Senior Citizen Investment Options - ಈ ನಾಲ್ಕು ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಸಿಗುತ್ತಿದೆ High Return ಜೊತೆಗೆ ಗ್ಯಾರಂಟಿ ಆದಾಯ

Senior Citizen Investment Options: ಬಡ್ಡಿದರಗಳಲ್ಲಿ ಭಾರಿ ಇಳಿಕೆಯಾದ ಕಾರಣ ಬ್ಯಾಂಕ್ ಗಳು ಹಿರಿಯ ನಾಗರಿಕರಿಗಾಗಿ ವಿಶೇಷ FD Scheme ಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳಲ್ಲಿ ಅವರಿಗೆ ಇತರೆ ಜನರ ಹೋಲಿಕೆಯಲ್ಲಿ ಶೇ.1ರಷ್ಟು ಹೆಚ್ಚುವರಿ ಬಡ್ಡಿದರ ನೀಡಲಾಗುತ್ತಿದೆ.
 

ನವದೆಹಲಿ: Senior Citizen Investment Options - ಭಾರತದಲ್ಲಿ ಹಿರಿಯ ನಾಗರಿಕರು ಬ್ಯಾಂಕುಗಳು ಕಡಿತಗೊಳಿಸಿರುವ ಬಡ್ಡಿದಾರದಿಂದ ಚಿಂತೆಗೆ ಒಳಗಾಗಿದ್ದಾರೆ. ಬಡ್ಡಿ ದರಗಳ ಇಳಿಕೆಯ ಪ್ರಭಾವ ಅವರ ಮೇಲೆ ಹೆಚ್ಚಾಗಿದೆ. ಆದರೆ, ಬಡ್ಡಿದರಗಳಲ್ಲಿ ಭಾರಿ ಇಳಿಕೆಯ ಕಾರಣ ಬ್ಯಾಂಕ್ ಗಳು ಹಿರಿಯ ನಾಗರಿಕರಿಗಾಗಿ ವಿಶೇಷ FD Scheme ಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳಲ್ಲಿ ಅವರಿಗೆ ಇತರೆ ಜನರ ಹೋಲಿಕೆಯಲ್ಲಿ ಶೇ.1ರಷ್ಟು ಹೆಚ್ಚುವರಿ ಬಡ್ಡಿದರ ನೀಡಲಾಗುತ್ತಿದೆ. ಇದಲ್ಲದೆ SBI ಗಳಂತಹ ದೇಶದ ಟಾಪ್ ಬಂಕುಗಳು 5 ರಿಂದ 10 ವರ್ಷಗಳ ಅವಧಿಯ FDಗಳ ಮೇಲೆ ಹಿರಿಯನಾಗರಿಕರಿಗೆ ಶೇ.6.2ರಷ್ಟು ಬಡ್ಡಿ ನೀಡುತ್ತಿವೆ. ಹಾಗೆ ನೋಡಿದರೆ ಪೋಸ್ಟ್ ಆಫೀಸ್ ನ ಸಣ್ಣ ಉಳಿತಾಯ ಯೋಜನೆಗಳಲ್ಲಿಯೂ ಕೂಡ ಸಿನಿಯರ್ ಸಿಟಿಜನ್ ಗಳಿಗೆ ಸ್ವಲ್ಪ ಅಧಿಕ ಬದ್ದಿದರವೇ ಸಿಗುತ್ತಿದೆ. ಹಾಗಾದರೆ ಬನ್ನಿ ಇಂದು ನಾವು ನಿಮಗೆ ಒಟ್ಟು ನಾಲ್ಕು ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದು, ಇವುಗಳಲ್ಲಿ ಹೈ ರಿಟರ್ನ್ ಜೊತೆಗೆ ಗ್ಯಾರಂಟಿ ಇನ್ಕಮ್ ಕೂಡ ಸಿಗುತ್ತಿದೆ.

 

ಇದನ್ನೂ ಓದಿ -PM Kisan Samman Nidhi : ಈ ತಪ್ಪುಗಳಾಗಿದ್ದರೆ ಪಿಎಂ ಕಿಸಾನ್ ಸೌಲಭ್ಯದಿಂದ ನೀವೂ ವಂಚಿತರಾಗಬಹುದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. Senior Citizen Saving Scheme (SCSS) - ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)ಯಲ್ಲಿ ಹಿರಿಯ ನಾಗರಿಕರಿಗೆ ವಾರ್ಷಿಕವಾಗಿ 7.4% ಬಡ್ಡಿ ಸಿಗುತ್ತದೆ. ಈ ಉಳಿತಾಯ ಯೋಜನೆಯ ಅವಧಿ 5 ವರ್ಷಗಳು, ಬಯಸಿದಲ್ಲಿ ಅದನ್ನು ಮತ್ತೆ 3 ವರ್ಷಗಳವರೆಗೆ ವಿಸ್ತರಿಸಬಹುದು. ಹಿರಿಯ ನಾಗರಿಕರು ಎಸ್‌ಸಿಎಸ್‌ಎಸ್‌ನಲ್ಲಿ ಗರಿಷ್ಠ 15 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯು ತಮ್ಮ ಹೂಡಿಕೆಕೆ  ಹೆಚ್ಚಿನ ಲಾಭ ಬಯಸುವ ಹಿರಿಯ ನಾಗರಿಕರಿಗಾಗಿ ಮೀಸಲಾಗಿದೆ.  ಈ ಯೋಜನೆಯಲ್ಲಿ, ಪ್ರತಿ ತ್ರೈಮಾಸಿಕದಲ್ಲಿ ಅಂದರೆ ಕ್ವಾಟರ್ಲಿ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಇದಲ್ಲದೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ, ಹಿರಿಯ ನಾಗರಿಕರು ಉಳಿತಾಯ ಯೋಜನೆಯಲ್ಲಿ ಹೂಡಿಕೆಯ ಮೇಲೆ 1.5 ಲಕ್ಷ ರೂ.ಗಳವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಇದು ಸರ್ಕಾರ ನಡೆಸುವ ಸಣ್ಣ ಉಳಿತಾಯ ಯೋಜನೆಯಾಗಿದೆ.

2 /4

2, Bank Fixed Deposits (FDs) - ದೇಶದ ಬಹುತೇಕ ದೊಡ್ಡ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗಾಗಿ ಹಿರಿಯ ನಾಗರಿಕರ ವಿಶೇಷ ಎಫ್‌ಡಿ ಯೋಜನೆಯನ್ನು ನಡೆಸುತ್ತಿವೆ. ಈ ಯೋಜನೆಯ ವಿಶೇಷತೆಯೆಂದರೆ, ಇದರ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ  ಸ್ಥಿರ ಠೇವಣಿ (FD) ಮೇಲೆ ಶೇ.1 ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಬ್ಯಾಂಕ್ ಸ್ಥಿರ ಠೇವಣಿಗಳು ಯಾವಾಗಲೂ ಹಿರಿಯ ನಾಗರಿಕರಿಗೆ ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಎಫ್‌ಡಿಯಲ್ಲಿ ಹಿರಿಯ ನಾಗರಿಕರು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಬಡ್ಡಿ ತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತವೆ.  ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐನಂತಹ ಅನೇಕ ಬ್ಯಾಂಕುಗಳು ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಗಳನ್ನು ಜೂನ್ 30, 2021ರವರೆಗೆ ನಡೆಸುತ್ತಿವೆ. ಅನೇಕ ಸಣ್ಣ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಬ್ಯಾಂಕ್ ಎಫ್‌ಡಿ ಮೇಲೆ 7% ಬಡ್ಡಿಯನ್ನು ನೀಡುತ್ತಿವೆ.  ಆದರೆ ಇತರೆ ಕೆಲ ದೊಡ್ಡ ಬ್ಯಾಂಕುಗಳು 6.2% ರಿಂದ 6.5% ಬಡ್ಡಿಯನ್ನು ನೀಡುತ್ತಿವೆ. ಹಿರಿಯ ನಾಗರಿಕರು ಬಯಸಿದಲ್ಲಿ 5 ರಿಂದ 10 ವರ್ಷಗಳ ಎಫ್‌ಡಿ ಪಡೆಯಬಹುದು.

3 /4

3. Pradhan Mantri Vaya Vandana Yojana (PMVVY) - ಪ್ರಧಾನ್ ಮಂತ್ರಿ ವಯ ವಂದನ ಯೋಜನೆ (PMVVY) ಜೀವ ವಿಮಾ ನಿಗಮ (ಎಲ್‌ಐಸಿ) ಮೂಲಕ ನಡೆಸಲಾಗುತ್ತಿರುವ ವ ಹಿರಿಯ ನಾಗರಿಕರಿಗೆ ನಿವೃತ್ತಿ ಕಮ್ ಪಿಂಚಣಿ ಯೋಜನೆಯಾಗಿದೆ. ಹಿರಿಯ ನಾಗರಿಕರು ಈ ಯೋಜನೆಯ ಲಾಭವನ್ನು ಮಾರ್ಚ್ 31, 2023 ರವರೆಗೆ ಪಡೆಯಬಹುದು. ಈ ಯೋಜನೆಯಡಿಯಲ್ಲಿ, ಹಿರಿಯ ನಾಗರಿಕರಿಗೆ ವಾರ್ಷಿಕ 7.40% ರಷ್ಟು ಪಿಂಚಣಿ ಸಿಗುತ್ತದೆ, ಇದನ್ನು ಪ್ರತಿ ತಿಂಗಳು ಪಾವತಿಸಲಾಗುತ್ತದೆ. ಇದರ ಅವಧಿ 10 ವರ್ಷಗಳು.  

4 /4

4. Post Office Monthly Income Scheme (POMIS) - ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) 5 ವರ್ಷಗಳ ಅವಧಿಯ ಮಾಸಿಕ ಆದಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ ನಂತರ, ಬಡ್ಡಿ ಸಂಪೂರ್ಣ 5 ವರ್ಷಗಳವರೆಗೆ, ಅಂದರೆ ಮುಕ್ತಾಯವಾಗುವವರೆಗೆ ಒಂದೇ ದರದಲ್ಲಿ ಲಭ್ಯವಿರುತ್ತದೆ. ಪ್ರಸ್ತುತ, ಹಿರಿಯ ನಾಗರಿಕರು ಈ ಯೋಜನೆಯಡಿ ವಾರ್ಷಿಕವಾಗಿ 6.6% ಬಡ್ಡಿಯನ್ನು ನೀಡಲಾಗುತ್ತಿದೆ.