Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?

Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ.. 

1 /5

ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸಿನಿ ಬದುಕಿನಲ್ಲಿ ಉತ್ತಂಗದಕ್ಕೇರಿದ ನಟಿ ನಗ್ಮಾ ತಮ್ಮ ವೃತ್ತಿ ಜೀವನದಲ್ಲಿ ಕಂಡ ಯಶಸ್ಸನ್ನು ವೈಯಕ್ತಿಕ ಜೀವನದಲ್ಲಿ ಕಾಣಲಿಲ್ಲ.. ಸೆಲೆಬ್ರಿಟಿಯೊಬ್ಬರ ಪ್ರೀತಿಯ ಬಲೆಗೆ ಬಿದ್ದ ಈಕೆ ಅವರಿಂದ ದೂರವಾಗಿದ್ದಕ್ಕೆ ಮದುವೆ ಎನ್ನುವ ವಿಚಾರದಿಂದಲೇ ಹಿಂದೆ ಸರಿದರು.    

2 /5

ಕುರುಬನ ರಾಣಿ ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರ ಹೃದಯ ಗೆದ್ದ ಈ ಚೆಲುವೆ ತನ್ನ ಮೊದಲ ಸಿನಿಮಾದಿಂದಲೇ ದೊಡ್ಡ ಖ್ಯಾತಿ ಗಳಿಸಿದರು.. ಮುದ್ದು ಮುಖ, ಮಗ್ಧ ಅಭಿನಯದ ಮೂಲಕವೇ ಎಲ್ಲರನ್ನು ಸೆಳೆದ ಈಕೆ ರವಿಮಾಮಾ ಸಿನಿಮಾದ ಮೂಲಕ ಬಹಳ ದಿನಗಳ ನಂತರ ಕನ್ನಡ ಸಿನಿರಂಗಕ್ಕೆ ಕಂಬ್ಯಾಕ್‌ ಮಾಡಿದ್ದರು..   

3 /5

 ಡಾ. ವಿಷ್ಣುವರ್ಧನ್ ಅವರ ಹೃದಯವಂತ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಈಕೆ ಖ್ಯಾತ ತಮಿಳು ನಟ ಶರತ್‌ ಅವರನ್ನು ಪ್ರೀತಿಸುತ್ತಿದ್ದರು.. ಇವರಿಬ್ಬರೂ ಪ್ರೀತಸುತ್ತಿದ್ದಾರೆ... ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಆಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು..   

4 /5

 ಆದರೆ ನಟ ಶರತ್‌ ರಾಧಿಕಾ ಎಂಬುವವರೊಂದಿಗೆ ಮದುವೆಯಾಗಿ ನಗ್ಮಾ ಅವರಿಂದ ದೂರವಾದರು... ನಂತರ ಇವರ ಹೆಸರು ಖ್ಯಾತ ಕ್ರಿಕೆಟರ್‌ ಸೌರವ್‌ ಗಂಗೂಲಿ ಅವರೊಂದಿಗೆ ತಳುಕುಹಾಕಿಕೊಂಡಿತ್ತು.. ಅಲ್ಲದೇ ಇವರಿಬ್ಬರು ಜೊತೆಗೆ ಸುತ್ತಾಡುವ ದೃಶ್ಯಗಳೂ ಸೆರೆಯಾಗಿದ್ದವು.. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯದೇ ಮುರಿದುಬಿತ್ತು..   

5 /5

ನಂತರ ರಾಜಕೀಯಕ್ಕೆ ಕಾಲಿಟ್ಟ ನಟಿ ಮದುವೆ ಎಂಬ ಬಂಧನದಿಂದ ದೂರವೇ ಉಳಿದುಬಿಟ್ಟರು.. ಇಲ್ಲಿಯವರೆಗೂ ಆಕೆ ಮದುವೆ ಸಂಸಾರ ಈ ಯಾವ ವಿಚಾರಗಳ ಬಗ್ಗೆಯೂ ಯೋಚಿಸಿಲ್ಲ..