Punjab Election Result 2022: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಪುಟ್ಟ ಭಗವಂತ ಮಾನ್‌ನ ಫೋಟೋ!

                            

Punjab Election Result 2022:  ಪಂಜಾಬ್‌ನಲ್ಲಿ 117 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ ಮತ್ತು ಫಲಿತಾಂಶಗಳು ಆಮ್ ಆದ್ಮಿ ಪಕ್ಷದ ಏಕಪಕ್ಷೀಯ ಸುನಾಮಿಯನ್ನು ತೋರಿಸುತ್ತವೆ. ಆಮ್ ಆದ್ಮಿ ಪಕ್ಷ 85ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸಾಮಾನ್ಯ ಮುನ್ನಡೆ ಸಾಧಿಸಿದ್ದು, ಈ ನಡುವೆ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸಿಎಂ ಅವರನ್ನು ಹೋಲುವ ಮುದ್ದಾದ ಜೂನಿಯರ್‌ ಭಗವಂತ್‌ ಮಾನ್‌ನ ಫೋಟೋ ಮುನ್ನೆಲೆಗೆ ಬಂದಿದೆ. ಈ ಪುಟ್ಟ ಭಗವಂತ್ ಮಾನ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಭಗವಂತ್ ಮಾನ್ ಗೆಟಪ್ ನಲ್ಲಿ ತಯಾರಾದ ಈ ಮಗು ಈಗಾಗಲೇ ಜೂನಿಯರ್ ಕೇಜ್ರಿವಾಲ್ ರೂಪದಲ್ಲಿ ಕಾಣಿಸಿಕೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಫಲಿತಾಂಶದ ದಿನ, ಬೆಳಿಗ್ಗೆ, ಭಗವಂತ್ ಮಾನ್ ಗುರುದ್ವಾರವನ್ನು ತಲುಪಿ ಪ್ರಾರ್ಥನೆ ಸಲ್ಲಿಸಿದರು. ಅವರು ಸಂಗ್ರೂರಿನ ಗುರುದ್ವಾರ ಗುರುಸಾಗರ್ ಮಸ್ತುವಾನಾ ತಲುಪಿದ್ದರು. ಪಂಜಾಬ್‌ನಲ್ಲಿ, ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಚರಣ್‌ಜಿತ್ ಸಿಂಗ್ ಚನ್ನಿ ಕೂಡ ಗುರುದ್ವಾರದಲ್ಲಿ ಪೂಜೆ ಸಲ್ಲಿಸುವ ಮೂಲಕ ದಿನವನ್ನು ಪ್ರಾರಂಭಿಸಿದರು. 

2 /5

ಇದುವರೆಗಿನ ಟ್ರೆಂಡ್‌ಗಳನ್ನು ಗಮನಿಸಿದರೆ ಆಪ್ ನಾಯಕ ಭಗವಂತ್ ಮಾನ್ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಮೊದಲು ಈ ರಾಜ್ಯದಲ್ಲಿ ಶಿರೋಮಣಿ ಅಕಾಲಿದಳ ಮತ್ತು ಕೆಲವೊಮ್ಮೆ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. 

3 /5

ಪಂಜಾಬ್‌ನ 117 ಸ್ಥಾನಗಳ ಪೈಕಿ 85ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಂಡ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ದೆಹಲಿಯಿಂದ ಪಂಜಾಬ್ ವರೆಗೆ ಆಪ್ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣವಿದೆ. ಇದೇ ವೇಳೆ ಈ ಮಗು ಭಗವಂತ್ ಮಾನ್ ರೂಪದಲ್ಲಿ ಕಾಣಿಸಿಕೊಂಡಿದೆ. 

4 /5

ಈ ಹಿಂದೆ ಈ ಮಗು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಗೆಟಪ್‌ನಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿತ್ತು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ AAP ಗೆಲುವಿನ ನಂತರ, ಈ ಪುಟ್ಟ ಮಗು ಕೇಜ್ರಿವಾಲ್ ಗೆಟಪ್‌ನಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದರು.

5 /5

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲಿಗರೊಬ್ಬರು ತಮ್ಮ ಮಗನಿಗೆ ಭಗವಂತ್ ಮಾನ್ ವೇಷ ಹಾಕಿದ್ದಾರೆ. ಈ ಪುಟ್ಟ ಭಗವಂತ್ ಮಾನ್ ತುಂಬಾ ಮುದ್ದಾಗಿ ಕಾಣುತ್ತಿದ್ದು, ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.