Photos: ಈ ಜಲಪಾತದ ಬಣ್ಣ ಋತುವಿಗೆ ತಕ್ಕಂತೆ ಬದಲಾಗುತ್ತೆ! ಯಾವುದು ಗೊತ್ತಾ?

   

  • Jul 11, 2018, 16:47 PM IST
1 /5

1. ಮಾನ್ಸೂನ್ ದೇಶದಲ್ಲಿ ಹಲವು ನದಿಗಳು ತುಂಬಿ ಹರಿಯುತ್ತವೆ. ಅಷ್ಟೇ ಏಕೆ ಜಲಪಾತಗಳೂ ಧುಮ್ಮಿಕ್ಕಿ ಹರಿಯುತ್ತವೆ. ಅವುಗಳಲ್ಲಿ ಛತ್ತೀಸ್ಘಡದಲ್ಲಿರುವ ಚಿತ್ರಕೋಟ್ ಜಲಪಾತದ ನೋಟ ಬಹಳ ಸುಂದರ. ಬಸ್ತಾರ್ ಜಿಲ್ಲೆಯಲ್ಲಿರುವ ಈ ಜಲಪಾತ ನೋಡಲು ಪ್ರವಾಸಿಗರ ದಂಡೇ ಬರುತ್ತದೆ. ನಕ್ಸಲ್ ಪೀಡಿತ ಪ್ರದೇಶವಾದರೂ ಈ ಸ್ಥಳ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, 'ಭಾರತದ ನಯಾಗರಾ' ಜಲಪಾತ ಎಂದೇ ಪ್ರಸಿದ್ಧಿಯಾಗಿದೆ. 

2 /5

2. ವರ್ಷಪೂರ್ತಿ ತುಂಬಿ ಹರಿಯುವ ಇಂದ್ರಾವತಿ ನದಿಯಿಂದ ನಿರ್ಮಾಣವಾಗಿರುವ ಚಿತ್ರಕೋಟ್ ಜಲಪಾತ, ಒಂದು ಕಿಲೋಮೀಟರ್ ಅಗಲ ಮತ್ತು 90 ಅಡಿ ಎತ್ತರವಿದೆ. ಈ ಜಲಪಾತದ ಪ್ರಮುಖ ಅಂಶವೆಂದರೆ ಋತುವಿನ ಪ್ರಕಾರ ಬಣ್ಣವು ಬದಲಾಗುತ್ತದೆ. ಮಳೆಗಾಲದಲ್ಲಿ ಜಲಪಾತ ಕೆಂಪು ಬಣ್ಣದಲ್ಲಿ ಕಂಡರೆ, ಬೇಸಿಗೆಯಲ್ಲಿ ಹಾಲು ಬಿಳಿ ಬಣ್ಣದಲ್ಲಿರುತ್ತದೆ. ಇನ್ನು ಚಳಿಗಾಲದಲ್ಲಿ ಹಳದಿ ಬಣ್ಣದಲ್ಲಿರುತ್ತದೆ. ಕೆಲವೊಮ್ಮೆ, ಕನಿಷ್ಠ ಮೂರು ಮತ್ತು ಗರಿಷ್ಠ ಏಳು ಈ ಧಾರೆಗಳು ಈ ಜಲಪಾತದಲ್ಲಿ ಕಂಡುಬರುತ್ತವೆ.  

3 /5

3. ಈ ನಯನಮನೋಹರ ಜಲಪಾತವನ್ನು ಹತ್ತಿರದಿಂದ ನೋಡಲು ಪ್ರವಾಸಿಗರು ದೋಣಿಯಲ್ಲಿ ಆಗಮಿಸುತ್ತಾರೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ, ಅಂದರೆ ಮಳೆಗಾಲದಲ್ಲಿ ಈ ಜಲಪಾತ ನೋಡುವುದೇ ಒಂದು ಸೊಗಸು.   

4 /5

4. ಚಿತ್ರಕೋಟ ಜಲಪಾತ ಪಶ್ಚಿಮ ಜಗದಲ್ಪುರ್ ನಗರದಿಂದ 38 ಕಿ.ಮೀ. ಮತ್ತು ರಾಜಧಾನಿ ರಾಯ್ಪುರದಿಂದ 276 ಕಿ.ಮೀ. ದೂರದಲ್ಲಿದೆ.ಈ ಜಲಪಾತ ಇಂದ್ರಾವತಿ ನದಿಯಿಂದ ನಿರ್ಮಾಣವಾಗಿದ್ದು, ಒಡಿಶಾದ ಪಶ್ಚಿಮ ಚಿತ್ರಕೂಟದಿಂದ ಆರಂಭವಾಗಿ ಆಂಧ್ರಪ್ರದೇಶದವರೆಗೆ ಹರಿಯುತ್ತದೆ. ನಂತರ, ಈ ಜಲಪಾತ ಗೋದಾವರಿ ನದಿಯಲ್ಲಿ ವಿಲೀನವಾಗುತ್ತದೆ. ಚಿತ್ರಕೋಟ್ ಕಂಗ್ರಾ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿದೆ. ಈ ಪ್ರದೆಶದಲ್ಲಿ ನೀವು ತೀರ್ಥಗಡ್ ಜಲಪಾತವನ್ನೂ ನೋಡಬಹುದು.

5 /5

5. ರಾಯಪುರ್ ವಿಮಾನ ನಿಲ್ದಾಣದಿಂದ 285 ಕಿ.ಮೀ ದೂರದಲ್ಲಿ ಚಿತ್ರಕೋಟ ಜಲಪಾತವಿದೆ. ಈ ವಿಮಾನ ನಿಲ್ದಾಣ ಭಾರತದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಅದೇ ಸಮಯದಲ್ಲಿ, ಜಗದಲ್ಪುರ ರೈಲು ನಿಲ್ದಾಣವು ಚಿತ್ರಕೋಟಕ್ಕೆ ಬಹಳ ಹತ್ತಿರದ ರೈಲು ನಿಲ್ದಾಣವಾಗಿದ್ದು, ಕೇವಲ 38 ಕಿ.ಮೀ. ದೂರದಲ್ಲಿದೆ. ಇದು ರಾಜಧಾನಿ ರಾಯ್'ಪುರಕ್ಕೆ ರಸ್ತೆ ಮಾರ್ಗದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಝಾನ್ಸಿ, ಅಲಹಾಬಾದ್, ಕಾನ್ಪುರ್ ಇತ್ಯಾದಿಗಳಿಂದ ಸ್ಥಳಗಳಿಂದ ಇಲ್ಲಿಗೆ ಬಸ್ ಸೌಲಭ್ಯವೂ ಇದೆ. (ಫೋಟೊ ಕೃಪೆ: twitter/@GoChhattisgarh)