ಸ್ಪ್ಲಿಟ್ ಹೇರ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಎಣ್ಣೆಗಳನ್ನು ಒಮ್ಮೆ ಟ್ರೈ ಮಾಡಿ

Split Hair Remedies: ಕೂದಲ ತುದಿ ಒಡೆದಿದೆಯೇ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೆಲವು ಎಣ್ಣೆಗಳನ್ನು ಬಳಸಿ ಕೂದಲಿನ ಆರೈಕೆ ಮಾಡುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

Written by - Yashaswini V | Last Updated : Apr 5, 2024, 02:30 PM IST
  • ನೀವು ಕೂದಲು ಒಡೆಯುವಿಕೆಯಿಂದ ಕಂಗಾಲಾಗಿದ್ದೀರಾ..!
  • ಸ್ಪ್ಲಿಟ್ ಹೇರ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೆಲವು ಎಣ್ಣೆಗಳು ಪ್ರಯೋಜನಕಾರಿ
  • ಆ ಎಣ್ಣೆಗಳು ಯಾವುವೆಂದರೆ...
ಸ್ಪ್ಲಿಟ್ ಹೇರ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಎಣ್ಣೆಗಳನ್ನು ಒಮ್ಮೆ ಟ್ರೈ ಮಾಡಿ  title=

Split Hair Remedies: ಸುಂದರ, ಆಕರ್ಷಕ ಕೂದಲನ್ನು ಪಡೆಯುವುದು ಪ್ರತಿಯೊಬ್ಬರ ಸಾಮಾನ್ಯ ಬಯಕೆ ಆಗಿರುತ್ತದೆ. ಅದರಲ್ಲೂ ಮಹಿಳೆಯರಿಗೆ ದಪ್ಪ, ಬಲವಾದ ಸುಂದರವಾದ, ಹೊಳೆಯುವ ಕೂದಲನ್ನು ಪಡೆಯುವ ಆಸೆ ಇದ್ದೇ ಇರುತ್ತದೆ. ಆದರೆ, ಕಳಪೆ ಜೀವನ ಶೈಲಿ ಹಾಗೂ ಸರಿಯಾದ ಆರೈಕೆಯಿಲ್ಲದೆ ಕೂದಲು ಒಡೆಯುವುದು ಸಾಮಾನ್ಯ ಸಂಗತಿ. ಆದಾಗ್ಯೂ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತೈಲಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. 

ಸ್ಪ್ಲಿಟ್ ಹೇರ್ ಸಮಸ್ಯೆಯಿಂದ (Split Hair Problem) ಮುಕ್ತಿ ಪಡೆಯಲು ಕೆಲವು ಎಣ್ಣೆಗಳು ಪ್ರಯೋಜನಕಾರಿ ಆಗಿವೆ. ನೀವು ಕೂದಲು ಒಡೆಯುವಿಕೆಯಿಂದ ಕಂಗಾಲಾಗಿದ್ದರೆ ಈ ಎಣ್ಣೆಗಳನ್ನು ಒಮ್ಮೆ ಟ್ರೈ ಮಾಡುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

ಕೊಬ್ಬರಿಎಣ್ಣೆ: 
ಕೊಬ್ಬರಿ ಎಣ್ಣೆಯು ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಹೈಡ್ರೀಕರಿಸುತ್ತದೆ. ಇದು ಕೂದಲನ್ನು ಧೂಳು ಮತ್ತು ಮಾಲಿನ್ಯದಿಂದ ರಕ್ಷಿಸುತ್ತದೆ. ವಾರಕ್ಕೆರಡು ಬಾರಿ ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಅಪ್ಪ್ಲೈ ಮಾಡುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- ಅಲೋವೆರಾ ಫೇಸ್ ಪ್ಯಾಕ್ಸ್ ಬಳಸಿ ಚರ್ಮದ ಈ ಸಮಸ್ಯೆಗಳಿಗೆ ಹೇಳಿ ಗುಡ್ ಬೈ

ಬಾದಾಮಿ ಎಣ್ಣೆ: 
ಬಾದಾಮಿ ಎಣ್ಣೆಯಲ್ಲಿ (Badami Oil) ವಿಟಮಿನ್ ಇ ಮತ್ತು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಬಾದಾಮಿ ಎಣ್ಣೆಯು  ಸ್ಪ್ಲಿಟ್ ಹೇರ್ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಆಗಿದೆ. 

ಆವಕಾಡೊ ಎಣ್ಣೆ: 
ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆವಕಾಡೊ ಎಣ್ಣೆ ಕೂದಲನ್ನು ಬಳಪಡಿಸುತ್ತದೆ. ಇದಲ್ಲದೆ, ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಹೇರಳವಾಗಿದೆ. ಹಾಗಾಗಿ, ಆವಕಾಡೊ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ, ಹಾನಿಗೊಳಗಾದ ಕೂದಲನ್ನು ಸರಿಪಡಿಸಬಹುದು. 

ಆಲಿವ್ ಎಣ್ಣೆ: 
ರಕ್ಷಣಾತ್ಮಕ ಮತ್ತು ಆರ್ಧ್ರಕ ಗುಣಗಳನ್ನು ಹೊಂದಿರುವ ಆಲಿವ್ ಎಣ್ಣೆ ಕೂದಲನ್ನು ಮೃದುಗೊಳಿಸುತ್ತದೆ ಮತ್ತು ಕ್ಯಾರೋಟಿನ್ ಅನ್ನು ಒದಗಿಸುತ್ತದೆ. ಆಲಿವ್ ಎಣ್ಣೆಯೊಂದಿಗೆ ನಿಂಬೆರಸ ಬೆರೆಸಿ ಹಚ್ಚುವುದರಿಂದ ಒಡೆದ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- Weight Loss Tips: ತೂಕ ಇಳಿಕೆಗೆ ವರದಾನ ಈ ಹಣ್ಣು.. ಆದರೆ ಹೀಗೆ ತಿನ್ನಿ!!

ಮೀನಿನ ಎಣ್ಣೆ: 
ಮೀನಿನ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಕೂದಲನ್ನು ಆಳವಾಗಿ ಪೋಷಿಸುತ್ತದೆ. ಕೂದಲಿಗೆ ನಿಯಮಿತವಾಗಿ ಈ ಎಣ್ಣೆಯನ್ನು ಹಚ್ಚುವುದರಿಂದ 
ಸ್ಪ್ಲಿಟ್ ಹೇರ್ ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News