Photo Gallery: ಆಫ್ಘಾನ್ ವಿರುದ್ಧ ಮ್ಯಾಕ್ಸ್ವೆಲ್ ದಾಖಲೆಯ ದ್ವಿಶತಕ, ಹಲವು ದಾಖಲೆ ಬರೆದ ಐತಿಹಾಸಿಕ ಇನಿಂಗ್ಸ್

ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 291 ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 292 ರನ್ ಗುರಿ ನೀಡಿತು. ಅಫ್ಘಾನಿಸ್ತಾನ ಪರ ಇಬ್ರಾಹಿಂ ಝದ್ರಾನ್ 129 ರನ್‌ಗಳ ಗರಿಷ್ಠ ಸ್ಕೋರ್ ಗಳಿಸಿದರೆ, ರಶೀದ್ ಖಾನ್ 18 ಎಸೆತಗಳಲ್ಲಿ 35 ರನ್ ಗಳಿಸಿದರು. ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾ ಪರ ಗರಿಷ್ಠ 2 ವಿಕೆಟ್ ಪಡೆದರು. ಆದರೆ, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆಡಮ್ ಝಂಪಾ ತಲಾ 1 ವಿಕೆಟ್ ಪಡೆದರು. 292 ರನ್‌ಗಳ ಗುರಿಗೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 46.5 ಓವರ್‌ಗಳಲ್ಲಿ 293 ರನ್ ಗಳಿಸಿ 3 ವಿಕೆಟ್‌ಗಳಿಂದ ಜಯ ಸಾಧಿಸಿತು. ವಿಶೇಷವೇನೆಂದರೆ ಮ್ಯಾಕ್ಸ್ವೆಲ್ ಒಬ್ಬರೇ ಅಜೇಯ 201 ರನ್ ಗಳಿಸುವ ಮೂಲಕ ತಂಡವನ್ನು ಪವಾಡ ಸದೃಶ ರೀತಿಯಲ್ಲಿ ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಈ ಐತಿಹಾಸಿಕ ಇನಿಂಗ್ಸ್ ಈಗ ಹಲವು ದಾಖಲೆಗಳನ್ನು ನಿರ್ಮಿಸಿದೆ.
 

1 /5

ಈಗ ಈ ಶತಕದೊಂದಿಗೆ ಮ್ಯಾಕ್ಸ್ವೆಲ್ ಐದು ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಗಳಿಸಿದ ಅತ್ಯಧಿಕ ಮೊತ್ತ ಎನ್ನುವ ಹೆಗ್ಗಳಿಕೆಗೆ ಈ ಇನಿಂಗ್ಸ್ ಪಾತ್ರವಾಗಿದೆ.

2 /5

ಏಕದಿನ ಪಂದ್ಯದ ರನ್ ಚೇಸ್‌ನಲ್ಲಿ ಗಳಿಸಿದ ಮೊದಲ ದ್ವಿಶತಕ ಎನ್ನುವ ಹೆಗ್ಗಳಿಕೆಗೆ ಮ್ಯಾಕ್ಸ್ವೆಲ್ ಇನಿಂಗ್ಸ್ ಪಾತ್ರವಾಗಿದೆ.

3 /5

ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಓಪನರ್ ಅಲ್ಲದ ಮೊದಲ ಆಟಗಾರ.

4 /5

ಏಕದಿನ ಚೇಸ್‌ನಲ್ಲಿ ಅತ್ಯಧಿಕ ಮೊತ್ತವನ್ನು ಮ್ಯಾಕ್ಸ್ವೆಲ್ ಗಳಿಸಿದ್ದಾರೆ

5 /5

ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾ ಆಟಗಾರ ಎನ್ನುವ ಹೆಗ್ಗಳಿಕೆಗೆ ಮ್ಯಾಕ್ಸ್ವೆಲ್ ಪಾತ್ರರಾಗಿದ್ದಾರೆ.