ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’: ಇತಿಹಾಸದಲ್ಲಿ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗನೀತ!

Chris Gayle Life Story and Career: ಯಾರೇ ಆಗಿರಲಿ ಜೀವನದಲ್ಲಿ ಸಾಧಿಸುವ ಛಲವಿದ್ದರೆ ಎಂತಹದ್ದೇ ಕಷ್ಟವನ್ನಾದರೂ ಹಿಮ್ಮೆಟ್ಟಿಸಿ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ. ಸಂಪತ್ತು ಇದ್ದವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂಬುದು ಶುದ್ಧ ಸುಳ್ಳು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಯಶಸ್ವಿಯಾಗಲು ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ಸಮರ್ಪಣೆ. ಅದರ ಆಧಾರದ ಮೇಲೆ ಬಡ ಕುಟುಂಬದಲ್ಲಿ ಜನಿಸಿ ಮಗುವಿನ ಅದೃಷ್ಟವೂ ಬದಲಾಗಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್.

2 /8

ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರನ್ನು ಇಡೀ ಜಗತ್ತೇ 'ಯೂನಿವರ್ಸ್ ಬಾಸ್' ಎಂದು ಕರೆಯುತ್ತದೆ. ಮೈದಾನಕ್ಕೆ ಬ್ಯಾಟ್ ಹಿಡಿದು ಬಂದರೆ ಸಾಕ್ ಲಾಂಗ್ ಸಿಕ್ಸರ್ ಬಾರಿಸದೆ ಹಿಂತಿರುಗಿ ನೋಡೋರೆ ಅಲ್ಲ. ಆದರೆ ಒಂದೊಮ್ಮೆ ಕುಟುಂಬವನ್ನು ಪೋಷಿಸಲು ಕ್ರಿಸ್ ಗೇಲ್ ಕಸ ಆಯುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ? ಹೌದು ಕ್ರಿಸ್ ಗೇಲ್ ಬದುಕನ್ನು ಅಕ್ಷರಶಃ ನೆಲದಿಂದ ಆಕಾಶಕ್ಕೆ ಪ್ರಯಾಣ ಎಂದು ವರ್ಣಿಸಿದರೆ ತಪ್ಪಾಗಲ್ಲ.

3 /8

ಗೇಲ್ ಸೆಪ್ಟೆಂಬರ್ 21, 1979 ರಂದು ಜಮೈಕಾದ ಕಿಂಗ್‌ಸ್ಟನ್‌’ನಲ್ಲಿ ಜನಿಸಿದರು. 23 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ ಇವರು. ಅಂದಹಾಗೆ ಗೇಲ್ ವಿಶೇಷವಾಗಿ ಪ್ರಭಾವ ಬೀರಿದ್ದು ಟಿ-20 ಕ್ರಿಕೆಟ್‌’ನಲ್ಲಿ.

4 /8

2007ರಲ್ಲಿ ಶುರುವಾದ ಟಿ-20 ವಿಶ್ವಕಪ್ ಮೊದಲ ಸೀಸನ್‌’ನಲ್ಲಿ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಅಷ್ಟೇ ಅಲ್ಲದೆ, ವಿಶ್ವಕಪ್‌’ನ ಮೊದಲ ಶತಕ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಮೊದಲ ಟಿ-20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿದ್ದರೂ, ಗೇಲ್ ಹೆಸರಿನಲ್ಲಿ ಇತಿಹಾಸ ಸೃಷ್ಟಿಯಾಗಿದೆ.

5 /8

ಇದರೊಂದಿಗೆ ಟಿ-20 ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೂ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ಸ್ವರೂಪದಲ್ಲಿ, ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 22 ಶತಕಗಳನ್ನು ಗಳಿಸಿದ್ದಾರೆ, ಇದು T-20 ಕ್ರಿಕೆಟ್‌’ನಲ್ಲಿ ಗರಿಷ್ಠವಾಗಿದೆ.

6 /8

ಕ್ರಿಸ್ ಗೇಲ್ ಟೆಸ್ಟ್ ಕ್ರಿಕೆಟ್‌’ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದು, ಅವರು ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ODI ನಲ್ಲಿ ದ್ವಿಶತಕ, T-20 ನಲ್ಲಿ ಅತಿ ಹೆಚ್ಚು ರನ್, ಶತಕ ಮತ್ತು ಸಿಕ್ಸರ್ ಬಾರಿಸಿದ ವಿಷಯದಲ್ಲಿ ಗೇಲ್‌’ಗೆ ಸರಿಸಾಟಿ ಯಾರೂ ಇಲ್ಲ. .

7 /8

ಕ್ರಿಕೆಟ್ ಜಗತ್ತಿನಲ್ಲಿ ಯಶಸ್ವಿಯಾಗುವ ಮೊದಲು, ಕ್ರಿಸ್ ಗೇಲ್ ತನ್ನ ಬಾಲ್ಯದಲ್ಲಿ ಅನೇಕ ಸನ್ನಿವೇಶಗಳನ್ನು ಎದುರಿಸಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಜೀವನ ಮುನ್ನಡೆಸಲು ಬೀದಿಗಳಲ್ಲಿ ನೀರಿನ ಬಾಟಲಿಗಳನ್ನು ಹೆಕ್ಕುತ್ತಾ, ಮಾರಾಟ ಮಾಡಿ ಜೀವನ ಪೋಷಿಸುತ್ತಿದ್ದರು ಎನ್ನಲಾಗಿದೆ.

8 /8

ಈ ಬಗ್ಗೆ ಸ್ವತಃ ಕ್ರಿಸ್ ಗೇಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ಇಂದು ಗೇಲ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಅವರು ವಾಸಿಸುವ ಮನೆಯ ಬೆಲೆ 20 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.