ಆರೋಗ್ಯ ಲಾಭಕ್ಕಾಗಿ ಪನ್ನೀರ್ ಅನ್ನು ಈ ರೀತಿ ಸೇವಿಸಿ

ಆಯುರ್ವೇದದ ಪ್ರಕಾರ, ಪನೀರ್‌ನ ಎಲ್ಲಾ ಗುಣಗಳನ್ನು ಪಡೆಯಲು, ಅದನ್ನು ಉಪ್ಪು ಇಲ್ಲದೆ ತಿನ್ನುವುದು ಹೆಚ್ಚು ಪ್ರಯೋಜನಕಾರಿ.

ನವದೆಹಲಿ : ಹೆಚ್ಚಿನ ಜನರು ಪನೀರ್ ತಿನ್ನಲು ಇಷ್ಟಪಡುತ್ತಾರೆ. ಅದರ ಅದ್ಭುತ ರುಚಿಯಿಂದಾಗಿ, ಪನೀರ್ ಅನ್ನು ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ವಯಸ್ಸಾಗುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ  ಪರಿಣಾಮಗಳನ್ನು ಪನೀರ್ ಕಡಿಮೆ ಮಾಡುತ್ತದೆ. ತಜ್ಞರ ಪ್ರಕಾರ, ನಿಮ್ಮ ತ್ವಚೆಯು ನೈಸರ್ಗಿಕವಾಗಿ ಸುಂದರವಾಗಿ ಮತ್ತು ಹೊಳೆಯುತ್ತಿರಬೇಕಾದರೆ ಪನೀರ್ ಸೇವಿಸಬೇಕು.  ಆದರೆ ಇದಕ್ಕಾಗಿ ಪನೀರ್ ತಿನ್ನುವ ಸರಿಯಾದ ವಿಧಾನವನ್ನು ತಿಳಿದಿರಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆಯುರ್ವೇದದ ಪ್ರಕಾರ, ಪನೀರ್‌ನ ಎಲ್ಲಾ ಗುಣಗಳನ್ನು ಪಡೆಯಲು, ಅದನ್ನು ಉಪ್ಪು ಇಲ್ಲದೆ ತಿನ್ನುವುದು ಹೆಚ್ಚು ಪ್ರಯೋಜನಕಾರಿ. ಸಾಮಾನ್ಯವಾಗಿ ಜನರು ಶಾಹಿ ಪನೀರ್, ಕಡಾಯಿ ಪನೀರ್, ಪಾಲಕ್ ಪನೀರ್ ಅಥವಾ ಪನೀರ್ ಟಿಕ್ಕಾದಂತಹ ವಿಭಿನ್ನ ಪಾಕವಿಧಾನಗಳನ್ನು ಮಾಡಿ ತಿನ್ನುತ್ತಾರೆ. ಆದರೆ ಆ ರೀತಿ ಪನೀರ್ ಅನ್ನು ತಿನ್ನುವುದರಿಂದ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಎಣ್ಣೆ, ಮಸಾಲೆಗಳು ಮತ್ತು ಉಪ್ಪಿನೊಂದಿಗೆ ಪನೀರ್ ತಿನ್ನುವುದರಿಂದ ಆರೋಗ್ಯ ವಿರೋಧಿ ಗುಣಗಳನ್ನು ಹೆಚ್ಚಿಸುತ್ತದೆ. 

2 /5

ತಜ್ಞರ ಪ್ರಕಾರ ಮಜ್ಜಿಗೆ ಹೊರತು ಪಡಿಸಿ ಹಾಲಿನಿಂದ ತಯಾರಿಸುವ ಯಾವುದೇ ವಸ್ತುವಿನಲ್ಲಿ ಉಪ್ಪನ್ನು ಬಳಸಬಾರದು. ಇದು ನಿಮಗೆ ಹಾನಿ ಮಾಡುತ್ತದೆ. ಕಚ್ಚಾ ಪನೀರ್ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ರುಚಿಗೆ ಕರಿಮೆಣಸು ಅಥವಾ ಕೊತ್ತಂಬರಿ ಪುಡಿ ಅಥವಾ ಚಾಟ್ ಮಸಾಲಾ ಸೇರಿಸಿ ತಿನ್ನಬಹುದು, ಆದರೆ ಉಪ್ಪು ಹಾಕಬೇಡಿ.

3 /5

ಯಾವುದೇ ಸಮಯದಲ್ಲಿ ಪನೀರ್ ತಿನ್ನಬಹುದು, ಆದರೆ ರಾತ್ರಿ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ತಿನ್ನುವುದು ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಪನೀರ್ ನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ  ಸಮೃದ್ಧವಾಗಿದೆ. ಇದು ಚರ್ಮಕ್ಕೆ ಕೂದಲು ಮತ್ತು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ದೇಹಕ್ಕೆ ನಿಯಮಿತವಾಗಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಗತ್ಯವಿರುತ್ತದೆ. ಪನೀರ್ ಈ ಅಗತ್ಯವನ್ನು ಪೂರೈಸುತ್ತದೆ.     

4 /5

ಪನೀರ್ ಸೇವನೆಯು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಪನೀರ್ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ.  ಇದು ಚರ್ಮದ ಕೋಶಗಳನ್ನು ಒಳಗಿನಿಂದ ಗುಣಪಡಿಸಲು ಸಹಾಯ ಮಾಡುತ್ತದೆ.   

5 /5

ನಿಯಮಿತವಾಗಿ ಪನೀರ್ ತಿನ್ನುವುದರಿಂದ ಚರ್ಮವು ತುಂಬಾ ಮೃದುವಾಗಿರುತ್ತದೆ. ಇದು ದೇಹದ ನೈಸರ್ಗಿಕ ಲೂಬ್ರಿಕಂಟ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸುವ ಆಹಾರವಾಗಿಯೂ ಇದನ್ನು ಸೇವಿಸಬಹುದು. ಇದು ಕೊಬ್ಬನ್ನು ಹೆಚ್ಚಿಸುವುದಿಲ್ಲ.