ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಶುಂಠಿ

 ಶುಂಠಿಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್, ಮೈಗ್ರೇನ್, ಹೃದಯಾಘಾತ, ರಕ್ತದೊತ್ತಡ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.  ಶುಂಠಿಯಲ್ಲಿ ಅನೇಕ ಔಷಧೀಯ ಗುಣಗಳು ಕಂಡು ಬರುತ್ತವೆ. 

ಬೆಂಗಳೂರು : ಶುಂಠಿಯು ಕೊಲೆಸ್ಟ್ರಾಲ್ ಅನ್ನು  ಬರ್ನ್ ಮಾಡಲು ಸಹಾಯಕವಾಗಿದೆ. ಕೊಲೆಸ್ಟ್ರಾಲ್ ಕಡಿಮೆಯಾದರೆ ಹೃದಯಾಘಾತದ ಅಪಾಯ ಕೂಡಾ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಲ್ಲದಿದ್ದರೆ, ಶುಂಠಿಯನ್ನು ಸೇವಿಸಿದರೆ ಪ್ರಯೋಜನವಾಗಲಿದೆ. ಶುಂಠಿಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್, ಮೈಗ್ರೇನ್, ಹೃದಯಾಘಾತ, ರಕ್ತದೊತ್ತಡ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.  ಶುಂಠಿಯಲ್ಲಿ ಅನೇಕ ಔಷಧೀಯ ಗುಣಗಳು ಕಂಡು ಬರುತ್ತವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ವೈರಲ್ ಸೋಂಕಿನಿಂದ ರಕ್ಷಣೆ: ಶುಂಠಿಯಲ್ಲಿ ವಿಟಮಿನ್ ಎ, ವಿಟಮಿನ್ ಡಿ, ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿವೆ.  ಇದರಿಂದಾಗಿ ಅನೇಕ ರೋಗಗಳು ನಿವಾರಣೆಯಾಗುತ್ತವೆ. ಮತ್ತೊಂದೆಡೆ, ಶುಂಠಿಯನ್ನು ಸೇವಿಸುವ ಮೂಲಕ, ಶೀತ ಮತ್ತು ಕೆಮ್ಮುಗಳಂತಹ ವೈರಲ್ ಸೋಂಕುಗಳಿಂದ ಕೂಡಾ ಮುಕ್ತಿ ಪಡೆಯಬಹುದು.   

2 /4

ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ: ಇದಲ್ಲದೆ, ಶುಂಠಿಯು ಜೀರ್ಣಕ್ರಿಯೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಇದು ಪರಿಣಾಮಕಾರಿ ಕೆಲಸ ಮಾಡುತ್ತದೆ ಎನ್ನಲಾಗುತ್ತದೆ. 

3 /4

ವಾಂತಿಯನ್ನು ನಿವಾರಿಸುತ್ತದೆ:  ವಾಂತಿಯಾ ಸಮಸ್ಯೆ ಕಾಡುತ್ತಿದ್ದರೆ ಹಸಿ ಶುಂಠಿಯನ್ನು ಸೇವಿಸಬಹುದು. ಇದು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. 

4 /4

ಮಹಿಳೆಯ ಆರೋಗ್ಯಕ್ಕೆ : ಸಮಯಕ್ಕೆ ಸರಿಯಾಗಿ ಋತುಮತಿಯಾಗದ ಮಹಿಳೆಯರೂ ಶುಂಠಿಯನ್ನು ಸೇವಿಸಬಹುದು. ಇದರಿಂದ ಅವರಿಗೆ ಅನುಕೂಲವಾಗುತ್ತದೆ. ಮುಟ್ಟಿನ ನೋವು ಕೂಡ ನಿವಾರಣೆಯಾಗುತ್ತದೆ.   ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)