ರಾಜ್ಯಸಭಾ ಚುನಾವಣೆ 2018

  • Mar 23, 2018, 16:19 PM IST
1 /7

6 ರಾಜ್ಯಗಳಲ್ಲಿ 25 ರಾಜ್ಯಸಭಾ ಸ್ಥಾನಗಳ ಮತದಾನ ಮುಂದುವರೆದಿದೆ. 2019 ರ ಲೋಕಸಭಾ ಚುನಾವಣೆಗೆ ಮೊದಲು, ರಾಜ್ಯಸಭಾ ಚುನಾವಣೆಯು ಅನೇಕ ವಿಧಗಳಲ್ಲಿ ವಿಶೇಷವಾಗಿದೆ. ಇಂದಿನ ಮತದಾನವು ಹಲವು ವಿಧಗಳಲ್ಲಿ ವಿಶೇಷವಾಗಿದೆ.

2 /7

ಜೆಡಿಯು ರಾಜ್ಯಸಭೆ ಸದಸ್ಯ ಎಂ.ಪಿ.ವೀರೇಂದ್ರ ಕುಮಾರ್ ರಾಜೀನಾಮೆ ಹಿನ್ನೆಲೆಯಲ್ಲಿ ಕೇರಳದಲ್ಲಿ ತೆರವುಗೊಂಡ ಸ್ಥಾನದಲ್ಲಿ ಮತದಾನ ಮಾಡಲಾಗಿದೆ.

3 /7

ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ 5 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಕಾಂಗ್ರೆಸಿನಿಂದ ಎಲ್. ಹನುಮಂತಯ್ಯ, ನಾಸೀರ್ ಹುಸೇನ್ ಮತ್ತು ಜಿ. ಸಿ. ಚಂದ್ರಶೇಖರ್ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಬಿ. ಎಂ. ಫಾರೂಕ್ ಸ್ಪರ್ಧಿಸಿದ್ದಾರೆ. 

4 /7

ಛತ್ತೀಸ್ಗಢದ ರಾಜ್ಯಸಭಾ ಕ್ಷೇತ್ರಕ್ಕಾಗಿ ಮತ ಚಲಾಯಿಸಿ. ಈ ಚುನಾವಣೆಗಳಲ್ಲಿ, ಬಿಜೆಪಿ ಪರವಾಗಿ ಸರೋಜ್ ಪಾಂಡೆ ಮತ್ತು ಕಾಂಗ್ರೆಸ್ ನಿಂದ ಲೆಖ್ರಾಂ ಸಾಹು ಅವರು ಸ್ಪರ್ಧೆಯಲ್ಲಿದ್ದಾರೆ. ಛತ್ತೀಸ್ಗಢ ರಾಜ್ಯಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ 46 ಮತಗಳ ಅಗತ್ಯವಿದೆ.

5 /7

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಸದಸ್ಯರು ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಚುನಾವಣೆಯಲ್ಲಿ ತಮ್ಮ ಮತವನ್ನು ಬಳಸಿಕೊಳ್ಳಲು ಆಗಮಿಸಿದ್ದ ತೃಣಮೂಲ ಸಂಸದ ಡಾ. ನಿರ್ಮಲ್ ಮಂಜಿ, ಈ ಚುನಾವಣೆ ಆಚರಣೆಯಂತೆ ಇದೆ ಎಂದು ಹೇಳಿದರು.

6 /7

ಅಖಿಲೇಶ್ ಅವರಿಗೆ ಬೆಂಬಲ ನೀಡುವುದಾಗಿ ರಾಜಾ ಭಾಯಿ ಅವರು ಟ್ವೀಟ್ ಮಾಡಿದ್ದಾರೆ. 

7 /7

ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗೆ ಮುಂಚಿತವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಾಸಕರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಉಪಸ್ಥಿತರಿದ್ದರು. (Photo: ANI)