ಕೇವಲ ನಿದ್ದೆಯಿಂದಲೇ ನೀವು ಅಂದುಕೊಂಡಂತೆ ಸಣ್ಣಗಾಗುವುದು ಸಾಧ್ಯ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಒತ್ತಡದ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಬೊಜ್ಜು  ಬೆಳೆಸಿಕೊಳ್ಳುತ್ತಿದ್ದಾರೆ. ಇಂದಿನ ಕಾಲದಲ್ಲಿ ಎಲ್ಲರದ್ದೂ ಅಧಿಕ ತೂಕ ಹೊಂದಿರುವುದೇ ಸಮಸ್ಯೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಬಯಸುವವರೇ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ತೂಕ ಇಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದಾದರೆ ಈ ಸುಲಭ ಉಪಾಯವನ್ನು ಅನುಸರಿಸುವ ಮೂಲಕ ಸಣ್ಣಗಾಗುವುದು ಸಾಧ್ಯವಾಗುತ್ತದೆ.  ಹೌದು, ಕೇವಲ ನಿದ್ದೆ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಇದಕ್ಕಾಗಿ ವ್ಯಾಯಾಮ ಅಥವಾ ಆಹಾರದ ಅಗತ್ಯವಿಲ್ಲ. ಆದರೆ, ಮೊದಲನೆಯದಾಗಿ, ತೂಕ ಏಕೆ ಹೆಚ್ಚಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. 

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಒತ್ತಡದ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಬೊಜ್ಜು  ಬೆಳೆಸಿಕೊಳ್ಳುತ್ತಿದ್ದಾರೆ. ಇಂದಿನ ಕಾಲದಲ್ಲಿ ಎಲ್ಲರದ್ದೂ ಅಧಿಕ ತೂಕ ಹೊಂದಿರುವುದೇ ಸಮಸ್ಯೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಬಯಸುವವರೇ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ತೂಕ ಇಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದಾದರೆ ಈ ಸುಲಭ ಉಪಾಯವನ್ನು ಅನುಸರಿಸುವ ಮೂಲಕ ಸಣ್ಣಗಾಗುವುದು ಸಾಧ್ಯವಾಗುತ್ತದೆ.  ಹೌದು, ಕೇವಲ ನಿದ್ದೆ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಇದಕ್ಕಾಗಿ ವ್ಯಾಯಾಮ ಅಥವಾ ಆಹಾರದ ಅಗತ್ಯವಿಲ್ಲ. ಆದರೆ, ಮೊದಲನೆಯದಾಗಿ, ತೂಕ ಏಕೆ ಹೆಚ್ಚಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ತೂಕ ಹೆಚ್ಚಾಗುವುದರ ಹಿಂದಿನ ದೊಡ್ಡ ಕಾರಣವೆಂದರೆ ದೇಹದ ಚಯಾಪಚಯ ಕ್ರಿಯೆ ಸರಿಯಾಗಿ ಇಲ್ಲದೆ ಇರುವುದು. ಚಯಾಪಚಯ  ಸರಿಯಾಗಿ ಇಲ್ಲದೆ ಹೋದರೆ ದೇಹದ ಕೊಬ್ಬು ಹೆಚ್ಚಾಗುತ್ತದೆ. ತೂಕ ಹೆಚ್ಚಾಗಲು ಕಡಿಮೆ ನಿದ್ರೆಯೂ ಕಾರಣ ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ.   

2 /6

ಸ್ಥೂಲಕಾಯವನ್ನು ಕಡಿಮೆ ಮಾಡಲು ನಿದ್ರೆ ಬಹಳ ಮುಖ್ಯ.  ಸರಿಯಾಗಿ ನಿದ್ದೆ ಮಾಡುವುದರಿಂದ ದೇಹದ ಚಯಾಪಚಯವನ್ನು ಸುಧಾರಿಸಬಹುದು. ಇದು ಬೊಜ್ಜು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹೆಚ್ಚು ನಿದ್ರೆ ಮಾಡುವುದರಿಂದ ದೇಹದ BMI ಕಡಿಮೆಯಾಗುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ. ಆರೋಗ್ಯವಾಗಿರಲು, ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಅಗತ್ಯ. 

3 /6

ಕಡಿಮೆ ನಿದ್ರೆಯು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಮಾಡಿದರೆ ಹಸಿವಿನ ಹಾರ್ಮೋನ್ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ಹೆಚ್ಚು ತಿನ್ನಲು ಪ್ರಾರಂಭಿಸುತ್ತಾನೆ. ಪರಿಣಾಮವಾಗಿ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ

4 /6

ಕೆಟ್ಟ ಜೀವನಶೈಲಿಯು ತೂಕ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿದೆ.  ಮತ್ತು ಆದ್ದರಿಂದ ಆರೋಗ್ಯಕರವಾಗಿರಲು  ಬಾಡಿ ಕ್ಲಾಕ್ ಅನ್ನು ಅನುಸರಿಸುವುದು ಬಹಳ ಮುಖ್ಯ. 

5 /6

ಬಾಡಿ ಕ್ಲಾಕ್ ಅನ್ನು ಅನುಸರಿಸಬೇಕಾದರೆ ಮೊದಲನೆಯದಾಗಿ ನೀವು ಮಲಗುವ ಮತ್ತು ಎದ್ದೇಳುವ ಸಮಯವನ್ನು ನಿಗದಿಪಡಿಸಬೇಕು. ಇದರಿಂದ ಬೊಜ್ಜು ದೂರವಾಗುವುದಲ್ಲದೆ ಹಲವು ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ದೂರ ಉಳಿಯುತ್ತದೆ.  

6 /6

 ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದಾಗಿ ಚಯಾಪಚಯವು ಹದಗೆಡುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಅತಿದೊಡ್ಡ ಮೂಲವಾಗಿದೆ. ದೇಹದಲ್ಲಿ ವಿಟಮಿನ್ ಡಿ ಅನ್ನು ಸಮತೋಲನಗೊಳಿಸಬೇಕಾದರೆ ಸೂರ್ಯನ ಬೆಳಕಿಗೆ ಮೈ ಒಡ್ಡಬೇಕು.