Migraine: ನೀವೂ ಕೂಡ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಡಯಟ್ನಲ್ಲಿರಲಿ ಈ ಆಹಾರ

             

ಇತ್ತೀಚಿನ ದಿನಗಳಲ್ಲಿ ಜನರು ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮೈಗ್ರೇನ್  (Migraine) ಕೂಡ ಒಂದು. ಮೈಗ್ರೇನ್ ಸಂದರ್ಭದಲ್ಲಿ, ಭಯಾನಕ ತಲೆನೋವು (Headache) ಇರುತ್ತದೆ. ಈ ವೇಳೆ ಹಲವರಿಗೆ ವಾಂತಿ ಕೂಡ ಉಂಟಾಗುತ್ತದೆ. ಇದು ಮಾತ್ರವಲ್ಲ, ಅಂತಹವರು ಯಾವುದೇ ರೀತಿಯ ಧ್ವನಿ ಮತ್ತು ಬೆಳಕಿಗೆ ಹೆಚ್ಚು ಸಂವೇದನಾಶೀಲರಾಗುತ್ತಾರೆ. ಹಲವು ಸಂದರ್ಭಗಳಲ್ಲಿ ಆಹಾರ ಸೇವನೆಯ ಬಳಿಕ ಅಥವಾ ಸ್ವಲ್ಪ ಸಮಯ ಮಲಗಿ-ಎದ್ದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಇದು ಹಲವಾರು ದಿನಗಳವರೆಗೆ ತೊಂದರೆಯನ್ನು ಉಂಟುಮಾಡುತ್ತದೆ. ಮೈಗ್ರೇನ್ ನೋವು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೀವು ತೊಂದರೆಗೊಳಗಾಗುತ್ತೀರಿ. ತಜ್ಞರ ಪ್ರಕಾರ, ಮೈಗ್ರೇನ್ ಸಮಸ್ಯೆ ಇರುವವರು ತಮ್ಮ ಡಯಟ್ ನಲ್ಲಿ ಕೆಲವು ಆಹಾರಗಳನ್ನು ಸೇರಿಸುವರಿಂದ ಪ್ರಯೋಜನವನ್ನು ಪಡೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ಸಾಕಷ್ಟು ಪ್ರಮಾಣದ ಮೆಗ್ನೀಸಿಯಮ್ ಇರುವ ಆಹಾರಗಳು ಹೆಚ್ಚು ಲಾಭದಾಯವಾಗಲಿವೆ ಎಂದು ಹೇಳಲಾಗುತ್ತದೆ. ಸಮಯೋಚಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಈ ಎರಡೂ ವಿಷಯಗಳು ಮೈಗ್ರೇನ್ಗೆ ಪರಿಹಾರವಾಗಿದೆ. ಆರೋಗ್ಯಕರ ಆಹಾರವನ್ನು ತೆಗೆದುಕೊಂಡರೆ, ನೀವು ಮೈಗ್ರೇನ್ ಸಮಸ್ಯೆಯನ್ನು ಬಹಳ ಮಟ್ಟಿಗೆ ನಿಯಂತ್ರಿಸಬಹುದು. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ನೀವು ಕೆಲವು ವಿಶೇಷ ವಿಷಯಗಳನ್ನು ಸೇರಿಸಿಕೊಳ್ಳಬೇಕು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸಮುದ್ರ ಮೀನುಗಳಲ್ಲಿ ಸಾಕಷ್ಟು ಪ್ರಮಾಣದ ಒಮೆಗಾ 3 ಇದ್ದು, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮುದ್ರಾಹಾರದಲ್ಲಿ ವಿಶೇಷವಾಗಿ ಮೀನಿನಲ್ಲಿ ಇರುವ ಪ್ರೋಟೀನ್ ಮತ್ತು ಉತ್ತಮ ಕೊಬ್ಬಿನಂಶ ನಿಮಗೆ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.  

2 /5

ಹಲವು ಬಾರಿ ಮೈಗ್ರೇನ್ ನೋವು (Migraine Headache) ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಉಂಟಾಗುತ್ತದೆ. ಈ ಸಂದರ್ಭದಲ್ಲಿ, ಮೊಸರು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಇದು ನಿರ್ಜಲೀಕರಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ- Dandruff Remedies: ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

3 /5

ಹಣ್ಣುಗಳು ಮತ್ತು ತರಕಾರಿಗಳ (Fruit and vegetables) ಮೂಲಕ ನಿಮ್ಮ ದೇಹವು ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ. ಇದರೊಂದಿಗೆ, ನಿಮ್ಮ ಜೀವಕೋಶಗಳು ಯಾವುದೇ ರೀತಿಯ ರೋಗ ಮತ್ತು ನೋವಿನ ವಿರುದ್ಧ ಹೋರಾಡಲು ಸಮರ್ಥವಾಗುತ್ತವೆ. ಇದನ್ನೂ ಓದಿ-

4 /5

ನಿಮ್ಮ ದೇಹವನ್ನು ಹೈಡ್ರೇಟ್ ಮಾಡುವ ಯಾವುದೇ ಆಹಾರವೂ ಮೈಗ್ರೇನ್ ನೋವಿನಿಂದ ಪರಿಹಾರ ನೀಡುತ್ತದೆ. ವಿವಿಧ ರೀತಿಯ ಗಿಡಮೂಲಿಕೆ ಚಹಾವು ರುಚಿಯಲ್ಲಿ ಮಾತ್ರವಲ್ಲ, ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ಉದಾಹರಣೆಗೆ, ಪುದೀನಾ ಚಹಾವು ಸೈನಸ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ತಲೆನೋವನ್ನು ಕೂಡ ಕಡಿಮೆ ಮಾಡುತ್ತದೆ.  

5 /5

ಅಗಸೆ ಬೀಜಗಳು, ಚಿಯಾ ಬೀಜಗಳು ಮತ್ತು ಗೋಡಂಬಿಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವು ಮೈಗ್ರೇನ್ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ನೀವು ಈ ವಿಷಯಗಳನ್ನು ಸೇರಿಸಿದರೆ, ನಂತರ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.