Tips to sleep better: ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕೆಂದರೆ ಈ ಟಿಪ್ಸ್ ಬಳಸಿ

Tips to sleep better: ನಿದ್ರೆಯ ಕೊರತೆಯಿಂದಾಗಿ, ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗುತ್ತವೆ.

Tips to sleep better:ನಿದ್ರಾಹೀನತೆ ಪ್ರಸ್ತುತ ಜೀವನಶೈಲಿಯಿಂದ ತಲೆದೋರುವ ಸಮಸ್ಯೆಯಾಗಿದೆ. ವಿಪರೀತ ಒತ್ತಡದ ಪರಿಸ್ಥಿತಿಗಳಲ್ಲಿ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುವುದಿಲ್ಲ.  ಅದು ಹಾಗೇ ಮುಂದುವರಿದರೆ ಕ್ರಮೇಣ ಆರೋಗ್ಯ ಸಮಸ್ಯೆಯಾಗಿ ಬದಲಾಗುತ್ತದೆ.   ನಿದ್ರೆಯ ಕೊರತೆಯಿಂದಾಗಿ, ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗುತ್ತವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕೆಲವರು ಮಲಗಲು ಹೋಗುವುದೇ ತಡ ತಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಯೋಚಿಸಲು ಆರಂಭಿಸುತ್ತಾರೆ. ಹೀಗಾದಾಗ ಸರಿಯಾಗಿ ನಿದ್ದೆ ಮಾಡುವುದು ಕಷ್ಟ. ಮಲಗುವ ಮುನ್ನ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ಕೋಣೆಯಲ್ಲಿನ  ದೀಪಗಳನ್ನು ಮಂದಗೊಳಿಸಿ.   ಹೀಗೆ ಮಾಡುವುದರಿಂದ ಇದು ನಿದ್ದೆಯ ಸಮಯ ಎಂಬ ಸಂಕೇತಗಳನ್ನು ಮೆದುಳು ಕೂಡಾ ಪಡೆದುಕೊಳ್ಳುತ್ತದೆ. 

2 /4

ಮಲಗುವ ಮುನ್ನ ದೇಹದ ಉಷ್ಣತೆಯನ್ನು ನಿಯಂತ್ರಿಸಿ. ಇದರೊಂದಿಗೆ ಮಲಗುವ ಮುನ್ನ ನಿಮ್ಮ ಕೋಣೆಯ ಉಷ್ಣಾಂಶವನ್ನು ಕೂಡಾ ಹೊಂದಿಸಿಕೊಳ್ಳಿ. ಮಲಗುವ ಕೋಣೆಯಲ್ಲಿ ತಾಪಮಾನವು ತುಂಬಾ ಕಡಿಮೆ ಅಥವಾ ತುಂಬಾ ಹೆಚ್ಚಿರುವುದರಿಂದ ಜನರ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

3 /4

ಮಲಗುವ ಮುನ್ನ ಬಿಸಿ ನೀರಿನಿಂದ ಸ್ನಾನವನ್ನು ಮಾಡುವುದರಿಂದ ವಿಶ್ರಾಂತಿ ಪಡೆಯಬಹುದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿನದ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.   

4 /4

ಸೆಲ್ ಫೋನ್‌ಗಳು, ಟಿವಿ, ಲ್ಯಾಪ್‌ಟಾಪ್‌ಗಳ ಬೆಳಕು ನಿದ್ದೆಗೆ ತೊಂದರೆ ನೀಡಬಹುದು. ಆದ್ದರಿಂದ ಮಲಗುವ ಸಮಯಕ್ಕೆ ಕನಿಷ್ಠ ಅರ್ಧ ಘಂಟೆಯ ಮೊದಲು ಅವುಗಳನ್ನು ಆಫ್ ಮಾಡಿಕೊಳ್ಳಿ.