ಟಿವಿ, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಕ್ರೀಡೆ, ವಾಹನ ಉತ್ಪನ್ನಗಳು, ಆಟಿಕೆಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ನೀವು ದೊಡ್ಡ ರಿಯಾಯಿತಿಯನ್ನು ಪಡೆಯುತ್ತೀರಿ.
Amazon Mega Salary Days: ಸಂಬಳ ವರ್ಗದ ಜನರಿಗೆ ಅಮೆಜಾನ್ ಹೊಸ ವರ್ಷದ ಉಡುಗೊರೆಯನ್ನು (Happy New Year 2021) ವಿಶೇಷವಾಗಿ ತರುತ್ತಿದೆ. ಹೊಸ ವರ್ಷದಲ್ಲಿ ಜನವರಿ 1 ರಿಂದ ಜನವರಿ 3 ರವರೆಗೆ ಸಂಬಳ ಪಡೆಯುವವರಿಗೆ ಮೆಗಾ ಸಂಬಳ ದಿನಗಳ ಮಾರಾಟದಿಂದ ಹೆಚ್ಚು ಲಾಭ ಗಳಿಸಲು ಸಾಧ್ಯವಾಗಬಹುದು. ಹೊಸ ವರ್ಷವನ್ನು ಸ್ವಾಗತಿಸುವ ಸಲುವಾಗಿ ಅಮೆಜಾನ್.ಕಾಮ್ ಈ ಮಾರಾಟವನ್ನು ಘೋಷಿಸಿದೆ. ಇದರ ಅಡಿಯಲ್ಲಿ ಟಿವಿ, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಕ್ರೀಡೆ, ವಾಹನ ಉತ್ಪನ್ನಗಳು, ಆಟಿಕೆಗಳು ಸೇರಿದಂತೆ ಅನೇಕ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುವುದು. ಐಎಎನ್‌ಎಸ್‌ನ ಸುದ್ದಿಯ ಪ್ರಕಾರ ಗ್ರಾಹಕರು ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಉತ್ಪನ್ನಗಳನ್ನು ಅಮೆಜಾನ್ (Amazon) ನಲ್ಲಿ ಜನವರಿ 1 ರಿಂದ ಜನವರಿ 3 ರವರೆಗೆ ಆಕರ್ಷಕ ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
ಸುದ್ದಿಯ ಪ್ರಕಾರ ಅಮೆಜಾನ್.ಕಾಂನಲ್ಲಿನ ಮೆಗಾ ಸ್ಯಾಲರಿ ಡೇಸ್ ಕೊಡುಗೆಯಲ್ಲಿ ಸ್ಯಾಮ್ಸಂಗ್, ಎಲ್ಜಿ, ವಿರ್ಲ್ಪೂಲ್, ಐಎಫ್ಬಿ, ಗೋದ್ರೇಜ್ (Samsung, LG, Whirlpool, IFB, Godrej) ಸೇರಿದಂತೆ ಗ್ರಾಹಕರು ದೊಡ್ಡ ಬ್ರಾಂಡ್‌ಗಳ ದುಬಾರಿ ಉತ್ಪನ್ನಗಳಲ್ಲಿ ಭಾರಿ ರಿಯಾಯಿತಿ ಪಡೆಯಬಹುದು. ಹೋಂಟೌನ್, ಕಾಯಿರ್‌ಫಿಟ್, ಸ್ಲೀಪ್‌ವೆಲ್, ಬೋಟ್ಗಳು, ಸೋನಿ, ಜೆಬಿಎಲ್ ಗಳ ಮೇಲೂ ರಿಯಾಯಿತಿ ನೀಡಲಾಗುವುದು. ಇದನ್ನೂ ಓದಿ : New Year's Eve Party: ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್, Night curfew ಜಾರಿ
ಅಮೆಜಾನ್‌ನ ಈ ಸೇಲ್ ನಲ್ಲಿ ದೊಡ್ಡ ಉಪಕರಣಗಳಿಗೆ 40 %, ಹೆಚ್ಚು ಮಾರಾಟವಾಗುವ ವಾಷಿಂಗ್ ಮೆಶನ್ ಗಳಿಗೆ 35 ಪ್ರತಿಶತ ಮತ್ತು ಹವಾನಿಯಂತ್ರಣಗಳಿಗೆ 35 ಪ್ರತಿಶತ ರಿಯಾಯಿತಿ ನೀಡಲಾಗುವುದು. ಇವುಗಳಲ್ಲದೆ ಗ್ರಾಹಕರು ಮೈಕ್ರೊವೇವ್‌ಗಳಿಗೆ 40 ಪ್ರತಿಶತದಷ್ಟು ರಿಯಾಯಿತಿ ಮತ್ತು ಟಿವಿ ಸೆಟ್‌ಗಳಲ್ಲಿ 30 ಪ್ರತಿಶತದಷ್ಟು ರಿಯಾಯಿತಿಯನ್ನು ಸಹ ಪಡೆಯಬಹುದು. ಇದನ್ನೂ ಓದಿ : New Year : ಬೆಂಗಳೂರಿನಲ್ಲಿ ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ; ಇಂದು ಏನಿರುತ್ತೆ, ಏನಿರಲ್ಲ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..
ನೀವು ಬ್ಯಾಂಕ್ ಆಫ್ ಬರೋಡಾ (Bank of Baroda) ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಮತ್ತು ಇವುಗಳಲ್ಲಿ ವಸ್ತುಗಳನ್ನು ಖರೀದಿಸುವುದರಿಂದ ನೀವು ಅದರಲ್ಲಿ 10% ತ್ವರಿತ ರಿಯಾಯಿತಿ ಪಡೆಯಬಹುದು. ಅಂದರೆ 1,250 ರೂ. ಲಾಭ ಪಡೆಯಬಹುದು. ಇದಲ್ಲದೆ ಇಎಂಐ ವಹಿವಾಟಿಗೆ 1500 ರೂ.ವರೆಗೆ ರಿಯಾಯಿತಿ ಇರುತ್ತದೆ.