ಒಂದು ಕಾಲದಲ್ಲಿ ಚಿಕ್ಕ ಕೋಣೆಯಲ್ಲಿ ವಾಸವಿದ್ದ ನಟಿ ಈಗ 550 ಕೋಟಿ ರೂ. ಒಡತಿ..! ಸ್ಟಾರ್‌ ನಟನ ಹೆಂಡತಿ

Alia Bhatt life : ಈ ಸ್ಟಾರ್ ಕಿಡ್ ಚಿಕ್ಕ ವಯಸ್ಸಿನಲ್ಲಿ ಸಿಂಗಲ್ ಬೆಡ್ ರೂಮ್ ಅಪಾರ್ಟ್ಮೆಂಟ್ನಲ್ಲಿ ಬೆಳೆದರು. ಸಿನಿಮಾದಲ್ಲಿ ಬಾಲನಟಿಯಾಗಿ ಕೆಲಸ ಮಾಡಿದ್ದಾರೆ. ಕಷ್ಟಪಟ್ಟು ದುಡಿದು ಇಂದು ಸೂಪರ್ ಸ್ಟಾರ್ ಆಗಿದ್ದಾಳೆ. ಯಾರು ಆ ನಟಿ, ಏನ್‌ ಕಥೆ.. ಬನ್ನಿ ತಿಳಿಯೋಣ..

Bollywood actress Alia Bhatt : ಸಾಮಾನ್ಯವಾಗಿ ಸಿನಿಮಾ ತಾರೆಯರು, ಸೆಲೆಬ್ರಿಟಿಗಳ ಮಕ್ಕಳು ಐಷಾರಾಮಿ ಜೀವನ ನಡೆಸುತ್ತಾರೆ. ವಯಸ್ಸಿಗೆ ಬರುವವರೆಗೂ ಎಂಜಾಯ್ ಮಾಡಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರುತ್ತಾರೆ. ಅವರಿಗೆ ಸಿನಿಮಾ ಅವಕಾಶಗಳು ಸಿಗುವುದು ತುಂಬಾ ಸುಲಭ. ಒಳ್ಳೆಯ ನಿರ್ದೇಶಕರು ಒಳ್ಳೆಯ ಕಥೆಯೊಂದಿಗೆ ಸಿನಿರಂಗ ಪ್ರವೇಶ ಮಾಡಿದ್ರೆ, ಯಶಸ್ಸು ಸರಳವಾಗಿ ಬರುತ್ತದೆ. ಆದರೆ ಎಲ್ಲರ ಜೀವನವೂ ಹೀಗೆಯೇ ಸಾಗುತ್ತದೆ ಎಂದುಕೊಂಡರೆ ಅದು ತಪ್ಪು.

1 /8

ವಿಶೇಷವಾಗಿ ಈ ಸ್ಟಾರ್ ಕಿಡ್ ತುಂಬಾ ವಿಭಿನ್ನವಾಗಿ ಬೆಳೆದರು. ಚಿಕ್ಕ ವಯಸ್ಸಿನಲ್ಲಿ ಸಿಂಗಲ್ ಬೆಡ್ ರೂಮ್ ಅಪಾರ್ಟ್ ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಸಿನಿಮಾದಲ್ಲಿ ಬಾಲನಟಿಯಾಗಿ ಕೆಲಸ ಮಾಡಿ, ಕಷ್ಟಪಟ್ಟು ದುಡಿದು ಇಂದು ಸೂಪರ್ ಸ್ಟಾರ್ ಆಗಿದ್ದಾಳೆ. ಹೌದು.. ಅದು ಬೇರೆ ಯಾರೂ ಅಲ್ಲ ಬಾಲಿವುಡ್‌ ಸ್ಟಾರ್‌ ನಟಿ ಆಲಿಯಾ ಭಟ್.

2 /8

ಅನೇಕ ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ನಟಿಸಿರುವ ಈ ನಟಿ ಪ್ರಸ್ತುತ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಪ್ರಸ್ತುತ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್‌ನಲ್ಲಿ ಆಲಿಯಾ ಹೆಸರು ಸಹ ಇದೆ. 32 ಕೋಟಿ ಮೌಲ್ಯದ ಬಂಗಲೆಯನ್ನೂ ಖರೀದಿಸಿದ್ದಾರೆ. ಆಲಿಯಾ ತಂದೆ ಮಹೇಶ್ ಭಟ್ ಬಾಲಿವುಡ್ ನಲ್ಲಿ ಯಶಸ್ವಿ ನಿರ್ದೇಶಕ. ಪ್ರಸ್ತುತ ಅವರು ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಸೆಲೆಬ್ರಿಟಿಯಾಗಿದ್ದರೂ ಆಲಿಯಾ ಬಾಲ್ಯದಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದಳು ಅಂದ್ರ ನೀವು ನಂಬಲೇಬೇಕು...  

3 /8

ಕರಣ್ ಜೋಹರ್ ನಿರ್ದೇಶನದ "ಸ್ಟೂಡೆಂಟ್ ಆಫ್ ದಿ ಇಯರ್" ಚಿತ್ರದ ಮೂಲಕ ಆಲಿಯಾ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು, "ಹೈವೇ", "ಹಂಪ್ಟಿ ಶರ್ಮಾ ಕಿ ದುಲ್ಹನಿಯಾ", "ರಾಝಿ", "ಗಂಗೂಬಾಯಿ ಕಥಿಯಾವಾಡಿ" ಮುಂತಾದ ಚಿತ್ರಗಳೊಂದಿಗೆ ಚಿತ್ರರಂಗದಲ್ಲಿ ಹೊಸ ಖಾತೆ ತೆರೆದರು.  

4 /8

ದಿ ನೋಡ್ ಮ್ಯಾಗ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರು ತಮ್ಮ ಹಿಂದಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ. ಆಲಿಯಾ ಮತ್ತು ಶಾಹೀನ್ ಅವರನ್ನು ತುಂಬಾ ಸರಳವಾಗಿ ಬೆಳೆಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರಿಗಾಗಿ ಆಟದ ಕೋಣೆಯೂ ಇರಲಿಲ್ಲ, ಅವರೆಲ್ಲರೂ ಒಂದು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ನಾನಾ ಕಷ್ಟಪಡುತ್ತಾ ವಾಸಿಸುತ್ತಿದ್ದರು ಎಂದು ಆಲಿಯಾ ಹೇಳಿದರು.  

5 /8

'ನಾವು ಚಿಕ್ಕ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೆವು. ನಮ್ಮ ಕೈಯಲ್ಲಿ ಹೆಚ್ಚು ಹಣವಿರಲಿಲ್ಲ, ಬದುಕುವುದೇ ಕಷ್ಟವಾಗಿತ್ತು. ಆದರೆ ನಾನು ಮಕ್ಕಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದೆ. ಸ್ಮಾರ್ಟ್‌ಫೋನ್‌ಗಳೂ ಇಲ್ಲ. ಆಲಿಯಾಗೆ ಆಟದ ಕೋಣೆಯೂ ಇರಲಿಲ್ಲ. ಆದರೆ ಆಗ ಜೀವನ ತುಂಬಾ ಸುಲಭವಾಗಿತ್ತು ಅಂತ ಸೋನಿ ರಜ್ದಾನ್ ಹೇಳಿದರು.  

6 /8

ಈಗ ತಾಯಿಯಾಗಿದ್ದೇನೆ, ಮಗಳು ರಾಹಾಗೆ ನನ್ನ ಬಾಲ್ಯದಲ್ಲಿ ಸಿಗದ ಎಲ್ಲ ಸೌಕರ್ಯಗಳನ್ನು ಒದಗಿಸುವ ತವಕದಲ್ಲಿದ್ದೇನೆ ಎನ್ನುತ್ತಾರೆ ಆಲಿಯಾ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕೆಂದು ಆಶಿಸುತ್ತಾರೆ, ಅವರು ತಮ್ಮ ಮಕ್ಕಳು ತಮಗಿಂತ ಉತ್ತಮವಾಗಿರಬೇಕೆಂದು ಬಯಸುತ್ತಾರೆ. ಇಂದು, ರಾಹಾ ಉತ್ತಮ ಜೀವನವನ್ನು ಆನಂದಿಸುತ್ತಿದ್ದಾಳೆ ಅಂತ ನಟಿ ಹೇಳಿದರು.

7 /8

ಆಲಿಯಾ ಈಗ ಪ್ರತಿ ಚಿತ್ರಕ್ಕೆ 12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಆಕೆಯ ನಿವ್ವಳ ಮೌಲ್ಯ ರೂ.550 ಕೋಟಿ. ಈ ಬ್ಯೂಟಿ ಬಾಲಿವುಡ್ ಹೀರೋ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದಾರೆ. ಅವರು 2023 ರಲ್ಲಿ ಮಗಳು ರಾಹಾಗೆ ಜನ್ಮ ನೀಡಿದರು.   

8 /8

ಸದ್ಯ ಆಲಿಯಾ ಭಟ್‌ ನಟನೆಯ "ಜಿಗ್ರಾ" ಸಿನಿಮಾ ಸೆಪ್ಟೆಂಬರ್ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಂಜಯ್ ಲೀಲಾ ಬನ್ಸಾಲಿಯವರ "ಲವ್ & ವಾರ್" ಚಿತ್ರದಲ್ಲೂ ಆಲಿಯಾ ನಟಿಸುತ್ತಿದ್ದಾರೆ.