Kiccha Sudeep: ಯಾರನ್ನೂ ದ್ವೇಷ ಮಾಡದ ಕಿಚ್ಚ ಸುದೀಪ್‌ಗೆ ʼಆʼ ವಿಚಾರಕ್ಕೆ ವಿಷ್ಣುವರ್ಧನ್‌ ಅವರ ಮೇಲೆ ಕಣ್ಣು ಕೆಂಪಾಗುವಷ್ಟು ಕೋಪ!!

Sudeep anger on Dr Vishnuvardhan: ಕನ್ನಡದ ಬಾದ ಷಾ ಕಿಚ್ಚ ಸುದೀಪ್‌ ಮೇರು ನಟ ಡಾ. ವಿಷ್ಣುವರ್ಧನ್‌ ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.. ವಿಷ್ಣು ಅವರು ಸಿನಿರಂಗದ ಗಾಡ್‌ ಫಾದರ್‌ ಎನ್ನುತ್ತಿದ್ದ ಕಿಚ್ಚ ಅವರನ್ನೇ ಆರಾಧಿಸುತ್ತಿದ್ದರು..

1 /6

ಕನ್ನಡ ಸಿನಿಮಾರಂಗದ ಕಂಡ ಮೇರು ನಟರ ಪೈಕಿ ಡಾ. ವಿಷ್ಣುವರ್ಧನ್‌ ಕೂಡ ಒಬ್ಬರು.. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸೆಳೆದ ಮಹಾನ್‌ ಕಲಾವಿದ ಸ್ಯಾಂಡಲ್ವುಡ್‌ಗೆ ದೊಡ್ಡ ಮಟ್ಟದ ಕೊಡುಗೆಯನ್ನೇ ನೀಡಿದ್ದಾರೆ..   

2 /6

 ಇಂದಿಗೂ ವಿಷ್ಣುವರ್ಧನ್‌ ಅವರು ತಮ್ಮ ಅಭಿಮಾನಿಗಳ ಮನಸ್ಸಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ.. ದೊಡ್ಡ ಅಭಿಮಾನಿ ಬಳಗ ಹೊಂದಿದ್ದ ಇವರ ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು, ಅನ್ನದಾನ ಹೀಗೆ ಅವರಿ ಸವಿನೆನಪಿಗಾಗಿ ವಿವಿಧ ಚಟುವಟಿಕೆಗಳು ನಡೆಯುತ್ತಿರುತ್ತವೆ..   

3 /6

ಈಗಲೂ ನಟ ವಿಷ್ಣುವರ್ಧನ್‌ ಅವರ ಕುರಿತಾದ ಸಾಕಷ್ಟು ವಿಚಾರಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ.. ಈ ನಡುವೆ ವಿಷ್ಣು ಅವರು ಮಾಡಿದ ಆ ಒಂದು ಕೆಲಸ ಕಿಚ್ಚ ಸುದೀಪ್‌ಗೆ ಕಣ್ಣು ಕೆಂಪಾಗುವಷ್ಟು ಕೋಪ ತರಿಸಿತ್ತಂತೆ.. ಅಷ್ಟಕ್ಕೂ ಸಾಹಸಸಿಂಹ ಮಾಡಿದ್ದೇನು?   

4 /6

 ಕಿಚ್ಚ ಸುದೀಪ್‌ ಹಾಗೂ ಡಾ. ವಿಷ್ಣುವರ್ಧನ್‌ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದರು.. ಕಿಚ್ಚ ಅವರನ್ನು ಹೆಚ್ಚು ಆರಾಧಿಸುತ್ತಾರೆ.. ಅದೇ ರೀತಿ ವಿಷ್ಣು ದಾದಾ ಸಹ ಅವರನ್ನು ಸ್ವಂತ ಮಗನಂತೆ ಪ್ರೀತಿಸುತ್ತಿದ್ದರು.. ಹೀಗಿರುವಾಗ ಕಿಚ್ಚ ಸಂದರ್ಶನವೊಂದರಲ್ಲಿ "ನಿಮ್ಮ ಮೇಲೆ ಎಷ್ಟು ಪ್ರೀತಿ ಇದೆಯೋ ಇಷ್ಟು ಬೇಗ ನಮ್ಮನ್ನಗಲಿದ್ದಕ್ಕೆ ಅಷ್ಟೇ ಕೋಪ ಇದೆ.. ನೀವಿಲ್ಲದೇ ನಾವು ಅನಾಥರು.. ನಿಮ್ಮನ್ನು ಸದಾ ನೆನೆಯುವ ಅಭಿಮಾನಿಗಳಲ್ಲಿ ನಾನೂ ಒಬ್ಬ" ಎಂದು ವಿಷ್ಣು ಅವರ ಅಗಲಿಕೆಯ ಕುರಿತಾಗಿ ಬೇಸರಗೊಂಡಿದ್ದರು..   

5 /6

 ಕಿಚ್ಚ ಸುದೀಪ್‌ ಯಾವ ಸಂದರ್ಶನದಲ್ಲಿ ಮಾತನಾಡಿದರೂ ಅವರು ತಮ್ಮ ಪ್ರೀತಿಯ ನಟ ವಿಷ್ಣುವರ್ಧನ್‌ ಅವರ ಬಗ್ಗೆ ಮಾತನಾಡದೇ ಸಂದರ್ಶನವನ್ನು ಪೂರ್ಣಗೊಳಿಸುವುದಿಲ್ಲ.. ತಮ್ಮ ಪ್ರತಿ ಕೆಲದಲ್ಲಿಯೂ ದಾದಾ ಅವರನ್ನು ನೆನೆಯುವ ಕಿಚ್ಚ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ..   

6 /6

ನಟ ವಿಷ್ಣುವರ್ಧನ್‌ ಅವರಂತೆಯೇ ಅತ್ಯಂತ ಸರಳತೆಯ ಗುಣ ಹೊಂದಿರುವ ಕಿಚ್ಚ ಸುದೀಪ್‌ ಬಹು ದೊಡ್ಡ ಮಟ್ಟದ ಹೆಸರನ್ನು ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಅಲ್ಲದೇ ವಿಷ್ಣವರ್ಧನ್‌ ಅವರ ಹೆಸರಿನ ಸಿನಿಮಾಗಳನ್ನು ಮಾಡುತ್ತಾ ಅವರಿಗೆ ಗೌರವಸೂಚಿಸುತ್ತಿರುತ್ತಾರೆ..