Railways: ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ಕಿ.ಮೀ ಓಡುತ್ತದೆ? ರೈಲಿನ ಮೈಲೇಜ್ ಹೇಗಿದೆ ಗೊತ್ತಾ?

Indian Railways: ಸಾಮಾನ್ಯವಾಗಿ ಹೆಚ್ಚಿನ ಜನರು ಭಾರತೀಯ ರೈಲ್ವೆಯನ್ನು ತಮ್ಮ ದೂರದೂರುಗಳ ಪ್ರಯಾಣಕ್ಕೆ ಬಳಸುತ್ತಾರೆ. ಖರ್ಚು ಕಡಿಮೆ, ಆರಾಮದಾಯಕ ಪ್ರಯಾಣವು ಸಿಗುತ್ತದೆ ಎಂಬ ಉದ್ದೇಶದಿಂದ ಜನಸಾಮಾನ್ಯರು ಈ ಸಾರಿಗೆಯನ್ನೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ಈ ರೈಲಿಗೆ ಬೇಕಾಗಿರುವ ಇಂಧನ ಯಾವುದು? ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ಕಿ.ಮೀ ಓಡುತ್ತದೆ? ಇದರ ಮೈಲೇಜ್ ಎಷ್ಟು ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

1 /5

ಸಾಮಾನ್ಯವಾಗಿ ಹೆಚ್ಚಿನ ಜನರು ಭಾರತೀಯ ರೈಲ್ವೆಯನ್ನು ತಮ್ಮ ದೂರದೂರುಗಳ ಪ್ರಯಾಣಕ್ಕೆ ಬಳಸುತ್ತಾರೆ. ಖರ್ಚು ಕಡಿಮೆ, ಆರಾಮದಾಯಕ ಪ್ರಯಾಣವು ಸಿಗುತ್ತದೆ ಎಂಬ ಉದ್ದೇಶದಿಂದ ಜನಸಾಮಾನ್ಯರು ಈ ಸಾರಿಗೆಯನ್ನೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ಈ ರೈಲಿಗೆ ಬೇಕಾಗಿರುವ ಇಂಧನ ಯಾವುದು? ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ಕಿ.ಮೀ ಓಡುತ್ತದೆ? ಇದರ ಮೈಲೇಜ್ ಎಷ್ಟು ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

2 /5

ರೈಲಿನ ಮೈಲೇಜ್, ಪುನರಾವರ್ತಿತ ಬ್ರೇಕಿಂಗ್, ಕ್ಲೈಂಬಿಂಗ್ ಎತ್ತರ, ಹೆಚ್ಚು ಅಥವಾ ಕಡಿಮೆ ಲೋಡ್ ಎಳೆಯುವುದು ಸೇರಿದಂತೆ ಎಂಜಿನ್‌ನ ಶಕ್ತಿಯನ್ನು ಅವಲಂಬಿಸಿರುತ್ತದೆ. ಪ್ರತಿನಿತ್ಯ ದೇಶದ ಲಕ್ಷಗಟ್ಟಲೆ ಜನರನ್ನು ಅವರು ತಲುಪಬೇಕಾದ ಸ್ಥಳಕ್ಕೆ ಕರೆದೊಯ್ಯುವ ಸಾರಿಗೆ ವ್ಯವಸ್ಥೆಯಾಗಿದೆ. ಇನ್ನು ಈ ರೈಲಿನಲ್ಲಿ ಓಡಾಡುವಾಗ, ಡೀಸೆಲ್ ಇಂಜಿನ್‌ನಲ್ಲಿ ಚಲಿಸುವ ರೈಲಿನ ಮೈಲೇಜ್ ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಮೈಲೇಜ್ ಎಂದರೆ ಒಂದು ಲೀಟರ್ ಇಂಧನದಲ್ಲಿ ಎಷ್ಟು ಕಿಲೋಮೀಟರ್ ಓಡುತ್ತದೆ ಎಂಬುದಾಗಿದೆ.

3 /5

ರೈಲಿನ ಮೈಲೇಜ್ ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಏಕೆಂದರೆ ಒಂದಲ್ಲ ಹಲವು ಮಾನದಂಡಗಳು ಇದಕ್ಕೆ ಸೇರ್ಪಡೆಯಾಗುತ್ತವೆ.

4 /5

ರೈಲಿನ ಮೈಲೇಜ್ ಕೂಡ ಆ ರೈಲಿನಲ್ಲಿರುವ ಕೋಚ್‌’ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಕಡಿಮೆ ಬೋಗಿಗಳಲ್ಲಿ ಇಂಜಿನ್ ಮೇಲೆ ಕಡಿಮೆ ಒತ್ತಡವಿರುತ್ತದೆ. ಹೀಗಾಗಿ ಅದರ ಶಕ್ತಿ ಹೆಚ್ಚುತ್ತದೆ. ಆದರೆ ಡೀಸೆಲ್ ಇಂಜಿನ್ ರೈಲುಗಳ ಮೈಲೇಜ್ ಅನ್ನು ಗಂಟೆಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

5 /5

ರೈಲಿನಲ್ಲಿ 12 ಕೋಚ್‌ಗಳಿದ್ದರೆ, ಆ ಪ್ಯಾಸೆಂಜರ್ ರೈಲು ಒಂದು ಕಿಲೋಮೀಟರ್ ಪ್ರಯಾಣಿಸಲು 6 ಲೀಟರ್ ಡೀಸೆಲ್ ಬಳಸುತ್ತದೆ. ಆದರೆ, ರೈಲಿನ ಮೈಲೇಜ್ ಅನ್ನು ಗಂಟೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅಂದರೆ, ಒಂದು ಗಂಟೆಯಲ್ಲಿ ರೈಲು ಎಷ್ಟು ಪ್ರಯಾಣಿಸುತ್ತದೆ ಎಂಬುದರ ಆಧಾರದ ಮೇಲೆ ಮೈಲೇಜ್ ಅನ್ನು ಲೆಕ್ಕಹಾಕಲಾಗುತ್ತದೆ.