Flipkart Big Bachat Dhamaal: 1 ಸಾವಿರ ರೂ.ಗೆ Samsung ನ 5G ಸ್ಮಾರ್ಟ್‌ಫೋನ್ ಖರೀದಿಸಿ

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ ಹಣ ಪಾವತಿಸಿದರೆ ಕ್ಯಾಶ್‌ಬ್ಯಾಕ್ ಸಿಗಲಿದೆ. ಅಲ್ಲದೆ ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸಿದರೆ ನಿಮಗೆ ಫೋನ್ ಕಡಿಮೆ ಬೆಲೆಗೆ ಸಿಗುತ್ತದೆ.

ನೀವು ಉತ್ತಮ 5G ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಫ್ಲಿಪ್‌ಕಾರ್ಟ್‌ನ ‘ಬಿಗ್ ಬಚತ್ ಧಮಾಲ್ ಸೇಲ್’(Flipkart Big Bachat Dhamaal Sale)ನಲ್ಲಿ ಭರ್ಜರಿ ಆಫರ್ ಲಭ್ಯವಿದೆ. ಈ ಸೇಲ್‌ನಲ್ಲಿ ನಿಮಗೆ ಎಲ್ಲಾ ರೀತಿಯ ಉತ್ಪನ್ನಗಳ ಮೇಲೆ ಅದ್ಭುತ ಕೊಡುಗೆಗಳನ್ನು ನೀಡಲಾಗುತ್ತಿದೆ. ಆದರೆ ಇಂದು ನಾವು ನಿಮಗಾಗಿ 5G ಸ್ಮಾರ್ಟ್‌ಫೋನ್‌ಗಳ ಟಾಪ್ ಡೀಲ್‌ಗಳ ಕುರಿತು ಇಲ್ಲಿ ಮಾಹಿತಿ ನೀಡಿದ್ದೇವೆ. ಇವುಗಳಲ್ಲಿ ಕೆಲವನ್ನು ನೀವು ವಿವಿಧ ಆಫರ್ ಗಳ ಮೂಲಕ 1 ಸಾವಿರ ರೂ. ದರದಲ್ಲಿ ಖರೀದಿಸುವ ಅವಕಾಶವಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Samsung Galaxy F42 5G: ಸ್ಯಾಮ್‌ಸಂಗ್‌ನ ಈ 5G ಸ್ಮಾರ್ಟ್‌ಫೋನ್ 23,999 ರೂ. ಬದಲಿಗೆ 20,999 ರೂ.ಗೆ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು 900 ರೂ. ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಯಾವುದೇ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ 3 ಸಾವಿರ ರೂ.ಗಳ ರಿಯಾಯಿತಿ ಪಡೆಯುತ್ತೀರಿ. ವಿನಿಮಯ ಕೊಡುಗೆಯೊಂದಿಗೆ ನೀವು 16,050 ರೂ.ವರೆಗೆ ಉಳಿಸಬಹುದು. ಇವೆಲ್ಲಾ ಆಫರ್ ಕ್ಲೈಮ್ ಮಾಡಿದರೆ ಈ ಫೋನ್ ನಿಮಗೆ 1,049 ರೂ.ಗೆ ಸಿಗಲಿದೆ.   

2 /5

Realme 8s 5G SmartPhone: ರಿಯಲ್ ಮಿಯ ಈ 5G ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ನೊಂದಿಗೆ ಬರುತ್ತದೆ. ಇದು 22,999 ರೂ. ಬದಲಿಗೆ 19,999 ರೂ.ಗೆ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು 900 ರೂ. ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಯಾವುದೇ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 2 ಸಾವಿರ ರೂ. ರಿಯಾಯಿತಿ ಸಿಗಲಿದೆ. ವಿನಿಮಯ ಕೊಡುಗೆಯೊಂದಿಗೆ ನೀವು 16,250 ರೂ.ವರೆಗೂ ಉಳಿಸಬಹುದು. ಈ ಎಲ್ಲಾ ಆಫರ್ ಗಳನ್ನು ಕ್ಲೈಮ್ ಮಾಡಿದರೆ ನಿಮಗೆ ಈ ಫೋನ್‌ 849 ರೂ.ಗೆ ಸಿಗುತ್ತದೆ.   

3 /5

Oppo A53s 5G: 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ 5G ಸ್ಮಾರ್ಟ್‌ಫೋನ್ 16,990 ರೂ. ಬದಲಿಗೆ 15,990 ರೂ.ಗೆ ಮಾರಾಟವಾಗುತ್ತಿದೆ. ಈ ಡೀಲ್‌ನಲ್ಲಿ ಲಭ್ಯವಿರುವ ಎಕ್ಸ್‌ ಚೇಂಜ್ ಆಫರ್‌ನೊಂದಿಗೆ ನೀವು 15,200 ರೂ.ವರೆಗೆ ಉಳಿಸಬಹುದು. ಎಕ್ಸ್‌ ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದರೆ ಫೋನ್‌ನ ಬೆಲೆ ನಿಮಗೆ 790 ರೂ. ಆಗುತ್ತದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 900 ರೂ.ಗಳ ಕ್ಯಾಶ್‌ಬ್ಯಾಕ್ ಸಹ ಇದೆ.

4 /5

Poko M3 Pro 5G: Pocoನ ಈ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 15,999 ರೂ.ಗೆ ಮಾರಾಟವಾಗುತ್ತಿದೆ. ಆದರೆ ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ 14,499 ರೂ.ಗೆ ಖರೀದಿಸಬಹುದು. ವಿನಿಮಯ ಕೊಡುಗೆಯೊಂದಿಗೆ ನೀವು13,900 ರೂ.ವರೆಗೆ ಉಳಿಸಲು ಸಾಧ್ಯವಾಗುತ್ತದೆ. ಈ ರೀತಿ ನೀವು ಈ ಫೋನ್ ಅನ್ನು ಕೇವಲ 599 ರೂ.ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ನೀವು 725 ರೂ. ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು.

5 /5

Realme Narzo 30 5G: ರಿಯಲ್ ಮಿಯ 48MP ಕ್ಯಾಮೆರಾ ಹೊಂದಿರುವ ಈ 5G ಫೋನ್ 16,999 ರೂ.ಗೆ ಲಭ್ಯವಿದೆ. ಇದರ ಮೂಲ ಬೆಲೆ 17,999 ರೂ. ಇದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ನೀವು 850 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು. ಎಕ್ಸ್‌ ಚೇಂಜ್ ಆಫರ್‌ನೊಂದಿಗೆ ನೀವು 16,050 ರೂ.ವರೆಗೆ ರಿಯಾಯಿತಿ ಪಡೆಯುತ್ತೀರಿ. ಈ ಎಲ್ಲಾ ಆಫರ್ ಗಳನ್ನು ಕ್ಲೈಮ್ ಮಾಡಿಕೊಂಡರೆ ನಿಮಗೆ ಈ ಫೋನ್‌ ಕೇವಲ 99 ರೂ.ಗೆ ಸಿಗಲಿದೆ.