗಳ ಗುಣಮಟ್ಟವೂ ಹಾಳಾಗುತ್ತದೆ. ಅದೇ ರೀತಿ ಉತ್ಪನ್ನದ ಬಣ್ಣ ಸಹ ಬದಲಾಗುವುದನ್ನು ನೀವು ಗಮನಿಸಬೇಕು.

ಇಂತಹ ಮಸಾಲೆ ಪದಾರ್ಥ ಬಳಸಬೇಡಿ

ಮಸಾಲೆ ಪದಾರ್ಥಗಳಿಂದ ವಿಭಿನ್ನ ರೀತಿಯ ವಾಸನೆ ಬರುತ್ತಿದೆ ಎಂದು ನಿಮಗೆ ಅನಿಸಿದಾಗ ಅಥವಾ ಅದರಲ್ಲಿ ಕೀಟಗಳು ಕಂಡುಬಂದ ಬಳಿಕ ಅವುಗಳನ್ನು ಬಳಸಲೇಬಾರದು. ಈ ರೀತಿ ಆದರೆ ಆ ಮಸಾಲೆ ಹಾಳಾಗಿದೆ ಎಂದರ್ಥ. ಹೀಗಾಗಿ ನೀವು ಆ ಮಸಾಲೆಯನ್ನು ಎಸೆಯುವುದು ಸೂಕ್ತ.      

ಈ ರೀತಿ ಸಂಗ್ರಹಿಸಿಡಿ

ಮಸಾಲೆಯ ಗುಣಮಟ್ಟ ಹಾಳಾಗಬಾರದು ಎಂದರೆ ಅದರ ಪ್ಯಾಕೆಟ್‍ನಲ್ಲಿಯೇ ಇಡುವುದು ಸೂಕ್ತ. ಕತ್ತರಿಸಿದ ಪ್ಯಾಕೆಟ್‍ನೊಳಗೆ ಗಾಳಿ ಹೋಗದ ಹಾಗೆ ಮುಚ್ಚಿಡುವುದರಿಂದ ಮಸಾಲೆ ಕೆಡುವುದಿಲ್ಲ.

ದೊಡ್ಡ ಪ್ರಮಾಣದಲ್ಲಿ ಖರೀದಿಸಬೇಡಿ

ಮಸಾಲೆಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಬಾರದು. ಏಕೆಂದರೆ ಅವುಗಳನ್ನು ಸಂಗ್ರಹಿಸಿ ಇಡುವ ಸಮಸ್ಯೆ ಬರುತ್ತದೆ. ನೀವು ಕಡಿಮೆ ಪ್ರಮಾಣದಲ್ಲಿ ಮಸಾಲೆಗಳನ್ನು ಖರೀದಿಸಿದರೆ ಅವುಗಳ ತಾಜಾತನ ಉಳಿಯುತ್ತದೆ.

ಇದನ್ನೂ ಓದಿ: ಪಪ್ಪಾಯ ಹಣ್ಣಿನ ಸೇವನೆಯಿಂದ ಪಡೆಯಿರಿ ಸರ್ವರೋಗಕ್ಕೆ ಮುಕ್ತಿ

ಗಾಳಿ ಬಿಗಿಯಾದ ಜಾರ್ ಬಳಸಿ

ನೀವು ಪ್ಯಾಕೆಟ್ ಕತ್ತರಿಸಿದ್ದರೆ ಅವುಗಳನ್ನು ಗಾಳಿಯಾಡದ ಜಾರ್‌ನಲ್ಲಿ ಸಂಗ್ರಹಿಸಿ ಇಡುವುದು ಸೂಕ್ತ. ಮಸಾಲೆ ಪದಾರ್ಥಗಳು ಗಾಳಿಯ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ನೀವು ಅವುಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಈ ಸ್ಥಳಗಳಲ್ಲಿ ಪೆಟ್ಟಿಗೆ ಇರಿಸಿ

ಮಸಾಲೆಗಳನ್ನು ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಇಡಬೇಕು. ಆದ್ದರಿಂದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮಸಾಲೆಗಳ ಬಣ್ಣವು ಮಸುಕಾಗುವುದಿಲ್ಲ. ಈ ಸರಳ ಸಲಹೆಗಳನ್ನು ಪಾಲಿಸುವ ಮೂಲಕ ನೀವು ದೀರ್ಘಕಾಲದವರೆಗೆ ಮಸಾಲೆಗಳನ್ನು ಬಳಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News