Bollywood : ಪ್ರೀತಿಯಲ್ಲಿ ಸೋತರೂ.. ಜೀವನದಲ್ಲಿ ಗೆದ್ದ ನಟಿಯರು ಇವರು

Bollywood Love Stroy: ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿಸಿದ ವ್ಯಕ್ತಿಯನ್ನು ಬಲವಾಗಿ ನಂಬಬೇಕು ನಿಜ ಆದರೆ ಬ್ಲೈಂಡ್‌ ಆಗಿರಬಾರದು ಎಂಬುದೇ ಸತ್ಯ. ಪ್ರೀತಿಯಲ್ಲಿ ಮೋಸ ಹೋದ ಅನೇಕರು ನಮ್ಮ ಮಧ್ಯದಲ್ಲಿದ್ದಾರೆ. ಅವರಲ್ಲಿ ಕೆಲವು ಬಾಲಿವುಡ್‌ ನಟಿಯರು ಸಹ ಪ್ರೀತಿಸಿ ಮೋಸ ಹೋಗಿದ್ದಾರೆ. 
 

Bollywood Love Stroy: ಬಾಲಿವುಡ್‌ನಲ್ಲಿ ಅನೇಕ ಅಪೂರ್ಣ ಪ್ರೇಮ ಕಹಾನಿಗಳಿವೆ. ಕೆಲವೊಮ್ಮೆ ನಟರು ಪ್ರೇಮದಲ್ಲಿ ಮೋಸ ಹೋಗಿದ್ದರೆ, ಕೆಲವು ನಟಿಯರು ಸಹ ಪ್ರೀತಿ ಕಳೆದುಕೊಂಡು ದುಃಖಿಸಿದ್ದಾರೆ. ಬಾಲಿವುಡ್‌ನಲ್ಲಿ ಪ್ರೀತಿಯಲ್ಲಿ ನೊಂದ ನಟಿಯರಿದ್ದಾರೆ. ಪ್ರೀತಿ ಕಳೆದುಕೊಂಡು ನೋವುಂಡಿದ್ದಾರೆ. ಬ್ರೇಕಪ್‌ನಿಂದ ಡಿಪ್ರೆಷನ್‌ಗೆ ಹೋಗದೇ ಜೀವನದಲ್ಲಿ ಗಟ್ಟಿಯಾಗಿ ನಿಂತ ಗಟ್ಟಿಗಿತ್ತಿಯರು ಇವರು. ಪ್ರೀತಿಯಲ್ಲಿ ಸೋತರೂ.. ಜೀವನದಲ್ಲಿ ಗೆದ್ದ ನಟಿಯರ ಪಟ್ಟಿ ಇಲ್ಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕತ್ರೀನಾ ಕೈಫ್: ಕತ್ರೀನಾ ಕೈಫ್ ಕೂಡ ಲವ್‌ ಫೇಲ್ಯುರ್‌ ನೋವನ್ನು ಅನುಭವಿಸಿದ್ದಾರೆ. 6 ವರ್ಷಗಳ ಸಂಬಂಧ ಮುರಿದು ಬಿದ್ದಾಗ, ಕತ್ರಿನಾ ಕುಗ್ಗಿ ಹೋದರು. ದೀರ್ಘಕಾಲದವರೆಗೆ ಈ ದುಃಖದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಜೀವನವೇ ಮುಖ್ಯ ಎಂದು ನಿರ್ಧರಿಸಿ, ಸಾಧನೆ ಮಾಡಿದರು. 

2 /5

ಕಂಗನಾ ರಣಾವತ್: ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ಪ್ರೇಮ ಕಹಾನಿ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಆದರೆ ಈ ಪ್ರೀತಿ ಯಾವಾಗ ಪ್ರಾರಂಭವಾಯಿತು ಮತ್ತು ಯಾವಾಗ ಕೊನೆಗೊಂಡಿತು ಎಂಬುದು ಯಾರಿಗೂ ತಿಳಿದಿಲ್ಲ. ಕ್ರಿಶ್ ಚಿತ್ರದ ಸಮಯದಲ್ಲಿ ತನಗೂ ಹೃತಿಕ್‌ಗೂ ಅಫೇರ್ ಇತ್ತು ಎಂದು ಕಂಗನಾ ಹೇಳಿಕೊಂಡಿದ್ದಾರೆ, ಆದರೆ ಚಿತ್ರ ಬಿಡುಗಡೆಯಾದ ತಕ್ಷಣ ಈ ಸಂಬಂಧವೂ ಕೊನೆಗೊಂಡಿತು. ಅಂದು ನೋವುಂಡ ಕಂಗನಾ ಇಂದು ಯಶಸ್ವಿಯಾಗಿದ್ದಾರೆ.

3 /5

ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಕೂಡ ಪ್ರೀತಿಯಲ್ಲಿ ಮೋಸ ಹೋದವರೇ. ಅದಕ್ಕೆ ಕಾರಣ ರಣಬೀರ್ ಕಪೂರ್. ಬ್ರೇಕಪ್‌ ಆದಾಗ ದೀಪಿಕಾ ಖಿನ್ನತೆಗೆ ಕೂಡ ಒಳಗಾಗಿದ್ದರು. ಆದರೆ ದೀಪಿಕಾ ಈ ಹಂತದಲ್ಲೂ ಸಾಧನೆ ಮಾಡಿದ್ದಾರೆ. ಖಿನ್ನತೆಯ ವಿರುದ್ಧ ಬಂಡೆಯಂತೆ ಹೋರಾಡಿ ಹೊರಬಂದರು. ಇದೀಗ ವಿಶ್ವದ ಅನೇಕರು ಮೆಚ್ಚುವ ನಟಿಯಾಗಿದ್ದಾರೆ. 

4 /5

ಬಿಪಾಶಾ ಬಸು: ಬಿಪಾಶಾ ಬಸುಗೆ ಜೀವನದಲ್ಲಿಯೂ ಲವ್‌ ಬ್ರೇಕಪ್‌ ಕಹಿ ನೆನಪಿದೆ. ಜಾನ್ ಅಬ್ರಹಾಂ ಬಿಪಾಶಾಳನ್ನು ತೊರೆದು ಪ್ರಿಯಾ ರುಂಚಲ್ ಜೊತೆ ಡೇಟಿಂಗ್ ಆರಂಭಿಸಿದ್ದರು, ಆದರೆ ಬಿಪಾಶಾಗೆ ಅದು ತಿಳಿದಿರಲಿಲ್ಲ. ಕೊನೆಗೂ ಸತ್ಯ ಹೊರಬಿದ್ದಾಗ, ಬಿಪಾಶಾ ಕುಗ್ಗಿಹೋದರು. ಈ ಸಂಬಂಧಕ್ಕೆ 10 ವರ್ಷವಾಗಿತ್ತು, ಇದನ್ನು ಸಹಿಸಿಕೊಳ್ಳುವುದು ಬಿಪಾಶಾಗೆ ಸುಲಭವಾಗಿರಲಿಲ್ಲ. ಆದರೆ ಜೀವನದಲ್ಲಿ ಹೆದರದೇ ಮುಂದೆ ಸಾಗಿ ಸಾಧನೆಗೈದರು.

5 /5

ಐಶ್ವರ್ಯಾ ರೈ: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಪ್ರೇಮಕಥೆ ಇಂದಿಗೂ ಯಾರೂ ಮರೆತಿಲ್ಲ. ಇಬ್ಬರ ನಡುವೆ ತುಂಬಾ ಪ್ರೀತಿ ಇತ್ತು. ಆದರೆ ಈ ಸಂಬಂಧವು ಮುರಿದುಬಿತ್ತು. ಆ ಸಮಯದಲ್ಲಿ ಐಶ್ವರ್ಯಾ ತುಂಬಾ ನೊಂದುಕೊಂಡರು. ಅನೇಕ ಚಿತ್ರಗಳು ಸಹ ಕೈತಪ್ಪಿದವು. ಆದರೆ ಐಶ್ವರ್ಯಾ ಬಂಡೆಯಂತೆ ಗಟ್ಟಿಯಾದರು, ವೃತ್ತಿಜೀವನದಲ್ಲಿ ಅಪಾರ ಯಶಸ್ಸು ಪಡೆದರು.