ಕೋವಿಶೀಲ್ಡ್ ಲಸಿಕೆಯ ಒಡೆಯ ಆದಾರ್ ಪೂನವಾಲಾ ಐಷಾರಾಮಿ ಜೀವನ ಹೇಗಿದೆ ಗೊತ್ತಾ..?

ಆದಾರ್ ಪೂನವಾಲಾ ಮುಂಬೈನ ದೊಡ್ಡ ಆಸ್ತಿಗಳಲ್ಲಿ ಒಂದಾದ ‘ದಿ ಲಿಂಕನ್ ಹೌಸ್’ನ ಹೆಮ್ಮೆಯ ಮಾಲೀಕರಾಗಿದ್ದಾರೆ.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದಾರ್ ಪೂನವಾಲಾ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಖ್ಯಾತ ಇಂಟಿರಿಯರ್ ಡಿಸೈನರ್ ಸುಸೇನ್ ಖಾನ್ ವಿನ್ಯಾಸಗೊಳಿಸರುವ ಬರೋಬ್ಬರಿ 247 ಎಕರೆ ವಿಸ್ತಾರವಾದ ಆಸ್ತಿಯಲ್ಲಿ ಅವರು ವಾಸಿಸುತ್ತಿದ್ದಾರೆ. ಮುಂಬೈನ ದೊಡ್ಡ ಆಸ್ತಿಗಳಲ್ಲಿ ಒಂದಾದ ‘ದಿ ಲಿಂಕನ್ ಹೌಸ್’ನ ಹೆಮ್ಮೆಯ ಮಾಲೀಕರಾಗಿದ್ದಾರೆ.  ಪೂನವಾಲಾ ಖಾಸಗಿ ಜೆಟ್ ಗಳನ್ನೂ ಕೂಡ ಹೊಂದಿದ್ದಾರೆ. SII ಬಾಸ್ ಮಾಲೀಕತ್ವದ ಎಲ್ಲಾ ಐಷಾರಾಮಿ ಖಾಸಗಿ ಜೆಟ್‌ಗಳ ಬಗೆಗಿನ ಮಾಹಿತಿ ಇಲ್ಲಿ ನೀಡಲಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

1 /5

ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನವಾಲಾ.

2 /5

11,112 ಕಿಮೀ ವ್ಯಾಪ್ತಿಯೊಂದಿಗೆ ಗ್ಲೋಬಲ್ 6000 (VT-CDP) ಅತ್ಯಂತ ಸುಲಭವಾಗಿ ಮತ್ತು ಆರಾಮವಾಗಿ ಡಬ್ಲಿನ್, ಪ್ಯಾರಿಸ್, ಟೋಕಿಯೊ, ಸಿಂಗಾಪುರ, ಬಾಲಿ ಮತ್ತು ಹೆಚ್ಚಿನ ನಗರಗಳಿಗೆ ತಡೆರಹಿತವಾಗಿ ಹಾರಬಲ್ಲದು. ಈ ಖಾಸಗಿ ಜೆಟ್‌ನಲ್ಲಿ 12 ಸದಸ್ಯರು ಮತ್ತು 4 ಸಿಬ್ಬಂದಿಗಳಿಗೆ ಆಸನ ವ್ಯವಸ್ಥೆ ಇದೆ.

3 /5

ಲಸಿಕೆ ಉದ್ಯಮಿ ಆದಾರ್ ಪೂನವಾಲಾ ಗಲ್ಫ್‌ಸ್ಟ್ರೀಮ್ 550 ಅನ್ನು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಈ ಜೆಟ್ ಬಗ್ಗೆ ಮಾತನಾಡಿದ್ದ ಅವರು, ಐಷಾರಾಮಿ ಜೆಟ್ 13 ಗಂಟೆಗಳ ವ್ಯಾಪ್ತಿಯನ್ನು ಹೊಂದಿದೆ. ಒಂದೆ ಬಾರಿಗೆ ಜಗತ್ತಿನ ಯಾವುದೇ ಪ್ರದೇಶಕ್ಕೂ ಅದು ಕರೆದೊಯ್ಯಬಹುದಾದ ಸಾಮರ್ಥ್ಯವನ್ನು ಹೊಂದಿದೆ ಅಂತಾ ಹೇಳಿದ್ದರು. ಯಾವುದೇ ಖಂಡದ ಆಹಾರವನ್ನು ಬಯಸಿದಾಗ ಈ ಜೆಟ್ ನಲ್ಲಿ ಲಭ್ಯವಿರಲಿದೆ. ತಮ್ಮ ಸ್ನೇಹಿತರೊಂದಿಗೆ ಪೂನವಾಲಾ ದೇಶದ ಯಾವುದೇ ಮೂಲೆಗೆ ಹೋದರೂ ಕೂಡ ತಾವು ಬಯಸಿದ ಆಹಾರದ ವ್ಯವಸ್ಥೆಯನ್ನು ಮಾಡುವ ಸ್ಟಾರ್ ಬಾಣಸಿಗರು ಈ ಜೆಟ್ ನಲ್ಲಿ ಇರುತ್ತಾರೆ.  ​

4 /5

ಪುಣೆ ಮತ್ತು ಮುಂಬೈ ನಡುವೆ ಹಾರಲು ಅದಾರಾ ಪೂನವಾಲಾ ಮತ್ತು ಅವರ ಕುಟುಂಬ ಸದಸ್ಯರು Airbus H145 ಅನ್ನು ಬಳಸುತ್ತಾರೆ. ಏರ್ ಬಸ್ H145 ಹೆಲಿಕಾಪ್ಟರ್ ಗಟ್ಟಿಯಾದ ರೋಟರ್ ಗಳನ್ನು ಹೊಂದಿದ್ದು, ಇದು ಕ್ಯಾಬಿನ್ ಕಂಪನಗಳನ್ನು ಕಡಿಮೆ ಮಾಡುತ್ತದೆ.

5 /5

ಕೋವಿಶೀಲ್ಡ್ ಲಸಿಕೆ ತಯಾರಕ ಸಂಸ್ಥೆಯಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಆದಾರ್ ಪೂನವಾಲಾ ಅವರ ಭವ್ಯವಾದ ಸ್ಟಡ್ ಫಾರ್ಮ್‌ಹೌಸ್ ಪುಣೆಯಿಂದ 24 ಕಿಮೀ ದೂರದಲ್ಲಿದೆ.