Neech Bhang Rajyog: ಶೀಘ್ರದಲ್ಲೇ ನಿರ್ಮಾಣಗೊಳ್ಳುತ್ತಿದೆ ನೀಚಭಂಗ್ ರಾಜಯೋಗ, 3 ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

Mangal Gochar In Cancer: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮೇಷ ರಾಶಿಯ ಅಧಿಪತಿ ಮಂಗಳ ನೀಚಭಂಗ್ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಮಂಗಳನ ಈ ಗೋಚರ ಮೂರು ರಾಶಿಗಳ ಜನರ ಜೀವದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಇದರಿಂದ ಈ ಜನರಿಗೆ ಜೀವನದಲ್ಲಿ ಭಾರಿ ಧನಲಾಭ ಹಾಗೂ ಉನ್ನತಿಯ ಯೋಗ ರೂಪುಗೊಳ್ಳುತ್ತಲಿದೆ. 
 

Neech Bhang Rajyog In Cancer: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಕಾಲಕ್ಕೆ ಗೋಚರಿಸುವ ಮೂಲಕ ರಾಜಯೋಗಗಳನ್ನು ನಿರ್ಮಿಸುತ್ತವೆ. ಈ ರಾಜಯೋಗಗಳ ಪ್ರಭಾವ ಮನುಷ್ಯ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಬರುವ ಮೇ 10 ರಂದು ಮಂಗಳನ ಕರ್ಕ ರಾಶಿ ಗೋಚರ ನೆರವೇರಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯನ್ನು ಮಂಗಳನ ನೀಚ ರಾಶಿ ಎಂದೇ ಪರಿಗಣಿಸಲಾಗುತ್ತದೆ. ಹಾಗೆ ನೋಡಿದರೆ ಗ್ರಹ ತನ್ನ ನೀಚ ರಾಶಿಯಲ್ಲಿರುವಾಗ ಅಶುಭ ಫಲಗಳನ್ನು ನೀಡುತ್ತದೆ. ಆದರೆ ಇಲ್ಲಿ ನೀಚಭಂಗ್ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಇದರಿಂದ ಮೂರು ರಾಶಿಗಳ ಜಾತಕದವರಿಗೆ ಭಾರಿ ಧನಲಾಭವಾಗಲಿದ್ದು, ಅವರ ಜೀವನದಲ್ಲಿ ಅವರಿಗೆ ಸಾಕಷ್ಟು ಉನ್ನತಿ ಸಿಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Mercury Direct 2023: ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ಬುಧನ ನೇರ ನಡೆ ಆರಂಭ, ಈ ಜನರಿಗೆ ಅಷ್ಟೈಶ್ವರ್ಯ ಪ್ರಾಪ್ತಿ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಕರ್ಕ ರಾಶಿ: ಮಂಗಳನ ಕರ್ಕ ಪ್ರವೇಶದಿಂದ ನಿರ್ಮಾಣಗೊಳ್ಳುತ್ತಿರುವ ನೀಚಭಂಗ್ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಮಂಗಳ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಗೋಚರಿಸಲಿದ್ದಾನೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ ಕಂಡುಬರಲಿದೆ. ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಬಾಲಸಂಗಾತಿಯ ಉನ್ನತಿ ಕೂಡ ನೆರವೇರಲಿದೆ. ಆರ್ಥಿಕ ಸಂಕಷ್ಟಗಳು ಬಹಳಷ್ಟು ಮಟ್ಟಿಗೆ ನಿವಾರಣೆಯಾಗಲಿವೆ. ಕಾರ್ಯಸ್ಥಳದಲ್ಲಿ ನಿಮ್ಮ ಪದೋನ್ನತಿ ನೆರವೇರಲಿದೆ ಮತ್ತು ನಿಮ್ಮ ಅಧಿಕಾರಗಳು ಹೆಚ್ಚಾಗಲಿವೆ. ಪಾರ್ಟ್ನರ್ಶಿಪ್ ಕೆಲಸದಲ್ಲಿ ನಿಮಗೆ ಲಾಭ ಸಿಗಲಿದೆ. ಆದರೆ ಪ್ರಸ್ತುತ ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿವಹಿಸಿ.  

2 /3

ತುಲಾ ರಾಶಿ- ಕರ್ಕ ರಾಶಿಯಲ್ಲಿ ಮಂಗಳನ ಪ್ರವೇಶದಿಂದ ನಿರ್ಮಾಣಗೊಳ್ಳುತ್ತಿರುವ ನೀಚಭಂಗ್ ರಾಜಯೋಗ ತುಲಾ ರಾಶಿಯ ಜಾತಕದವರ ಪಾಲಿಗೆ ಸಾಕಷ್ಟು ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಮಂಗಳ ನಿಮ್ಮ ಗೋಚರ ಜಾತಕದ ಕರ್ಮಭಾವದಲ್ಲಿ ಗೋಚರಿಸಲಿದ್ದಾನೆ. ಇದರಿಂದ ನೌಕರ ವರ್ಗದ ಜನರಿಗೆ ಇಂಕ್ರಿಮೆಂಟ್ ಹಾಗೂ ಪ್ರಮೋಷನ್ ಭಾಗ್ಯ ಒದಗಿಬರುವ ಸಾಧ್ಯತೆ ಇದೆ. ಇದಲ್ಲದೆ ಕಾರ್ಯಸ್ಥಳದಲ್ಲಿ ನಿಮಗೆ ಹಿರಿಯರ ಹಾಗೂ ಕಿರಿಯರ ಬೆಂಬಲ ಸಿಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಆರ್ಡರ್ ಗಳು ಸಿಗಲಿವೆ. ಇನ್ನೊಂದೆಡೆ ಕುಟುಂಬ ಹಾಗೂ ಕಚೇರಿಯ ನಡುವೆ ಸಮತೋಲನ ಕಾಪಾಡುವುದು ನಿಮ್ಮ ಪಾಲಿಗೆ ಅತ್ಯಾವಶ್ಯಕ ಎನಿಸಬಹುದು. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಬೆಂಬಲ ಸಿಗಲಿದೆ.  

3 /3

ಮಿಥುನ ರಾಶಿ: ನೀಚಭಂಗ್ ರಾಜಯೋಗ ಮಿಥುನ ರಾಶಿಯ ಜಾತಕದವರ ಪಾಲಿಗೆ ಶುಭ ಫಲಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಮಂಗಳ ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ. ಇದರಿಂದ ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸದ ಪ್ರದರ್ಶನ ಉತ್ತಮವಾಗಿರಲಿದೆ. ಜೀವನದಲ್ಲಿ ಮುಂದುವರೆಯಲು ಇದುವರೆಗೆ ಇದ್ದ ಅಡೆತಡೆಗಳು ದೂರಾಗಲಿವೆ. ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಬಲಗೊಳ್ಳಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)