Pragathi Rishab Shetty: ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ...50 ವರ್ಷದ ಹಳೆಯ ಸೀರೆಯುಟ್ಟು ಕಂಗೊಳಿಸಿದ ಕಾಂತಾರ ರಾಣಿ!

Singara Siriye: ನಟ-ನಿರ್ದೇಶಕ ರಿಷಬ್ ಶೆಟ್ಟಿ ನಟನೆ ಕಾಂತಾರ ಸಿನಿಮಾ ಎಲ್ಲೆಡೆ ಬಾರಿ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಅಜ್ಜಿ ಕಾಲದ ಸೀರೆ ಧರಿಸಿ ಕಾಂತಾರ ರಾಣಿಯಂತೆ ಕಂಗೊಳಿಸುತ್ತಿದ್ದಾರೆ.

Reveals The Secret Of Kantara Rani Sarees: ನಟ-ನಿರ್ದೇಶಕ ರಿಷಬ್ ಶೆಟ್ಟಿ ನಟನೆ ಕಾಂತಾರ ಸಿನಿಮಾ ಎಲ್ಲೆಡೆ ಬಾರಿ ಸದ್ದು ಮಾಡಿತ್ತು.  ಆ ಸಿನಿಮಾ ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಶ್ರಮವೂ ಇದೆ. ಕಾರಣ ಫ್ಯಾಷನ್ ಡಿಸೈನರ್ ಆಗಿರುವ ಇವರ ಪತ್ನಿ ಸಿನಿಮಾದಲ್ಲಿಇವರ ಕೈ ಚಳಕ ತೋರಿಸಿದ್ದಾರೆ. ಇದೀಗ ಪ್ರಗತಿ ಶೆಟ್ಟಿ  ತಮ್ಮ ಅಜ್ಜಿ ಕಾಲದ ಸೀರೆ ಧರಿಸಿ ಕಾಂತಾರ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಕಾಂತಾರ ಸಿನಿಮಾ ಸವಿ ನೆನಪಿಗೆ ಸೀರೆ ಧರಿಸಿ ಒಂದೊಂದು ಸೀರೆಯ  ಸೀಕ್ರೆಟ್ ರೀವಿಲ್‌ ಮಾಡಿದ್ದಾರೆ. 

1 /7

ನಟ-ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಫ್ಯಾಷನ್ ಡಿಸೈನರ್ ಆಗಿರುವ  ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ತಮ್ಮದೇ ಶೈಲಿಯಲ್ಲಿ ಕೈಚಳಕ ತೋರಿಸಿದ್ದಾರೆ. 

2 /7

ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿಗೆ ಕಾಂತಾರ ನೆನಪು ಕಾಡಿದೆ ಅಂಥೆ ಹೀಗಾಗಿ ಸವಿ ನೆನಪಿಗೆ ಸೀರೆ ಧರಿಸಿ ರಾಣಿಯಂತೆ ಕಂಗೊಳಿಸಿದ್ದಾರೆ. 

3 /7

ಸಿನಿಮಾ ಹಾಗೂ ಫ್ಯಾಮಿಲಿ ಎರಡನ್ನು ನಿಭಾಯಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ. ಪುರಾತನ ಕಾಲದ ಸೇರೆಯುಟ್ಟು ತಮ್ಮ ಮುದ್ದು ಮಕ್ಕಳೊಂದಿಗೆ ಪೋಸ್‌ ನೀಡಿದ್ದಾರೆ.     

4 /7

ಸಿನಿಮಾ ಆರಂಭದಲ್ಲಿ ಕಾಣಿಸುವ ಪ್ರಗತಿ ಶೆಟ್ಟಿ ,ಇದೀಗ 50 ವರ್ಷ ಹಳೆಯ ಸೀರೆಯುಟ್ಟು ಕಂಗೊಳಿಸಿದ್ದಾರೆ. 

5 /7

ಪ್ರಗತಿ ಶೆಟ್ಟಿ ಅಮ್ಮನ ಮದುವೆಯ ಸೀರೆಯನ್ನು 32 ವರ್ಷದ ನಂತರ ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿದ್ದ ಕ್ಷಣ ಎಂದು ರಿಷಬ್ ಶೆಟ್ಟಿ ಪತ್ನಿ ಬರೆದುಕೊಂಡಿದ್ದಾರೆ. ಇದೀಗ ಮತ್ತೆ ಆ ಸೀರೆ ಧರಿಸಿ ಸಂತಸ  ಹಂಚಿಕೊಂಡಿದ್ದಾರೆ.

6 /7

ಈ ಹಿಂದೆ, ಕಾಂತಾರ ಸಿನಿಮಾ ರಿಲೀಸ್ ಬಳಿಕವೂ ನಟಿ ಪ್ರಗತಿ ಶೆಟ್ಟಿ ಚಿತ್ರದಲ್ಲಿ ತಾನು ಧರಿಸಿದ ಸೀರೆ ಬಗ್ಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. 

7 /7

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಸಿನಿಮಾ ಹಾಗೂ ಫ್ಯಾಮಿಲಿ ಸಂಬಂಧಿಸಿದ ಅನೇಕ ಫೋಟೋ, ವಿಡಿಯೋ ಹಾಗೂ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.