Fitness Tips: ನಿಮ್ಮ ಕಿಚನ್ ನಲ್ಲಿರುವ ಈ 5 ಮಸಾಲೆ ಪದಾರ್ಥಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತವೆ

Kitchen Spices - ನಿಮ್ಮ ಅಡುಗೆ ಮನೆಯು ಹಲವಾರು ಔಷಧೀಯ ಸಂಗತಿಗಳಿಂದ ತುಂಬಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಈ ಔಷಧಿಯ ಸಂಗತಿಗಳು ಹಲವು ರೀತಿಯ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಅಡುಗೆ ಮನೆಯ ಮಸಾಲೆಗಳು (Spices) ನಮ್ಮ ಆಹಾರವನ್ನು (Diet) ರುಚಿಯಾಗಿಸುವುದರ ಜೊತೆಗೆ ಅವುಗಳ ಸೀಮಿತ ಸೇವನೆಯು ನಮ್ಮ ದೇಹಕ್ಕೆ ಹಲವು ಲಾಭಗಳನ್ನು ನೀಡುತ್ತವೆ.

Kitchen Spices - ನಿಮ್ಮ ಅಡುಗೆ ಮನೆಯು ಹಲವಾರು ಔಷಧೀಯ ಸಂಗತಿಗಳಿಂದ ತುಂಬಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಈ ಔಷಧಿಯ ಸಂಗತಿಗಳು ಹಲವು ರೀತಿಯ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಅಡುಗೆ ಮನೆಯ ಮಸಾಲೆಗಳು (Spices) ನಮ್ಮ ಆಹಾರವನ್ನು (Diet) ರುಚಿಯಾಗಿಸುವುದರ ಜೊತೆಗೆ ಅವುಗಳ ಸೀಮಿತ ಸೇವನೆಯು ನಮ್ಮ ದೇಹಕ್ಕೆ ಹಲವು ಲಾಭಗಳನ್ನು ನೀಡುತ್ತವೆ. ಈ ಮಸಾಲ ಪದಾರ್ಥಗಳಲ್ಲಿ ಕ್ಯಾನ್ಸರ್ (Cancer) ತಡೆಗಟ್ಟುವ ಕೆಲ ಭಾರತೀಯ ಮಸಾಲೆಗಳಿವೆ. ಇಂತಹ ಮಸಾಲೆಗಳ ದೈನಂದಿನ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಮಸಾಲೆಗಳ ಬಗ್ಗೆ ತಿಳಿಯೋಣ ಬನ್ನಿ.

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಅಥವಾ ಮನೆಮದ್ದು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ನುರಿತ ತಜ್ಞರ ಸಲಹೆ ಪಡೆಯಿರಿ)

 

ಇದನ್ನೂ ಓದಿ-Belly Fat Loss : ಹೊಟ್ಟೆಯ ಕೊಬ್ಬು ಕರಗಿಸಲು ಮೆಂತ್ಯ ಕಾಳು ಸೇವಿಸಿ : ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಅರಿಶಿಣ - ಅರಿಶಿನವು ಔಷಧೀಯ ಗುಣಗಳಿಂದ ಆಗರವಾಗಿರುವ ಒಂದು ಚಿನ್ನದಂತಹ ಮಸಾಲೆ ಪದಾರ್ಥವಾಗಿದೆ. ಅರಿಶಿನದ ಔಷಧೀಯ ಮತ್ತು ಉರಿಯೂತದ ಗುಣಲಕ್ಷಣಗಳನ್ನು ತಜ್ಞರು ಬಹಳ ಹಿಂದೆಯೇ ಮೆಚ್ಚಿದ್ದಾರೆ. ಅರಿಶಿಣದ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅರಿಶಿಣದ ಈ ಪ್ರಯೋಜನಗಳ ಹಿಂದಿನ ಕಾರಣವೆಂದರೆ ಅದರಲ್ಲಿರುವ ಕರ್ಕ್ಯುಮಿನ್. ಕರ್ಕ್ಯುಮಿನ್ ಒಂದು ಸಂಯುಕ್ತವಾಗಿದ್ದು ಅದು ದೇಹದಲ್ಲಿ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಮಧುಮೇಹ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಅರಿಶಿಣ ತುಂಬಾ ಸಹಕಾರಿಯಾಗಿದೆ. 

2 /5

2. ದಾಲ್ಚಿನಿ - ದಾಲ್ಚಿನ್ನಿಯಲ್ಲಿ ಕಂಡುಬರುವ ಗ್ಲುಕೋಸ್-6 ಫಾಸ್ಫೇಟ್ ಡಿಹೈಡ್ರೋಜಿನೇಸ್ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾದ ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ. ಇದಲ್ಲದೆ, ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಸಂಶೋಧನೆಯೊಂದರಲ್ಲಿ ಬಹಿರಂಗಪಡಿಸಿದೆ. ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾ ಕ್ಯಾನ್ಸರ್ ಅನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

3 /5

3. ಲವಂಗ -  ಲವಂಗದಲ್ಲಿ ಕಂಡುಬರುವ ಟ್ಯಾನಿನ್ಗಳು, ಯುಜೆನಾಲ್ ಎಂಬ ಸಂಯುಕ್ತ ಕ್ಯಾನ್ಸರ್ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇಂತಹ ಹಾನಿಕಾರಕ ಸಂಯುಕ್ತಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಇವು ಜೀವಕೋಶಗಳಿಗೆ ಒದಗಿಸುತ್ತವೆ.

4 /5

4. ಜಾಜಿಕಾಯಿ - ಜಾಜಿಕಾಯಿ ಅಥವಾ ಜಾಯಿಕಾಯಿ ಒಂದು ರೀತಿಯ ಮಸಾಲೆ ಪದಾರ್ಥವಾಗಿದೆ. ಇದನ್ನು ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಮಧುಮೇಹ, ಮಾನಸಿಕ ಆರೋಗ್ಯ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಆರೋಗ್ಯ ಪ್ರಯೋಜನಗಳ ಲಾಭವನ್ನು ಪಡೆಯಲು ನಿಮ್ಮ ದೈನಂದಿನ ಆಹಾರದಲ್ಲಿ ಸೀಮಿತ ಪ್ರಮಾಣದಲ್ಲಿ ಇದನ್ನು ಸೇರಿಸಿಕೊಳ್ಳಬಹುದು.

5 /5

5. ಜೀರಿಗೆ - ಪ್ರತಿಯೊಂದು ಭಾರತೀಯ ಅಡುಗೆಮನೆಯಲ್ಲಿಯೂ ಜೀರಿಗೆ ಕಂಡುಬರುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುವಲ್ಲಿ ಜೀರಿಗೆ ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ. ಇದರೊಂದಿಗೆ, ಇದು ಪಿತ್ತರಸ, ಹೊಟ್ಟೆಯ ಆಮ್ಲ ಮತ್ತು ಇತರ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಗೆ ಕಾರ್ಯನಿರ್ವಹಿಸುತ್ತದೆ.