Post Office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಭರ್ಜರಿ ಲಾಭ ಸಿಗಲಿದೆ!

Post Office Schemes Interest Rates : ಸಾರ್ವಜನಿಕರಿಗೆ ಅಂಚೆ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ನೀವು ಯಾವುದೇ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಯಾವ ಯೋಜನೆಯಲ್ಲಿ ನೀವು ಬಡ್ಡಿಯ ಲಾಭವನ್ನು ಪಡೆಯುತ್ತೀರಿ. ಈ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ ನೋಡಿ..

1 /5

ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಗ್ರಾಹಕರು ಶೇ.4 ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯುತ್ತಾರೆ. ಇದರೊಂದಿಗೆ ಅಂಚೆ ಕಛೇರಿ ಆರ್‌ಡಿಯಲ್ಲಿ ಗ್ರಾಹಕರಿಗೆ ಶೇ.5.80ರಷ್ಟು ಬಡ್ಡಿ ಸಿಗುತ್ತದೆ.

2 /5

ಪೋಸ್ಟ್ ಆಫೀಸ್ ಸಮಯ ಠೇವಣಿ ಯೋಜನೆಯು ಶೇ. 7 ರಷ್ಟು ಬಡ್ಡಿಯ ಲಾಭ ಸಿಗಲಿದೆ. ಇದಲ್ಲದೇ ಅಂಚೆ ಕಛೇರಿಯ ಮಾಸಿಕ ಉಳಿತಾಯ ಯೋಜನೆಯಲ್ಲಿ ಗ್ರಾಹಕರು ಶೇ.7.10ರಷ್ಟು ಬಡ್ಡಿ ಪಡೆಯುತ್ತಿದ್ದಾರೆ.

3 /5

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಅಂಚೆ ಕಚೇರಿ ಗ್ರಾಹಕರಿಗೆ ಶೇ 8ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಇದಲ್ಲದೆ, ನಾವು ಸಾರ್ವಜನಿಕ ಭವಿಷ್ಯ ನಿಧಿಯ ಬಗ್ಗೆ ಮಾತನಾಡಿದರೆ, ಅದು ಶೇ. 7.10 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತದೆ.

4 /5

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹಣ ಹೂಡಿಕೆ ಮಾಡುವವರಿಗೆ ಶೇ. 7 ರ ದರದಲ್ಲಿ ಬಡ್ಡಿ ಸಿಗುತ್ತದೆ. ಅದೇ ಸಮಯದಲ್ಲಿ, ಕಿಸಾನ್ ವಿಕಾಸ್ ಪತ್ರದಲ್ಲಿ ಹಣವನ್ನು ಹೂಡಿಕೆ ಮಾಡುವ ಹೂಡಿಕೆದಾರರು ಶೇಕಡಾ 7.20 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ.

5 /5

ಇದೆಲ್ಲದರ ಹೊರತಾಗಿ, ನಾವು ಸರ್ಕಾರದ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾತನಾಡಿದರೆ, ಈ ಯೋಜನೆಯನ್ನು ದೇಶದ ಹೆಣ್ಣುಮಕ್ಕಳಿಗಾಗಿ ನಡೆಸಲಾಗುತ್ತಿದ್ದು, ಇದರಲ್ಲಿ ಶೇಕಡಾ 7.60 ರ ದರದಲ್ಲಿ ಬಡ್ಡಿಯನ್ನು ಪಡೆಯಲಾಗುತ್ತಿದೆ. ಅದೇ ಸಮಯದಲ್ಲಿ, ಈ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 250 ರೂ.