ಇಂಗ್ಲೆಂಡ್’ನಲ್ಲಿ ಬಾಲಿವುಡ್ ನಟಿ ಜೊತೆ ಲವ್…8 ವರ್ಷಗಳ ಡೇಟಿಂಗ್ ಬಳಿಕ ಮದ್ವೆಯಾದ ಟೀಂ ಇಂಡಿಯಾದ ವಿಶ್ವಕಪ್ ವೀರ ಈ ಆಫ್ ಸ್ಪಿನ್ನರ್!

Harbhajan Singh-Geeta Basra Love story: ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಕೇವಲ 18 ನೇ ವಯಸ್ಸಿನಲ್ಲಿ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ ಭಜ್ಜಿ, ನಂತರ ದೀರ್ಘಕಾಲದವರೆಗೆ ಪ್ರತಿ ಸ್ವರೂಪದಲ್ಲಿ ಟೀಂ ಇಂಡಿಯಾದ ತಂಡದ ಸದಸ್ಯರಾಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅದ್ಭುತ ಆಟಗಾರ. ಆದರೆ ಇವೆಲ್ಲದರ ಹೊರತಾಗಿ ಅವರ ಹೆಸರು ಅನೇಕ ವಿವಾದಗಳೊಂದಿಗೆ ಸಂಬಂಧ ತಳುಕು ಹಾಕಿತ್ತು. ಇದರಲ್ಲಿ 2008 ರ ಆಸ್ಟ್ರೇಲಿಯಾ ಸರಣಿಯ ಸಮಯದಲ್ಲಿ ಆಂಡ್ರ್ಯೂ ಸೈಮಂಡ್ಸ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳು ಮತ್ತು IPL ಸಮಯದಲ್ಲಿ ಶ್ರೀಶಾಂತ್ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ.

2 /8

ಅಶಿಸ್ತಿನ ಆರೋಪದ ಮೇಲೆ ಹರ್ಭಜನ್ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ (ಎನ್‌ಸಿಎ) ಹೊರಹಾಕಲಾಯಿತು. ಆದರೆ, ಸಮಯ ಕಳೆದಂತೆ ಹರ್ಭಜನ್ ಈಗ ಗಂಭೀರವಾಗಿದ್ದಾರೆ. ತಮ್ಮ ಸಹ ಟೀಂ ಇಂಡಿಯಾ ಬೌಲರ್ ಶ್ರೀಶಾಂತ್ ಅವರೊಂದಿಗೆ 'ಸ್ಲ್ಯಾಪ್‌ ಗೇಟ್' ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ ವಿಷಾದ ವ್ಯಕ್ತಪಡಿಸಿದ್ದರು.

3 /8

ಅಂದಹಾಗೆ ಹರ್ಭಜನ್ ಅವರ ಲವ್ ಲೈಫ್ ಅದ್ಭುತವಾಗಿದೆ. 8 ವರ್ಷಗಳ ಕಾಲ ಡೇಟಿಂಗ್ ನಂತರ ಅಕ್ಟೋಬರ್ 2015 ರಲ್ಲಿ ನಟಿ ಗೀತಾ ಬಸ್ರಾ ಅವರನ್ನು ವಿವಾಹವಾದರು. ಇಬ್ಬರಿಗೂ ಮಗಳು ಹಿನಾಯಾ ಹೀರ್ ಮತ್ತು ಮಗ ಜೋವನ್ ವೀರ್ ಸಿಂಗ್ ಇದ್ದಾರೆ.

4 /8

ಹರ್ಭಜನ್ ಅವರ ಲವ್ ಸ್ಟೋರಿ ಬಗ್ಗೆ ಹೇಳುವುದಾದರೆ, ಇದು 'ಲವ್ ಅಟ್ ಫಸ್ಟ್ ಸೈಟ್' ಇದ್ದಂತೆ. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಖ್ಯಾತ ಬ್ಯಾಟ್ಸ್ ಮನ್ ಗಳ ವಿಕೆಟ್ ಕಬಳಿಸುತ್ತಿದ್ದ ಭಜ್ಜಿ, ಗೀತಾರನ್ನು ಮೊದಲ ಬಾರಿಗೆ 'ದಿ ಟ್ರೈನ್' ಚಿತ್ರದ 'ವೋಹ್ ಅಜ್ಞಾತಬೀ' ಹಾಡಿನಲ್ಲಿ ನೋಡಿ ಮನಸೋತಿದ್ದರಂತೆ.

5 /8

ಸಂದರ್ಶನವೊಂದರಲ್ಲಿ ಮಾತನಾಡಿದ ಹರ್ಭಜನ್, 'ನಾನು ಈ ಹಾಡನ್ನು ನೋಡಿದಾಗ ಲಂಡನ್‌ನಲ್ಲಿದ್ದೆ. ಹಾಡು ನೋಡಿದ ನಂತರ ಆ ನಟಿ (ಗೀತಾ) ಬಗ್ಗೆ ಯುವರಾಜ್ ಸಿಂಗ್ ಬಳಿ ಕೇಳಿದೆ. ಜೊತೆಗೆ ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದೆ. ನಂತರ ಬಾಲಿವುಡ್ ಚಿತ್ರರಂಗದಲ್ಲಿ ನನ್ನ ಸಂಪರ್ಕಗಳ ಮೂಲಕ ಗೀತಾ ಅವರ ನಂಬರ್ ಪಡೆಯುವಲ್ಲಿ ಯಶಸ್ವಿಯಾಗಿದ್ದೆ. ಇದರ ನಂತರ ಗೀತಾ ಅವರಿಗೆ ಮೆಸೇಜ್ ಮಾಡಿ ಕಾಫಿ ಡೇಟ್ ಕರೆದೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ” ಎಂದು ಭಜ್ಜಿ ಹೇಳಿದ್ದಾರೆ.

6 /8

ಅದಾದ ಬಳಿಕ, ಗೀತಾ ಹರ್ಭಜನ್‌’ಗೆ ಕರೆ ಮಾಡಿ ಟೀಮ್ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗಿದ್ದಕ್ಕೆ ಅಭಿನಂದಿಸಿದ್ದರು. ಇದಾದ ಬಳಿಕವೇ ಅವರ ಪ್ರೇಮಕಥೆ ಮತ್ತೆ ಚಿಗುರೊಡೆಯಿತು. ಇದಾದ ಬಳಿಕ ಹರ್ಭಜನ್ ಐಪಿಎಲ್ ಪಂದ್ಯ ವೀಕ್ಷಿಸಲು ಗೀತಾಗೆ ಆಹ್ವಾನ ನೀಡಿದರೂ ಆಕೆ ಬಂದಿರಲಿಲ್ಲ. ಇದರಂದ ಭಜ್ಜಿ ತುಂಬಾ ಬೇಸರಗೊಂಡಿದ್ದರು. ಆದರೆ, ನಂತರ ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು.

7 /8

ಅಂದಹಾಗೆ ಭಜ್ಜಿ, ಗೀತಾಗೆ ಪ್ರಪೋಸ್ ಮಾಡಿದಾಗ ಅವರು ತಮ್ಮ ವೃತ್ತಿಜೀವನವನ್ನು ಉಲ್ಲೇಖಿಸಿ ನಿರಾಕರಿಸಿದ್ದರಂತೆ. ಆದರೆ, ಈ ನಿರಾಕರಣೆಯ ಹೊರತಾಗಿಯೂ, ಇಬ್ಬರ ನಡುವೆ ನಿಕಟತೆ ಉಳಿದುಕೊಂಡಿತು. ಹೀಗಾಗಿ 8 ವರ್ಷಗಳ ಕಾಲ ಡೇಟಿಂಗ್ ಮಾಡಿದ ಅವರು 2015 ರಲ್ಲಿ ವಿವಾಹವಾದರು. ಭಾರತೀಯ ಮೂಲದ ಗೀತಾ ಬ್ರಿಟನ್‌’ನ ಪೋರ್ಟ್ಸ್‌ಮೌತ್‌ನಲ್ಲಿ ಜನಿಸಿದರು.

8 /8

ಡಿಸೆಂಬರ್ 2022 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತರಾದ ಹರ್ಭಜನ್, ಭಾರತಕ್ಕಾಗಿ 103 ಟೆಸ್ಟ್, 236 ODI ಮತ್ತು 28 T20I ಗಳನ್ನು ಆಡಿದ್ದಾರೆ.