Surya Grahan: ವರ್ಷದ ಮೊದಲ ಗ್ರಹಣದಿಂದ ಈ ರಾಶಿಯವರ ಮೇಲೆ ಅಶುಭ ಪರಿಣಾಮ!

ಸೂರ್ಯಗ್ರಹಣ 2023: ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಇದನ್ನು ಒಂದು ದೊಡ್ಡ ಘಟನೆ ಎಂದು ಪರಿಗಣಿಸಲಾಗಿದೆ. ಕೆಲವು ರಾಶಿಗಳ ಜನರು ಸೂರ್ಯಗ್ರಹಣದ ಸಮಯದಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು.  

Written by - Puttaraj K Alur | Last Updated : Mar 6, 2023, 10:16 PM IST
  • ಮೇಷ ರಾಶಿಯವರಿಗೆ ಸಂಕಷ್ಟದ ಕಾಲ ಬರಲಿದ್ದು, ವೃತ್ತಿಜೀವನದ ಮೇಲೆ ವ್ಯತಿರಿಕ್ತ ಪರಿಣಾಮ
  • ಸೂರ್ಯಗ್ರಹಣದ ಸಮಯದಲ್ಲಿ ಸಿಂಹ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ
  • ಸೂರ್ಯಗ್ರಹಣದಿಂದ ಕನ್ಯಾ ರಾಶಿಯವರ ಮಾನಸಿಕ ಒತ್ತಡ ಮತ್ತು ನೋವು ಹೆಚ್ಚುತ್ತದೆ
Surya Grahan: ವರ್ಷದ ಮೊದಲ ಗ್ರಹಣದಿಂದ ಈ ರಾಶಿಯವರ ಮೇಲೆ ಅಶುಭ ಪರಿಣಾಮ!     title=
ಸೂರ್ಯಗ್ರಹಣ 2023

ನವದೆಹಲಿ: 2023ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20ರಂದು ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಗ್ರಹಣವನ್ನು ಒಂದು ಪ್ರಮುಖ ಘಟನೆ ಎಂದು ಪರಿಗಣಿಸಲಾಗುತ್ತದೆ. ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯಗ್ರಹಣದ ಸಂಭವವು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಇದು ಮಂಗಳಕರವಾಗಿದ್ದರೆ, ಇತರರಿಗೆ ಈ ಗ್ರಹಣವು ಅಶುಭವಾಗಿರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಪ್ರಿಲ್ 20ರಂದು ಸೂರ್ಯಗ್ರಹಣವು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಫಿಲಿಪೈನ್ಸ್ ಮತ್ತು ಪೆಸಿಫಿಕ್ ಮಹಾಸಾಗರದ ಕಡೆಗೆ ಮಾತ್ರ ಗೋಚರಿಸುತ್ತದೆ. ಈ ಗ್ರಹಣ ಭಾರತದಲ್ಲಿ ಮಾನ್ಯವಾಗಿಲ್ಲ. ಆದರೆ ಅದರ ಪರಿಣಾಮವು ಅನೇಕ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಗ್ರಹಣವು ಬೆಳಗ್ಗೆ 7.04ಕ್ಕೆ ಪ್ರಾರಂಭವಾಗಿ 12.29ರವರೆಗೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣವು ಸೂರ್ಯ, ಮೇಷ ರಾಶಿಯ ಉಚ್ಚ ರಾಶಿಯಲ್ಲಿ ಸಂಭವಿಸಲಿದೆ. ಈ ಕಾರಣದಿಂದ ಮೇಷ ಸೇರಿದಂತೆ ಅನೇಕ ರಾಶಿಗಳಿಗೆ ಸಮಸ್ಯೆಗಳು ಹೆಚ್ಚಾಗುತ್ತವೆ.  

ಇದನ್ನೂ ಓದಿ: ಹೋಳಿ ಹಬ್ಬದಂದು ʼಕೆಮಿಕಲ್‌ ಮಿಶ್ರಿತ ಬಣ್ಣʼದಿಂದ ತ್ವಚೆ ರಕ್ಷಣೆ ಹೇಗೆ..! ಇಲ್ಲಿವೇ ನೋಡಿ ಟಿಪ್ಸ್‌

ಸೂರ್ಯಗ್ರಹಣದಿಂದ ಈ ರಾಶಿಯವರ ಮೇಲೆ ಪರಿಣಾಮ

ಮೇಷ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಸೂರ್ಯನು ಮೇಷ ರಾಶಿಯಲ್ಲಿರುತ್ತಾನೆ. ಇದು ಸೂರ್ಯನ ಶ್ರೇಷ್ಠ ಚಿಹ್ನೆ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯವರಿಗೆ ಈ ಬಾರಿ ಸಂಕಷ್ಟದ ಕಾಲ ಬರಲಿದೆ. ಇದು ಅವರ ವೃತ್ತಿಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೌಟುಂಬಿಕ ಶಾಂತಿ ಕದಡಬಹುದು. ಅಷ್ಟೇ ಅಲ್ಲ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಈ ರಾಶಿಯ ಜನರಿಗೆ ಈ ಸಮಯವು ತುಂಬಾ ಸಂಕಷ್ಟವನ್ನು ತರುತ್ತದೆ. ಗುರುವು ಮೇಷ ರಾಶಿಯನ್ನು ಪ್ರವೇಶಿಸುವುದಿಲ್ಲ.

ಸಿಂಹ ರಾಶಿ: ಈ ರಾಶಿಯ ಅಧಿಪತಿಯೂ ಸೂರ್ಯನೇ. ಅದಕ್ಕಾಗಿಯೇ ಸೂರ್ಯಗ್ರಹಣದ ಸಮಯದಲ್ಲಿ ಈ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವೃತ್ತಿಯಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನದಿಂದ ತಮ್ಮ ಮನಸ್ಸನ್ನು ವಿಚಲಿತಗೊಳಿಸುತ್ತಾರೆ. ಅದೇ ರೀತಿ ಪ್ರೀತಿಯಲ್ಲಿ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ. ಆರಂಭದಲ್ಲಿ ಹೆಚ್ಚಿನ ತೊಂದರೆಗಳಿದ್ದರೂ ಕ್ರಮೇಣ ಪರಿಸ್ಥಿತಿ ಸುಧಾರಿಸಲಿದೆ.

ಇದನ್ನೂ ಓದಿ:  Astro Tips: ಸೂರ್ಯ-ಗುರು ಮೈತ್ರಿಯಿಂದ ಈ 3 ರಾಶಿಯವರು 8 ದಿನಗಳ ಶ್ರೀಮಂತರಾಗುತ್ತಾರೆ!

ಕನ್ಯಾ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ 8ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಇದು ಮಾನಸಿಕ ಒತ್ತಡ ಮತ್ತು ನೋವನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಕೋಪಗೊಳ್ಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟವಾಗಬಹುದು. ಯಾರಿಗಾದರೂ ಏನಾದರೂ ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಯೋಚಿಸದೆ ಮಾಡುವ ಕೆಲಸಗಳು ತೊಂದರೆಯನ್ನುಂಟು ಮಾಡಬಹುದು. ಈ ಅವಧಿಯಲ್ಲಿ ನಷ್ಟವೂ ಸಂಭವಿಸಬಹುದು. ನಿಮ್ಮ ಪ್ರೀತಿ-ಪಾತ್ರರ ಬಗ್ಗೆ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಭಾರೀ ನಷ್ಟ ಅನುಭವಿಸಬೇಕಾಗಬಹುದು.

ಮಕರ ರಾಶಿ: ಈ ರಾಶಿಯ 4ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಇದರಿಂದ ನಿಮ್ಮ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಳೆಯ ವಾಹನವು ನಿಮ್ಮ ಖರ್ಚುಗಳನ್ನು ಹೆಚ್ಚಿಸುತ್ತದೆ, ಆದ್ದರಿಂದ ಎಚ್ಚರಿಕೆಯಿಂದಿರಿ. ಆರೋಗ್ಯ ಕೆಡುತ್ತದೆ, ಸ್ವಲ್ಪ ಜಾಗ್ರತೆವಹಿಸುವುದು ಉತ್ತಮ. ಹೊರಗಡೆ ತಿನ್ನುವುದನ್ನು ತಪ್ಪಿಸಿ. ಖಾಯಿಲೆಗಳಿಂದ ಖರ್ಚು ಅಧಿಕವಾಗಬಹುದು, ಇದು ಆರ್ಥಿಕ ಮುಗ್ಗಟ್ಟು ಉಂಟುಮಾಡುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News