ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಾಲಿನಲ್ಲಿ ಕಾಣಿಸುತ್ತದೆ ಈ ಲಕ್ಷಣಗಳು

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದಂತೆ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಖರವಾಗಿ ಪತ್ತೆ ಹಚ್ಚಬೇಕಾದರೆ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು.  

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ನಾವು ಅನುಸರಿಸುತ್ತಿರುವ ತಪ್ಪು ಜೀವನಶೈಲಿಯ ಪರಿಣಾಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ.   ಆಹಾರದಲ್ಲಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇರಿಸುವುದು ಕೂಡಾ,  ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದಂತೆ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಖರವಾಗಿ ಪತ್ತೆ ಹಚ್ಚಬೇಕಾದರೆ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು.  ಇದಲ್ಲದೆ, ಬೊಜ್ಜು ಮತ್ತು ಹೃದಯದ ಸುತ್ತ ಕಾಣಿಸಿಕೊಳ್ಳುವ ನೋವು ಕೂಡಾ ಅಧಿಕ ಕೊಲೆಸ್ಟ್ರಾಲ್‌ನ ಕಾರಣದಿಂದ ಉಂಟಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪಾದಗಳು ಇದ್ದಕ್ಕಿದ್ದಂತೆ ತಣ್ಣಗಾಗುತ್ತಿದ್ದರೆ ಇದನ್ನು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣವೆಂದು ಹೇಳಬಹುದು. ಚಳಿಗಾಲದಲ್ಲಿ ಪಾದಗಳು ತಣ್ಣಗಾಗುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲಿಯೂ ಪಾದಗಳು ತಣ್ಣಗಾಗುತ್ತಿದ್ದರೆ ಇದು  ಅಧಿಕ ಕೊಲೆಸ್ಟ್ರಾಲ್ ನ ಸಂಕೇತವಾಗಿರಬಹುದು.   

2 /5

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಈ ಕಾರಣದಿಂದಾಗಿ, ದೇಹದಲ್ಲಿ ರಕ್ತಸ್ರಾವದ ವೇಗ ಕಡಿಮೆಯಾಗುತ್ತದೆ. ಹೀಗಾದಾಗ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. 

3 /5

ಹೆಚ್ಚಿನ ಕೊಲೆಸ್ಟ್ರಾಲ್ ಕಾರಣ, ಕಾಲುಗಳ ಉಗುರುಗಳ ಬಣ್ಣವು ಬದಲಾಗಬಹುದು. ಉಗುರುಗಳ ಸುತ್ತಲಿನ ಚರ್ಮದ ಬಣ್ಣವೂ ಬದಲಾಗುತ್ತದೆ. ಇದಲ್ಲದೆ, ಉಗುರುಗಳು ದಪ್ಪವಾಗುತ್ತವೆ ಮತ್ತು ನಿಧಾನವಾಗಿ ಬೆಳೆಯುತ್ತವೆ.   

4 /5

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಪಾದಗಳಲ್ಲಿ ಅಥವಾ ಪಾದದ ಕೆಳಗೆ ಆದ ಗಾಯ ದೀರ್ಘಕಾಲದವರೆಗೆ ವಾಸಿಯಾಗುವುದಿಲ್ಲ. ರಕ್ತ ಪರಿಚಲನೆ ಸರಿಯಾಗಿರದಿದ್ದರೂ ಈ ಸಮಸ್ಯೆ ಸಂಭವಿಸಬಹುದು.   

5 /5

ನಡೆಯುವಾಗ ಇದ್ದಕ್ಕಿದ್ದಂತೆ ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುವುದು ಕೊಲೆಸ್ಟ್ರಾಲ್ ಹೆಚ್ಚಾಗಿರುವ ಲಕ್ಷಣವಾಗಿರಬಹುದು.  ಇದರಿಂದ ಸ್ನಾಯುಗಳಿಗೂ ಹಾನಿಯಾಗುತ್ತದೆ.