Benefits of Seeds: ಮೆದುಳು ಸೂಪರ್ ಕಂಪ್ಯೂಟರ್ ಥರ ಕೆಲಸ ಮಾಡಲು ಪ್ರತೀದಿನ ಈ ಬೀಜಗಳನ್ನು ಸೇವಿಸಿ

Benefits of Seeds: ಮೆದುಳು ನಮ್ಮ ದೇಹಕ್ಕೆ ಶಕ್ತಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ನಮ್ಮ ಮೆದುಳನ್ನು ನಾವು ಚೆನ್ನಾಗಿ ಪೋಷಣೆ ಮಾಡುವುದು ಅಗತ್ಯ. ನಮ್ಮ ಜೀವನಶೈಲಿ ಬದಲಾದಂತೆ ಮೆದುಳಿಗೆ ಹೆಚ್ಚಿನ ಒತ್ತಡ ಬೀಳಲು ಪ್ರಾರಂಭಿಸುತ್ತದೆ. ಕೆಲಸ, ಸಮಸ್ಯೆ, ಅಗತ್ಯತೆಗಳ ಪೂರೈಕೆಯ ಜಂಜಾಟ ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.  

1 /4

ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ. ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯದ ಜೊತೆಗೆ ಮೆದುಳಿನ ಕಾರ್ಯವೂ ಸುಧಾರಿಸುತ್ತದೆ.

2 /4

ಕುಂಬಳಕಾಯಿಯ ಬೀಜ ಕೂಡ ಉತ್ತಮ ಆಹಾರವಾಗಿದ್ದು, ಇದನ್ನು ಸೇವಿಸುವುದರಿಂದ ಮೆದುಳಿನ ಕಾರ್ಯವು ಚುರುಕಾಗಿರುತ್ತದೆ. ಇದರಲ್ಲಿ ಸತು, ತಾಮ್ರ ಮತ್ತು ಕಬ್ಬಿಣ ಇರುತ್ತದೆ. ಇವು ಮೆದುಳಿಗೆ ತುಂಬಾ ಉಪಯುಕ್ತವಾಗಿದೆ.

3 /4

ಮೆದುಳಿನ ಕಾರ್ಯವನ್ನು ಸುಧಾರಿಸಲು ಅಗಸೆ ಬೀಜಗಳು ಪರಿಣಾಮಕಾರಿ. ಇವುಗಳನ್ನು ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ.

4 /4

ಮೆದುಳಿನ ಕಾರ್ಯವನ್ನು ಚುರುಕುಗೊಳಿಸಲು ಚಿಯಾ ಬೀಜಗಳು ಉತ್ತಮವಾಗಿವೆ. ಮೆದುಳಿಗೆ ಸೂಪರ್ ಫುಡ್ ಆಗಿ ಕಾರ್ಯನಿರ್ವಹಿಸುತ್ತದೆ. ದಿನಕ್ಕೆ ಎರಡು ಚಮಚ ಚಿಯಾ ಬೀಜಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.