ಈ ಹಣ್ಣುಗಳು ಆರೋಗ್ಯ ಸಿರಿಯಾಗಿದ್ದರೂ ಮಧುಮೇಹಿಗಳು ಮಾತ್ರ ಮುಟ್ಟಿಯೂ ನೋಡುವಂತಿಲ್ಲ

Avoid fruits in diabetes: ಮಧುಮೇಹ ರೋಗಿಗಳಿಗೆ ಸಾಕಷ್ಟು ಹಣ್ಣುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಹಣ್ಣುಗಳ ಸೇವನೆಯು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿ ಪರಿಣಮಿಸಲಿದೆ. ಈ ಹಣ್ಣುಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. 
 

Which fruits should not eat in diabetes : ಆರೋಗ್ಯವಾಗಿರಲು, ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವುದು ಬಹಳ ಮುಖ್ಯ. ಇದು ನಮಗೆ ಸಾಕಷ್ಟು ಪೋಷಕಾಂಶಗಳನ್ನು ನೀಡುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ನಿತ್ಯ ಒಂದೋ ಎರಡೋ ಹಣ್ಣುಗಳನ್ನು ತಿನ್ನುವುದು ಅವಶ್ಯಕವಾಗಿರುತ್ತದೆ.  ಈ ಮೂಲಕ ವಿವಿಧ ರೀತಿಯ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಆದರೆ ಕೆಲವು ಹಣ್ಣುಗಳಲ್ಲಿ ಸಕ್ಕರೆಯು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಹಣ್ಣುಗಳು ಮಧುಮೇಹ ರೋಗಿಗಳಿಗೆ  ಸೂಕ್ತವಲ್ಲ. ಏಕೆಂದರೆ ಈ ಹಣ್ಣುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಕೆಲವರಿಗೆ ಅನಾನಸ್ ಎಂದರೆ ತುಂಬಾ ಇಷ್ಟ.  ಹಾಗಂತ ನೀವು ಮಧುಮೇಹದಿಂದ ಬಳಲುತ್ತಿದ್ದರೆ ಈ ಹಣ್ಣನ್ನು ತಿನ್ನುವಂತಿಲ್ಲ. ರಕ್ತದಲ್ಲಿನ ಸಕ್ಕರೆ ಹೆಚ್ಚಾಗಿದ್ದು, ನಿಯಂತ್ರಣದಲ್ಲಿಲ್ಲದಿದ್ದರೆ ಅನಾನಸ್  ಸೇವಿಸಲೇ ಬಾರದು. 

2 /5

ಬೇಸಿಗೆಯಲ್ಲಿ ಹೆಚ್ಚು ಇಷ್ಟಪಡುವ ಹಣ್ಣು, ಮಾವು. ರುಚಿಕರ ರಸಭರಿತ ಹಣ್ಣಿಗೆ ಮನಸೋಲದವರುಂಟೆ. ಆದರೆ ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಿದ್ದು, ವೈದ್ಯರ ಸಲಹೆಯಿಲ್ಲದೆ ಮಧುಮೇಹಿಗಳು ಸೇವಿಸಬಾರದು.

3 /5

ಮಧುಮೇಹ ರೋಗಿಗಳಿಗೆ ಬಾಳೆಹಣ್ಣು ಕೂಡಾ ಉತ್ತಮ ಆಯ್ಕೆಯಲ್ಲ, ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಧಿಕವಾಗಿರುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸೇರಿದಂತೆ ಅನೇಕ ವಿಶೇಷ ಪೋಷಕಾಂಶಗಳು ಸಮೃದ್ಧವಾಗಿದ್ದರೂ, ಅದರ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್‌ನಿಂದಾಗಿ, ಇದು ಮಧುಮೇಹದಲ್ಲಿ ಒಳ್ಳೆಯದಲ್ಲ. 

4 /5

ಕೆಲವರು ಸಪೋಟ ಹಣ್ಣನ್ನು ಅತಿಯಾಗಿ ಇಷ್ಟಪಡುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ ಇದು ಉತ್ತಮ ಹಣ್ಣು ಅಲ್ಲವೇ ಅಲ್ಲ.  ಈ ಹಣ್ಣಿನಲ್ಲಿ  ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆ ಕಂಡು ಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. 

5 /5

ದ್ರಾಕ್ಷಿ ಹಣ್ಣಿನಲ್ಲಿ ಕೂಡಾ ವಿವಿಧ ರೀತಿಯ ಪೋಷಕಾಂಶಗಳಿರುತ್ತವೆ.  ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಆದರೆ ದ್ರಾಕ್ಷಿಯು ಮಧುಮೇಹ ರೋಗಿಗಳಿಗೆ ಮಾತ್ರ ಉತ್ತಮ ಆಯ್ಕೆಯಲ್ಲ.   ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ. (  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)