Guava Leaves: ಈ ಐದು ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ನಾಶ ಮಾಡುತ್ತದೆ ಪೇರಳೆ ಎಲೆ !

Guava Leave Benefits for health:ಆಂಟಿಫಂಗಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಈ ಎಲೆಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ಕಿತ್ತು ಹಾಕುತ್ತದೆ. 

Guava Leave Benefits for health : ಪೇರಳೆ  ಹಣ್ಣಿನ ಪೋಷಕಾಂಶಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ನಮಗೆ ಮಾಹಿತಿ ಇದ್ದೇ ಇರುತ್ತದೆ. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಗಳು ಕೂಡಾ ಆರೋಗ್ಯ ಸಂಜೀವಿನಿ ಇದ್ದ ಹಾಗೆ. ಆಂಟಿಫಂಗಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಈ ಎಲೆಗಳು, ಅನೇಕ ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ಕಿತ್ತು ಹಾಕುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹಲ್ಲುನೋವಿನಿಂದ ಬಳಲುತ್ತಿದ್ದರೆ ಪೇರಳೆ ಎಲೆಗಳನ್ನು ಅಗಿಯಬೇಕು. ಅಥವಾ ಪೇರಳೆ ಎಲೆಗಳನ್ನು ಕುದಿಸಿದ ನೀರಿನಿಂದ ಗಾರ್ಗಲ್ ಮಾಡಬೇಕು. ಹೀಗೆ ಮಾಡಿದರೆ ಹಲ್ಲು ನೋವಿನಿಂದ ಪರಿಹಾರ ಸಿಗುತ್ತದೆ. 

2 /5

ಬಾಯಿ ಹುಣ್ಣು ನಿವಾರಣೆಗೆ ಕೂಡಾ ಪೇರಳೆ ಎಲೆಗಳು ಸಹಾಯ ಮಾಡುತ್ತವೆ. ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ಮತ್ತು ಆ ನೀರಿನಿಂದ ಬಾಯಿ ಮುಕ್ಕಳಿಸುತ್ತಾ  ಇದ್ದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.    

3 /5

ವಾಕರಿಕೆ ಮತ್ತು ವಾಂತಿಯ ಸಂದರ್ಭದಲ್ಲಿ, ಪೇರಳೆ ಎಲೆಗಳ ಕಷಾಯವು ತ್ವರಿತ ಪರಿಹಾರವನ್ನು ನೀಡುತ್ತದೆ. ಈ ಕಷಾಯವನ್ನು ದಿನಕ್ಕೆ 2-3 ಬಾರಿ ಕುಡಿಯುವುದರಿಂದ ವಾಂತಿ ಸಮಸ್ಯೆ ಕಡಿಮೆಯಾಗುತ್ತದೆ. 

4 /5

ಪೇರಳೆ ಎಲೆಗಳು ಅಸ್ತಮಾ ರೋಗಿಗಳಿಗೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಅಸ್ತಮಾದಿಂದ ಬಳಲುತ್ತಿದ್ದರೆ ಪೇರಳೆ ಎಲೆ ಇದರಿಂದ ಪರಿಹಾರ ಸಿಗುತ್ತದೆ. 

5 /5

ಪೇರಳೆ ಎಲೆಗಳನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.   (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)