ಮಲಬದ್ಧತೆ ಸಮಸ್ಯೆಗೆ ಸರಳ ಮನೆಮದ್ದು

ಈ 5 ಸರಳ ಮನೆಮದ್ದುಗಳನ್ನು ಬಳಸಿ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ಮಲಬದ್ಧತೆ ಸಮಸ್ಯೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಔಷಧಿಗಳ ಬದಲಿಗೆ ಮನೆಯಲ್ಲಿಯೇ ಇರುವ ಕೆಲವು ಆಹಾರ ಪದಾರ್ಥಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ 5 ಸರಳ ಮನೆಮದ್ದುಗಳನ್ನು ಬಳಸಿ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಒಣದ್ರಾಕ್ಷಿ : ಮಲಬದ್ಧತೆಯ ಸಮಸ್ಯೆಯನ್ನು ನಿಭಾಯಿಸಲು, ಪ್ರತಿ ರಾತ್ರಿ 8-10 ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ದ್ರಾಕ್ಷಿಯನ್ನು ತೆಗೆದು ಹಾಲಿನಲ್ಲಿ ಕುದಿಸಿ  ನಂತರ ಸೇವಿಸಿ. ಇದರಿಂದ ಶೀಘ್ರದಲ್ಲೇ ನೀವು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯುತ್ತೀರಿ.

2 /5

ಜೇನುತುಪ್ಪ: ಜೇನುತುಪ್ಪ ಬಳಸಿಯೂ ಮಲಬದ್ದತೆಯನ್ನು ನಿವಾರಿಸಬಹುದು. ಜೇನುತುಪ್ಪವು ವಿರೇಚಕ ಗುಣಗಳನ್ನು ಹೊಂದಿದೆ, ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

3 /5

ಸೋಂಪು : ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸೋಂಪು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚ ಹುರಿದ ಸೋಂಪಿನ ಜೊತೆ ಉಗುರುಬೆಚ್ಚಗಿನ ನೀರು ಸೇವಿಸಿ.

4 /5

ಪಾಲಕ್ ಸೊಪ್ಪು : ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು, ಏಕೆಂದರೆ ಇದು ವಿರೇಚಕ ಗುಣಗಳನ್ನು ಹೊಂದಿದೆ.

5 /5

ಜೀರಿಗೆ ಅಥವಾ ಅಜ್ವೈನ್: ಮಲಬದ್ಧತೆಯ ಸಮಸ್ಯೆಯನ್ನು ನಿಭಾಯಿಸಲು, ಜೀರಿಗೆ ಮತ್ತು ಅಜ್ವೈನ್ ಸಹ ಪ್ರಯೋಜನಕಾರಿ. ಇದಕ್ಕಾಗಿ ಮೊದಲು ಜೀರಿಗೆ ಮತ್ತು ಅಜ್ವೈನ್ ಅನ್ನು ಕಡಿಮೆ ಉರಿಯಲ್ಲಿ ಹುರಿದು ಪುಡಿಮಾಡಿ. ನಂತರ ಅದಕ್ಕೆ ಉಪ್ಪು ಬೆರೆಸಿ (ಜೀರಿಗೆ, ಅಜ್ವೈನ್, ಉಪ್ಪು) ಮೂರನ್ನೂ ಸಮ ಪ್ರಮಾಣದಲ್ಲಿ ಬೆರೆಸಿ ಗಾಳಿಯಾಡದ ಜಾರ್ ನಲ್ಲಿ ಇಡಿ.  ಈ ಮಿಶ್ರಣದ ಅರ್ಧ ಟೀಚಮಚವನ್ನು ನಿಯಮಿತವಾಗಿ ಉಗುರು ಬೆಚ್ಚಗಿನ ನೀರಿನಿಂದ ತೆಗೆದುಕೊಳ್ಳಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.