Kohli-Dhoni ಸೇರಿದಂತೆ ಈ ಕ್ರಿಕೆಟಿಗರ ಬಳಿ ಇದೇ ಕೋಟ್ಯಾಂತರ ರೂ. ಮೌಲ್ಯದ ಕಾರು

               

ನವದೆಹಲಿ: ಕ್ರಿಕೆಟ್ ಆಟಗಾರರ ವೈಯಕ್ತಿಯ ಜೀವನದ ಬಗ್ಗೆ ತಿಳಿಯಲು ಅವರ ಅಭಿಮಾನಿಗಳು ಸದಾ ಉತ್ಸುಕರಾಗಿರುತ್ತಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಐಷಾರಾಮಿ ಬಂಗಲೆ, ಅವರ ಜೀವನ ಶೈಲಿ ಮತ್ತು ಅವರ ದುಬಾರಿ ವಾಹನಗಳ ಬಗ್ಗೆ ತಿಳಿಯುವುದು ಒಂದು ರೀತಿ ರೋಮಾಂಚನಕಾರಿ ಆಗಿರುತ್ತದೆ. ಇಂದು ಹೆಚ್ಚು ದುಬಾರಿ ವಾಹನಗಳನ್ನು ಹೊಂದಿರುವ ಅಂತಹ ಕೆಲವು ಕ್ರಿಕೆಟ್ ತಾರೆಯರ ಬಗ್ಗೆ ತಿಳಿಸಲಿದ್ದೇವೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಟೀಮ್ ಇಂಡಿಯಾದ ಪ್ರಬಲ ಆಟಗಾರನಾಗಿದ್ದ ಯುವರಾಜ್ ಸಿಂಗ್ (Yuvaraj Singh) ಅವರು ಮೈದಾನದ ಹೊರಗೆ ಉತ್ತಮ ವಾಹನಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದಾರೆ. ಮಾಜಿ ಬ್ಯಾಟ್ಸ್‌ಮನ್ BMW X6M, BMW M3 Convertible, BMW M5 E60, Audi Q5, Bentley Flying Spur ಮತ್ತು Lamborghini Murciélago ಮುಂತಾದ ದುಬಾರಿ ವಾಹನಗಳನ್ನು ಹೊಂದಿದ್ದಾರೆ.

2 /5

ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಬೈಕ್‌ಗಳ ಬಗ್ಗೆ ಪ್ರಿಯ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. . ಆದರೆ ಅವರ ಗ್ಯಾರೇಜ್‌ನಲ್ಲಿ ದುಬಾರಿ ಬೈಕ್‌ಗಳ ಹೊರತಾಗಿ, ಕೋಟ್ಯಾಂತರ ರೂ. ಮೊಲ್ಯದ ಕಾರುಗಳೂ ಇವೆ. Audi Q7, Mitsubishi Pajero SFX, Land Rover Freelander 2, Ferrari 599 GTO ಮತ್ತು eep Grand Cherokee Trackhawk ನಂತಹ ಕಾರುಗಳ ಸಂಗ್ರಹವನ್ನು ಧೋನಿ ಹೊಂದಿದ್ದಾರೆ. ಈ ಎಲ್ಲಾ ದುಬಾರಿ ವಾಹನಗಳಲ್ಲದೆ, ಧೋನಿ ಹಮ್ಮರ್ ಎಚ್ 2 (Hummer H2) ಅನ್ನು ಸಹ ಹೊಂದಿದ್ದಾರೆ. ಈ ವಾಹನದ ಬೆಲೆ ಅಂದಾಜು 75 ಲಕ್ಷ.

3 /5

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  (Virat Kohli) ವಿಶ್ವದ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಒಬ್ಬರು. ವಿರಾಟ್ ಅವರ ವಾರ್ಷಿಕ ಆದಾಯ ಸುಮಾರು 1600 ಕೋಟಿಗಳು. ಅವರ ಜನಪ್ರಿಯತೆಯು ತುಂಬಾ ಹೆಚ್ಚಾಗಿದ್ದು, ಉನ್ನತ ಬ್ರಾಂಡ್‌ಗಳು ಅವರೊಂದಿಗೆ ಸೇರಲು ಬಯಸುತ್ತಾರೆ. ವಿರಾಟ್ ಒಂದಕ್ಕಿಂತ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿದೆ. ಅವರು ಆಡಿ ಇಂಡಿಯಾದ (Audi India) ಬ್ರಾಂಡ್ ಅಂಬಾಸಿಡರ್. ವಿರಾಟ್ Audi Q8, Audi Q7, Land Rover Range Rover Vogue SE ಮತ್ತು Bentley Flying Spur ಮುಂತಾದ ವಾಹನಗಳನ್ನು ಹೊಂದಿದ್ದಾರೆ. ಇದನ್ನೂ ಓದಿ- Viral News: ಬೀಡಿ ಪ್ಯಾಕೆಟ್ ಮೇಲಿನ ಲಿಯೊನೆಲ್‌ ಮೆಸ್ಸಿ ಫೋಟೋ ವೈರಲ್!

4 /5

ಭಾರತದ ಸ್ಟಾರ್ ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ಅವರ ಜೀವನಶೈಲಿ ತುಂಬಾ ಐಷಾರಾಮಿ ಆಗಿದ್ದು ಮತ್ತು ಅವರು ತಮ್ಮ ಗ್ಯಾರೇಜ್‌ನಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ (Land Rover Range Rover) ಮತ್ತು ಮರ್ಸಿಡಿಸ್ ಎಎಂಜಿ ಜಿ 63 (Mercedes AMG G63) ನಂತಹ ದುಬಾರಿ ವಾಹನಗಳನ್ನು ಹೊಂದಿದ್ದಾರೆ. ಅವರ ಸಂಗ್ರಹದಲ್ಲಿನ ಒಂದು ಕಾರು ಲಂಬೋರ್ಘಿನಿ ಹುರಾಕನ್ ಇವೊ (Lamborghini Huracán Evo) ಹೆಚ್ಚು ಚರ್ಚಿಸಲ್ಪಟ್ಟಿದೆ.  ಈ ವಾಹನದ ಬೆಲೆ 3.73 ಕೋಟಿ ರೂ.  ಇದನ್ನೂ ಓದಿ- 2032 ರಲ್ಲಿನ ಓಲಂಪಿಕ್ಸ್ ಗೆ ಆತಿಥ್ಯ ವಹಿಸಲಿರುವ ಬ್ರಿಸ್ಬೇನ್

5 /5

ಭಾರತದ ಪ್ರಸಿದ್ಧ ಆಟಗಾರ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಗಾಡ್ ಆಫ್ ಕ್ರಿಕೆಟ್ ಎಂದು ಕರೆಯಲಾಗುತ್ತದೆ. ಸಚಿನ್ ಬಿಎಂಡಬ್ಲ್ಯು ಇಂಡಿಯಾದ (BMW India) ಬ್ರಾಂಡ್ ಅಂಬಾಸಿಡರ್ ಮತ್ತು ಬಿಎಂಡಬ್ಲ್ಯು ಐ 8 ಮಾಲೀಕರಾಗಿದ್ದು, ಇದರ ಬೆಲೆ ಸುಮಾರು 2.62 ಕೋಟಿ ರೂ.