ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ಆರ್ಥಿಕ ಮತ್ತು ವೈವಾಹಿಕ ಜೀವನದಲ್ಲಿ ಎದುರಾಗುತ್ತದೆ ತೊಂದರೆ, ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು ಹೇಗೆ ?

ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಶುಕ್ರನನ್ನು ಐಶ್ವರ್ಯ, ವೈವಾಹಿಕ ಜೀವನ, ಸಂತೋಷ ಮತ್ತು ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. 

Written by - Zee Kannada News Desk | Last Updated : Feb 11, 2022, 01:09 PM IST
  • ದುರ್ಬಲ ಶುಕ್ರನು ಹಣಕಾಸಿನ ತೊಂದರೆಯನ್ನು ಉಂಟುಮಾಡುತ್ತದೆ
  • ದುರ್ಬಲ ಶುಕ್ರನು ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತಾನೆ
  • ಶುಕ್ರನ ದುರ್ಬಲನಾಗಿದ್ದರೆ ಗೌರವ ಇಳಿಕೆಯಾಗುತ್ತದೆ
ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ಆರ್ಥಿಕ ಮತ್ತು ವೈವಾಹಿಕ ಜೀವನದಲ್ಲಿ ಎದುರಾಗುತ್ತದೆ ತೊಂದರೆ,  ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು ಹೇಗೆ ?   title=
ದುರ್ಬಲ ಶುಕ್ರನು ಹಣಕಾಸಿನ ತೊಂದರೆಯನ್ನು ಉಂಟುಮಾಡುತ್ತದೆ (file photo)

ನವದೆಹಲಿ : ಜ್ಯೋತಿಷ್ಯದಲ್ಲಿ (Astrology) ಶುಕ್ರನಿಗೆ ವಿಶೇಷ ಸ್ಥಾನವಿದೆ. ಶುಕ್ರನನ್ನು ಐಶ್ವರ್ಯ, ವೈವಾಹಿಕ ಜೀವನ, ಸಂತೋಷ ಮತ್ತು ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಶುಕ್ರನು (Venus) ಬಲಶಾಲಿಯಾಗಿದ್ದರೆ, ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನುಕರುಣಿಸುತ್ತಾನೆ.   ಮತ್ತೊಂದೆಡೆ, ಜಾತಕದಲ್ಲಿ ಶುಕ್ರನು ದುರ್ಬಲನಾಗಿದ್ದರೆ, ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಜಾತಕದಲ್ಲಿ ದುರ್ಬಲ ಶುಕ್ರನ ಚಿಹ್ನೆಗಳು :
ನಿರಂತರವಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದ್ದರೆ, ಇದು ಜಾತಕದಲ್ಲಿ ಶುಕ್ರನು (Venus) ದುರ್ಬಲವಾಗಿರುವುದರ ಸಂಕೇತವಾಗಿರುತ್ತದೆ. ಏನೇ ಮಾಡಿದರು ಕೈಯಲ್ಲಿ ಹಣ ಉಳಿಯದಿದ್ದರೆ, ಅದು ದುರ್ಬಲ ಶುಕ್ರನ ಲಕ್ಷಣವಾಗಿರುತ್ತದೆ. ಶುಕ್ರ ದುರ್ಬಲನಾಗಿದ್ದರೆ, ವೈವಾಹಿಕ ಜೀವನದಲ್ಲಿ (Married life) ಸಮಸ್ಯೆಗಳು ಎದುರಾಗುತ್ತವೆ. 

ಇದನ್ನೂ ಓದಿ : Mantra To Get Money: ಸಂಪತ್ತು ಪ್ರಾಪ್ತಿಗಾಗಿ ಈ ಪವರ್ ಫುಲ್ ಮಂತ್ರ ಜಪಿಸಿ

ಜಾತಕದಲ್ಲಿ ಶುಕ್ರನ ಶುಭ ಚಿಹ್ನೆಗಳು :
ಜೀವನದಲ್ಲಿ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿಯು ಭೌತಿಕ ಸೌಕರ್ಯಗಳನ್ನು ಪಡೆಯಲು ಪ್ರಾರಂಭಿಸಿದಾಗ, ಅದು ಶುಕ್ರನು ಮಂಗಳಕರವಾಗಿರುವ ಸಂಕೇತವಾಗಿದೆ. ಅಲ್ಲದೆ, ಇದ್ದಕ್ಕಿದ್ದಂತೆ ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಪಡೆಯಲು ಪ್ರಾರಂಭಿಸಿದರೆ, ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿರುತ್ತಾನೆ ಎನ್ನುವುದನ್ನು ತೋರಿಸುತ್ತದೆ (Shukra). 

ಶುಕ್ರನನ್ನು ಬಲಪಡಿಸಲು ಏನು ಮಾಡಬೇಕು?
ಶುಕ್ರವಾರ ಅಥವಾ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಶುಕ್ರನ ಮಂತ್ರಗಳನ್ನು ಪಠಿಸುವುದರಿಂದ ಜಾತಕದಲ್ಲಿ ಶುಕ್ರನ ಸ್ಥಾನವು ಬಲಗೊಳ್ಳುತ್ತದೆ. ಸ್ತ್ರೀಯರನ್ನು ಗೌರವಿಸುವುದರಿಂದ ಶುಕ್ರನು ಬಲಗೊಳ್ಳುತ್ತಾನೆ. ಶುಕ್ರವಾರದಂದು ಲಕ್ಷ್ಮೀ  ದೇವಿಯನ್ನು (Godess Lakshmi) ಪೂಜಿಸುವುದರಿಂದ ಶುಕ್ರನ ಶುಭ ಫಲಿತಾಂಶಗಳು ದೊರೆಯುತ್ತವೆ. ಇದಲ್ಲದೆ ಶುಕ್ರವಾರದಂದು ದಾನ ಮಾಡುವುದರಿಂದ ಶುಕ್ರ ಗ್ರಹದ ಸ್ಥಾನವು ಬಲಗೊಳ್ಳುತ್ತದೆ. 

ಇದನ್ನೂ ಓದಿ : Guru Ast: ಗುರು ಅಸ್ತ, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News