ಸ್ಟಾರ್‌ ಹಿರೋಯಿನ್‌ಗಳನ್ನೂ ಮೀರಿಸುವ ಅಂದಗಾರ್ತಿ ನಟ ಅರ್ಜುನ್‌ ಸರ್ಜಾ 2ನೇ ಪುತ್ರಿ..!

Actor Arjun Secon Daughter Anjana Arjun : ಸ್ಯಾಂಡಲ್‌ವುಡ್‌ 'ಆಕ್ಷನ್ ಕಿಂಗ್' ನಟ ಅರ್ಜುನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದರಲ್ಲಿ ಅವರ ಎರಡನೇ ಮಗಳ ಫೋಟೋಗಳು ಆಗಾಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುತ್ತವೆ. ಇನ್ನೂ ಕೆಲವರು ಈಕೆಯ ಹೆಸರೇನು, ಏನ್‌ ಮಾಡ್ತೀದಾರೆ...? ಅಂತ ಇಂಟರ್‌ನೆಟ್‌ನಲ್ಲಿ ಹುಡುಕಾಡುತ್ತಿದ್ದಾರೆ.. ಬನ್ನಿ ಸರ್ಜಾ ಪುತ್ರಿಯ ಸಂಪೂರ್ಣ ಹಿನ್ನೆಲೆ ತಿಳಿಯೋಣ.. 
 

Anjana Arjun: ನಟರಷ್ಟೇ ಅಲ್ಲ, ಮಕ್ಕಳು ಕೂಡ ಆಗಾಗ ಕೆಲವೊಂದಿಷ್ಟು ವಿಚಾರವಾಗಿ ಟ್ರೆಂಡ್ ಆಗುತ್ತಿರುತ್ತಾರೆ. ಚಿತ್ರರಂಗಕ್ಕೆ ಬರುವ ಮುಂಚೆಯೇ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಪ್ಯಾನ್ಸ್‌ ಪಾಲೋಯಿಂಗ್‌ ಕೂಡ ಗಳಿಸುತ್ತಾರೆ. ಈ ಪೈಕಿ ಇದೀಗ, ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಇಂಟರ್ನೆಟ್‌ನಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದ್ದಾಳೆ.
 

1 /7

ನಟ ಅರ್ಜುನ್ ಸರ್ಜಾ ಭಾರತೀಯ ಸ್ಟಾರ್‌ ನಟರಲ್ಲಿ ಒಬ್ಬರು. ಸದ್ಯ ಹಲವು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಅವರಿಗೆ ಐಶ್ವರ್ಯ ಮತ್ತು ಅಂಜನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.   

2 /7

ಅರ್ಜುನ್ ಅವರ ಹಿರಿಯ ಮಗಳು ಐಶ್ವರ್ಯ ಅರ್ಜುನ್ ಕನ್ನಡದ ಪ್ರೇಮ ಬರಹ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಆ ನಂತರ ಅವರು ಹೆಚ್ಚಾಗಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ.  

3 /7

ಕೆಲವು ನಟರ ವಂಶಸ್ಥರು ತಮ್ಮ ತಂದೆ ತಾಯಿಯಂತೆ ಚಿತ್ರರಂಗಕ್ಕೆ ಬಂದರೆ ಮತ್ತೆ ಕೆಲವರು ವಿರುದ್ಧ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಅಂತಹವರಲ್ಲಿ ಒಬ್ಬರು ಅರ್ಜುನ್‌ ಎರಡನೇ ಪುತ್ರಿ ಅಂಜನಾ ಕೂಡ ಒಬ್ಬರು.  

4 /7

ಅಂಜನಾ ಸ್ವಯಂ ಉದ್ಯೋಗಿ. ಅಷ್ಟೇ ಅಲ್ಲ ಅವರ ಇನ್ಸ್ಟಾಗ್ರಾಮ್ ಪೇಜ್ ಗೆ ಹೋದರೆ ಮಾಡೆಲ್ ನಂತೆ ಪೋಸ್ ನೀಡಿ ಹಲವು ಫೋಟೋಶೂಟ್ ಮಾಡಿದ್ದಾರೆ.   

5 /7

ಅಂಜನಾಗೆ ಈಗ 28 ವರ್ಷ ಎಂದು ಹೇಳಲಾಗುತ್ತಿದೆ. ‘ಸರ್ಜಾ ವರ್ಲ್ಡ್’ ಬ್ರ್ಯಾಂಡ್ ಆರಂಭಿಸಿದ್ದಾರೆ.   

6 /7

 'ಸರ್ಜಾ ವರ್ಲ್ಡ್' ಒಂದು ಕೈಚೀಲ ಬ್ರಾಂಡ್ ಆಗಿದೆ. ಅವರು ಒಂದೂವರೆ ವರ್ಷದ ಹಿಂದೆ ಈ ಕಂಪನಿಯನ್ನು ಪ್ರಾರಂಭಿಸಿದರು.  

7 /7

ಅಂಜನಾ ಇತ್ತೀಚೆಗೆ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇವು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.