ಒಂದು ಕಾಲದಲ್ಲಿ 10 ಪೈಸೆಗೂ ಪರದಾಡುತ್ತಿದ್ದ ಈ ನಟ ಇದೀಗ 6300 ಕೋಟಿ ರೂ. ಒಡೆಯ..!

Shah Rukh Khan life story : ಸಾಧನೆಗೆ ಬಡತನ ಎಂದಿಗೂ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ನಮ್ಮಲ್ಲಿ ಹಲವು ಜೀವಂತ ನಿದರ್ಶನಗಳಿವೆ. ಸಿನಿ ಲೋಕಕ್ಕೆ ಬಂದರೆ, ಇಲ್ಲಿ ಹಲವಾರು ನಾಯಕರು ಖಾಲಿ ಕೈಯಿಂದ ಬಂದು ಇದೀಗ ಸೂಪರ್‌ ಸ್ಟಾರ್‌ ನಟನರಾಗಿ ಮಿಂಚುತ್ತಿದ್ದಾರೆ. ಈ ಪೈಕಿ 50 ರೂ. ಸಂಬಳ ಪಡೆಯುತ್ತಿದ್ದ ನಟ ಇದೀಗ ಬಾಲಿವುಡ್‌ ಕಿಂಗ್‌ ಆಗಿ ಮೆರೆಯುತ್ತಿದ್ದಾನೆ.. ಯಾರದು..? ಏನ್‌ ಕಥೆ..? ಬನ್ನಿ ತಿಳಿಯೋಣ..

1 /6

ನಟ ನಟಿಯರ ಜೀವನವು ಅನೇಕ ಜನರನ್ನು ಆಕರ್ಷಿಸುತ್ತದೆ. ಸಿನಿ ಗ್ಲಾಮರ್ ಜಗತ್ತಿನಲ್ಲಿ ಏನಾಗುತ್ತಿದೆ ಅಂತ ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಲ್ಲಿ ಇದ್ದೇ ಇರುತ್ತದೆ. ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕು ಅಂದ್ರೆ ಬೆಂಗಳೂರಿಗೆ ಬರಲೇಬೇಕು ಅಂದರಂತೆ ಬಾಲಿವುಡ್‌ನಲ್ಲಿ ಬೆಳಗಬೇಕು ಆಂದ್ರೆ ಮಂಬೈ ಟ್ರೈನ್‌ ಹತ್ತಲೇಬೇಕು..  

2 /6

ಅದರಂತೆ ಖಾಲಿ ಕೈಯಲ್ಲಿ ಬಂದವರ ಪೈಕಿ ಕೆಲವೇ ಕೆಲವರು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಪೈಕಿ ಈ ಫೋಟೋದಲ್ಲಿ ಕಾಣುತ್ತಿರುವ ಈ ಮಗು ಕೂಡ. ಹೌದು.. ನಟನಾಗಬೇಕು ಅಂತ ಮುಂಬೈಗೆ ಬಂದ ಈ ಮಗು, ಆ ನಂತರ ಕಠಿಣ ಪರಿಶ್ರಮದ ಮೇಲೆ ಇಂದು ಸಿನಿರಂಗದ ಶ್ರೀಮಂತ ನಟರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.  

3 /6

ಆ ಫೊಟೋದಲ್ಲಿ ಇರುವ ಮಗು ಬೇರೆ ಯಾರೂ ಅಲ್ಲ, ಶಾರುಖ್ ಖಾನ್. ಬಾಲಿವುಡ್‌ ಕಿಂಗ್ ಖಾನ್ ಎಂದು ಕರೆಯಿಸಿಕೊಳ್ಳುವ ಶಾರುಖ್‌, 1965 ನವೆಂಬರ್ ನಲ್ಲಿ ದೆಹಲಿಯಲ್ಲಿ ಜನಿಸಿದರು. ಅವರ ತಂದೆ 1981 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು, ತಾಯಿ 1991 ರಲ್ಲಿ ಇಹಲೋಕ ತ್ಯಜಿಸಿದರು. ಇದರಿಂದಾಗಿ ಬಹಳ ಕಷ್ಟದ ದಿನಗಳನ್ನು ಅವರು ಎದುರಿಸಬೇಕಾಗಿತ್ತು.  

4 /6

ಕಿರುತೆರೆಯಿಂದ ವೃತ್ತಿ ಪ್ರಾರಂಭಿಸಿದ ಶಾರುಖ್‌, 1989 ರಲ್ಲಿ ‘ಫೌಜಿ’  ಎಂಬ ಧಾರಾವಾಹಿಯಲ್ಲಿ ಲೆಫ್ಟಿನೆಂಟ್ ಅಭಿಮನ್ಯು ರೈ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ಪಡೆಯಿತು. 1992ರಲ್ಲಿ ತೆರೆಕಂಡ ‘ದೀವಾನಾ’ ಸಿನಿಮಾದ ಮೂಲಕ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟ ಶಾರುಖ್‌, ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದರು. ಈ ಚಿತ್ರದ ನಂತರ, ಶಾರುಖ್ ಹಿಂತಿರುಗಿ ನೋಡಲಿಲ್ಲ.   

5 /6

ಕಳೆದ ವರ್ಷ ತೆರೆಕಂಡ ‘ಪಠಾಣ್’ ಮತ್ತು ʼಜವಾನ್‌ʼ  1000 ಕೋಟಿ ಗಡಿ ದಾಟುವ ಮೂಲಕ ದಾಖಲೆ ಕ್ರಿಯೇಟ್‌ ಮಾಡಿದವು. ‘ಜವಾನ್’ ಅನೇಕ ದಾಖಲೆಗಳನ್ನು ಸಹ ಸೃಷ್ಟಿಸಿತು. ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅವರ ‘ಡಿಂಕಿ’ ಕೂಡ ಸೂಪರ್‌ಹಿಟ್ ಆಗಿತ್ತು.  

6 /6

ಶಾರುಖ್ ಖಾನ್ ಅವರ ಮೊದಲ ಸಂಭಾವನೆ 50 ರೂ. ಇದೀಗ ಅವರ ಒಟ್ಟು ಆಸ್ತಿ 6300 ಕೋಟಿ ರೂ. ಕಳೆದ ದಶಕದಲ್ಲಿ ಅವರ ನಿವ್ವಳ ಮೌಲ್ಯವು 300 ಪ್ರತಿಶತಕ್ಕಿಂತ ಹೆಚ್ಚಾಗಿದ್ದು, ಶಾರುಖ್ ಖಾನ್ ವ್ಯಾಪಾರ, ಚಲನಚಿತ್ರಗಳು ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ದೊಡ್ಡ ಆದಾಯವನ್ನು ಗಳಿಸುತ್ತಾರೆ.