ಗ್ರಹಗಳ ರಾಜಕುಮಾರನ ಬುಧನ ಉದಯ, 3 ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭ!

Mercury Rise In Scorpio: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ವೃಶ್ಚಿಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಒಟ್ಟು 3 ರಾಶಿಗಳ ಜನರಿಗೆ ಧನಲಾಭ ಯೋಗ ಪ್ರಾಪ್ತಿಯಾಗಲಿದೆ, ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ Spiritual News In Kannada, 
 

ಬೆಂಗಳೂರು: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ಅಸ್ತಮಿಸುತ್ತವೆ ಮತ್ತು ಉದಯಿಸುತ್ತವೆ. ಗ್ರಹಗಳ ಈ ಅಸ್ತ-ಉದಯ ಎಲ್ಲಾ ದ್ವಾದಶ ರಾಶಿಗಳ ಜನರು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತವೆ. ಪ್ರಸ್ತುತ ಗ್ರಹಗಳ ರಾಜಕುಮಾರ ಹಾಗೂ ಬುದ್ಧಿಯ ಕಾರಕ ಗ್ರಹ ಬುಧ ವೃಶ್ಚಿಕ ರಾಶಿಯಲ್ಲಿ ಉದಯಿಸಲಿದ್ದಾನೆ. ಬುಧನ ಈ ಉದಯ ಮೂರು ಜಾತಕದವರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಈ ಜನರಿಗೆ ಆಕಸ್ಮಿಕ ಧನಲಾಭ, ವ್ಯಾಪಾರದಲ್ಲಿ ಅಪಾರ ಉನ್ನತಿಯನ್ನು ತಂದುಕೊಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ Spiritual News In Kannada,

 

ಇದನ್ನೂ ಓದಿ-ಸೂರ್ಯ ಗ್ರಹಣದ ಬಳಿಕ ಧನಿಷ್ಟಾ ನಕ್ಷತ್ರಕ್ಕೆ ಶನಿಯ ಎಂಟ್ರಿ, ಈ ಜನರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Mercury Rise In Scorpio: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ವೃಶ್ಚಿಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಒಟ್ಟು 3 ರಾಶಿಗಳ ಜನರಿಗೆ ಧನಲಾಭ ಯೋಗ ಪ್ರಾಪ್ತಿಯಾಗಲಿದೆ, ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ Spiritual News In Kannada,   

2 /5

ತುಲಾ ರಾಶಿ: ತುಲಾ ರಾಶಿಯ ಜಾತಕದವರ ಧನಭಾವದಲ್ಲಿ ಬುಧನ ಈ ಉದಯ ನೆರವೇರಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ನಿಮ್ಮ ಆರ್ಥಿಯ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ಹಣದ ಆಗಮನ ಹೆಚ್ಚಾಗಲಿದೆ. ಹೂಡಿಕೆಯಿಂದಲೂ ಕೂಡ ನಿಮಗೆ ಅಪಾರ ಲಾಭ ಹರಿದು ಬರಲಿದೆ. ಬುಧ ನಿಮ್ಮ ಜಾತಕದ ದ್ವಾದಶ ಭಾವದ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದ್ದು, ಉತ್ತಮ ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ.   

3 /5

ಮಕರ ರಾಶಿ: ಬುಧ ಮಕರ ರಾಶಿಯ ಜಾತಕದವರ ಆದಾಯ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗಲಿದ್ದು, ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಇದಲ್ಲದೆ ನಿಮಗೆ ಪಿತ್ರಾರ್ಜಿತ ಸಂಪತ್ತಿನ ಲಾಭ ಕೂಡ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಆದಾಯದ ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ, ನೌಕರವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದ್ದು, ಜವಾಬ್ದಾರಿಯ ಜೊತೆಗೆ ಪದೋನ್ನತಿ, ಇಂಕ್ರಿಮೆಂಟ್ ಭಾಗ್ಯ ಕೂಡ ಪ್ರಾಪ್ತಿಯಾಗುವ ಸಾಧ್ಯತೆ ಇದೆ.   

4 /5

ಕರ್ಕ ರಾಶಿ: ಬುಧ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಸ್ತಿಪಾಸ್ತಿ-ವಾಹನ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಪಿತ್ರಾರ್ಜಿತ ಸಂಪತ್ತಿನಲ್ಲಿ ಉತ್ತಮ ಪಾಲು ನಿಮ್ಮದಾಗಲಿದೆ. ಈ ಅವಧಿಯಲ್ಲಿ ತಾಯಿ ಜೊತೆಗಿನ ನಿಮ್ಮ ಸಂಬಂಧ ಮಧುರವಾಗಿರಲಿದೆ. ರಿಯಲ್ ಎಸ್ಟೇಟ್, ಆಸ್ತಿಪಾಸ್ತಿ, ನಿವೇಶನ, ಕೇಟರಿಂಗ್ ಕೆಲಸಗಳಲ್ಲಿ ತೊಡಗಿರುವ ಜನರಿಗೆ ಉತ್ತಮ ಲಾಭವಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)