Earthquake: ಜಪಾನ್‌ನಲ್ಲಿ ಭೂಕಂಪ, ಹಳಿತಪ್ಪಿದ ಬುಲೆಟ್ ರೈಲು

                             

Earthquake: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ಭಾರೀ ವಿನಾಶಕ್ಕೆ ಕಾರಣವಾಗಿದೆ. ಈ ದುರ್ಘಟನೆಯಲ್ಲಿ ಇದುವರೆಗೆ ನಾಲ್ವರು ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.  ಫುಕುಶಿಮಾ ಮತ್ತು ಮಿಯಾಗಿ ಪ್ರಾಂತ್ಯಗಳ ಕರಾವಳಿಯಲ್ಲಿ ಕಡಿಮೆ ಅಪಾಯದ ಸುನಾಮಿ ಎಚ್ಚರಿಕೆಯನ್ನು ಜಪಾನ್ ಹವಾಮಾನ ಸಂಸ್ಥೆ ಹಿಂಪಡೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಸ್ಥಳೀಯ ಕಾಲಮಾನ ರಾತ್ರಿ 11:36ಕ್ಕೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ಸಮುದ್ರದಲ್ಲಿ 60 ಕಿಲೋಮೀಟರ್ ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಈ ಪ್ರದೇಶವು ಉತ್ತರ ಜಪಾನ್‌ನ ಭಾಗವಾಗಿದೆ, ಇದು 2011 ರಲ್ಲಿ ವಿನಾಶಕಾರಿ ಒಂಬತ್ತು-ತೀವ್ರತೆಯ ಭೂಕಂಪ ಮತ್ತು ಸುನಾಮಿಯಿಂದ ನಾಶವಾಯಿತು. ಭೂಕಂಪದಿಂದಾಗಿ ಪರಮಾಣು ದುರಂತವೂ ಸಂಭವಿಸಿದೆ.  

2 /6

ಭೂಕಂಪದ ನಂತರ ಸುಮಾರು ಎರಡು ಮಿಲಿಯನ್ ಮನೆಗಳ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಮತ್ತು ಅವರು ಕತ್ತಲೆಯಲ್ಲಿ ಮುಳುಗಿದ್ದಾರೆ ಎಂದು ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿಯನ್ನು ಉಲ್ಲೇಖಿಸಿ AFP ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ರಾಜಧಾನಿ ಟೋಕಿಯೊದಲ್ಲಿಯೇ 700,000 ಮನೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.

3 /6

ಭೂಕಂಪದಲ್ಲಿ ನಾಲ್ವರು ಸಾವನ್ನಪ್ಪಿದ್ದು, 97 ಮಂದಿ ಗಾಯಗೊಂಡಿದ್ದಾರೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಗುರುವಾರ ಬೆಳಗ್ಗೆ ಸಂಸತ್ತಿನ ಅಧಿವೇಶನದಲ್ಲಿ ತಿಳಿಸಿದರು.

4 /6

ಫುಕುಶಿಮಾ ಮತ್ತು ಮಿಯಾಗಿ ನಡುವಿನ ತೊಹೊಕು ಶಿಂಕನ್‌ಸೆನ್ ಎಕ್ಸ್‌ಪ್ರೆಸ್ ರೈಲು ಭೂಕಂಪದಿಂದ ಭಾಗಶಃ ಹಳಿತಪ್ಪಿದೆ, ಆದರೆ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಪ್ರಧಾನಿ ಫುಮಿಯೊ ಕಿಶಿಡಾ ಹೇಳಿದ್ದಾರೆ.  

5 /6

ಭೂಕಂಪದಿಂದಾಗಿ ಹಲವು ಕಟ್ಟಡಗಳು ಹಾನಿಗೊಳಗಾಗಿದ್ದು, ಹಲವು ಮನೆಗಳ ಗೋಡೆಗಳು ಒಡೆದು ನೆಲಕ್ಕುರುಳಿರುವುದು ಕಂಡುಬಂದಿದೆ. ಫುಕುಶಿಮಾ ನಗರದಲ್ಲಿ ಕಿಟಕಿಗಳ ತುಂಡುಗಳು ಗೋಚರಿಸಿವೆ ಮತ್ತು ಹಲವಾರು ರಸ್ತೆಗಳು ಸಹ ಹಾನಿಗೊಳಗಾಗಿವೆ.

6 /6

ಭೂಕಂಪದ ನಡುಕಗಳು ಜಪಾನ್‌ನಲ್ಲಿ 2011 ರ ಫುಕುಶಿಮಾ ದುರಂತದ ಕರಾಳ ನೆನಪುಗಳನ್ನು ಮರಳಿ ತಂದವು, 11 ವರ್ಷಗಳ ಹಿಂದೆ ಜಪಾನ್‌ನಲ್ಲಿ 9.0-9.1 ತೀವ್ರತೆಯ ಭೂಕಂಪ ಸಂಭವಿಸಿದಾಗ, ಸುನಾಮಿಯು ಫುಕುಶಿಮಾ ಪರಮಾಣು ಸ್ಥಾವರವನ್ನು ನಾಶಪಡಿಸಿತು. ಸುನಾಮಿಯಲ್ಲಿ ಸುಮಾರು 18,500 ಜನರು ಸಾವನ್ನಪ್ಪಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.