ಬಾಲಿವುಡ್ ನ ಈ ನಟ ನಟಿಯರ ಬಳಿಯಿದೆ ಸ್ವಂತ ಜೆಟ್

ಕೆಲ ನಟ ನಟಿಯರು ತಮ್ಮ ಸ್ವಂತ ಜೆಟ್ ನ ಫೋಟೋವನ್ನು ಶೇರ್ ಮಾಡಿದ್ದಾರೆ. ಹಾಗಿದ್ದರೆ ಯಾವ ನಟ ನಟಿಯರಲ್ಲಿ ಸ್ವಂತ ಜೆಟ್ ಇದೆ ಎನ್ನುವುದನ್ನು ತಿಳಿಯೋಣ..  

ನವದೆಹಲಿ : ಬಾಲಿವುಡ್ ತಾರೆಯರು ತಮ್ಮ ಜೀವನವನ್ನು ಐಷಾರಾಮಿ ರೀತಿಯಲ್ಲಿ ಬದುಕುತ್ತಾರೆ. ತಮ್ಮ ನೀವು ನಲಿವುಗಳನ್ನು ಈ ತಾರೆಯರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಟೋ ಶೇರ್ ಮಾಡುವ ಮೂಲಕ ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಈ ಮಧ್ಯೆ, ಅನೇಕ ಮಂದಿ ಈ ನಟ ನಟಿಯರು ಹೊಂದಿರುವ ಪ್ರೈವೆಟ್ ಜೆಟ್ (private Jet) ಬಗ್ಗೆ ಪ್ರಶ್ನಿಸಿದ್ದಾರೆ.  ಈ ಪೈಕಿ ಕಿಂಗ್ ಖಾನ್ ಶಾರುಖ್ ಜೊತೆ ಅನೇಕ ಮಂದಿ ಪ್ರೈವೆಟ್ ಜೆಟ್ ಹೊಂದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರತಿ ಬಾರಿಯೂ ಶಾರುಖ್ ತಾನು ಪ್ರೈವೆಟ್ ಜೆಟ್ ಹೊಂದಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಆದರೆ, ಕೆಲ ನಟ ನಟಿಯರು ತಮ್ಮ ಸ್ವಂತ ಜೆಟ್ ನ ಫೋಟೋವನ್ನು ಶೇರ್ ಮಾಡಿದ್ದಾರೆ. ಹಾಗಿದ್ದರೆ ಯಾವ ನಟ ನಟಿಯರಲ್ಲಿ ಸ್ವಂತ ಜೆಟ್ ಇದೆ ಎನ್ನುವುದನ್ನು ತಿಳಿಯೋಣ.. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅಮಿತಾಬ್ ಬಚ್ಚನ್ ತಮ್ಮ ಖಾಸಗಿ ಜೆಟ್‌ ನಲ್ಲಿಯೇ ಪ್ರಯಾಣ ಬೆಳೆಸುತ್ತಾರೆ. ಈ ಕಾರಣದಿಂದಲೇ ಬಿಗ್ ಬಿ ವಿಮಾಣ ನಿಲ್ದಾಣದಲ್ಲಿ ಕಂಡು ಬರುವುದು ಬಹಳ ವಿರಳ. ಕಳೆದ ವರ್ಷ ಅಮಿತಾಬ್ ಬಚ್ಚನ್  ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ  ಪಡೆದ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್  ತಮ್ಮ ಸ್ವಂತ ಜೆಟ್ ನ ಫೊಟೋವನ್ನು ಶೇರ್ ಮಾಡಿದ್ದರು. ಇದರಲ್ಲಿ ತಮ್ಮ ಜೆಟ್ ನಲ್ಲಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಜೊತೆಯಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂತು.   

2 /5

ಇನ್ನು ಇನ್ನೊಬ್ಬ ನಟ ಅಜಯ್ ದೇವಗನ್ ಬಳಿ ಹಾಕರ್ 800 ಪ್ಲೇನ್ ಇದೆ. ಸಾಮಾನ್ಯವಾಗಿ ಸಿನೆಮಾ ಪ್ರಮೋಷನ್ ವೇಳೆ ಅಥವಾ ಶೂಟಿಂಗ್ ಗೆ  ತೆರಳಲು ಅಜಯ್ ಈ ಪ್ಲೇನ್ ಅನ್ನೇ ಬಳಸುತ್ತಾರೆ. 

3 /5

ಅತಿ ಹೆಚ್ಚು ಆದಾಯ ಹೊಂದಿರುವ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಕೂಡಾ 260 ಕೋಟಿ ಮೌಲ್ಯದ ಜೆಟ್ ನ ಮಾಲೀಕ. ಜನರಿಗೆ ಸಹಾಯ ಮಾಡುವುದರಲ್ಲಿ ಮುಮಚೂಣಿಯಲ್ಲಿರುವ ಅಕ್ಷಯ್, ತಮ್ಮ ನೈಜ ಬದುಕಿನಲ್ಲೂ ರಾಜನ ತರಹ ಬದುಕುತ್ತಿದ್ದಾರೆ. 

4 /5

 ನಟಿ ಪ್ರಿಯಾಂಕ ಚೋಪ್ರಾ ಜಾನ್ಸ್ ವಿದೇಶ ಪ್ರಯಾಣ ಮಾಡುತ್ತಿರುತ್ತಾರೆ. ತಮ್ಮ ಪರ್ಸನಲ್ ಅಥವಾ ಪ್ರೋಫೆಶನಲ್ ಕೆಲಸದ ನಿಮಿತ್ತ ಅವರು ನ್ಯೂಯಾರ್ಕ್ ಮತ್ತು ಲಂಡನ್ ಗೆ ತೆರಳುತ್ತಿರುತ್ತಾರೆ. ಈ ವೇಳೆ ಅವರು ಪ್ರಯಾಣಕ್ಕಾಗಿ ತಮ್ಮ ಸ್ವಂತ ಜೆಟ್ ಅನ್ನೇ ಬಳಸುತ್ತಾರೆ.   

5 /5

ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಅವರ ಪತಿ ರಾಜ್ ಕುಂದ್ರಾ ಅವರದ್ದು ಐಶಾರಾಮಿ ಜೀವನ. ವಿಶ್ವದ ವಿವಿಧ ನಗರಗಳಲ್ಲಿ ಆಸ್ತಿ ಹೊಂದಿರುವ ಶಿಲ್ಪಾ ಶೆಟ್ಟಿ ಕೂಡಾ  ಪ್ರೈವೆಟ್ ಜೆಟ್ ನ ಒಡತಿ.