ಇನ್ನು ಎರಡೇ ವಾರ.! ಈ ರಾಶಿಯವರ ಮನೆಯಲ್ಲಿ ತುಂಬಿ ತುಳುಕುವುದು ಧನ ಸಂಪತ್ತು

ಶನಿ ಸಂಕ್ರಮಣದ ಮೂಲಕ  ಕೆಲವು ರಾಶಿಯವರ ಜೀವನದಲ್ಲಿ ಕಷ್ಟದ ಅಧ್ಯಾಯಕೊನೆಗೊಳಿಸಲಿದ್ದಾನೆ. ಇನ್ನೇನಿದ್ದರೂ ಅವರ ಜೀವನದಲ್ಲಿ ಸುಖ ಸಂತೋಷದ ಹಿನಲು ಹರಿಯುವುದು.  

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುವ ಗ್ರಹಗಳಲ್ಲಿ ಶನಿ ಕೂಡಾ ಒಂದು. ಶನಿಯು ದೀರ್ಘ ಕಾಲದವರೆಗೆ ಒಂದೇ ಸ್ಥಾನದಲ್ಲಿರುತ್ತಾನೆ. ಜ್ಯೋತಿಷ್ಯದಲ್ಲಿ ಶನಿ ಗ್ರಹದ ಸ್ಥಾನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶನಿಯು 2023 ರ ಆರಂಭದಲ್ಲಿಯೇ ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. 30 ವರ್ಷಗಳ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿ ಸಂಕ್ರಮಣದ ಮೂಲಕ  ಕೆಲವು ರಾಶಿಯವರ ಜೀವನದಲ್ಲಿ ಕಷ್ಟದ ಅಧ್ಯಾಯಕೊನೆಗೊಳಿಸಲಿದ್ದಾನೆ. ಇನ್ನೇನಿದ್ದರೂ ಅವರ ಜೀವನದಲ್ಲಿ ಸುಖ ಸಂತೋಷದ ಹಿನಲು ಹರಿಯುವುದು.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಮೇಷ ರಾಶಿ : ಮೇಷ ರಾಶಿಯವರಿಗೆ ಶನಿ ಸಂಕ್ರಮಣವು ತುಂಬಾ ಪ್ರಯೋಜನಕಾರಿಯಾಗಲಿದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಯಾವ ಕೆಲಸ ಮಾಡಿದರೂ ಶನಿ ದೇವನ ಆಶೀರ್ವಾದವಿರುತ್ತದೆ. ಕೆಲಸ ಕೈ ಗೂಡುತ್ತದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಒಟ್ಟಾರೆಯಾಗಿ,  ಹಣ ಕೈ ಸೇರುವ ಅವಕಾಶ ಹೆಚ್ಚಾಗಿರುತ್ತದೆ. 

2 /4

ವೃಷಭ ರಾಶಿ : ಶನಿಯ ಸಂಚಾರವು ವೃಷಭ ರಾಶಿಯವರ ಪಾಲಿನ ಅದೃಷ್ಟದ ಬಾಗಿಲು ತೆರೆಯಲಿದೆ. ಈ ರಾಶಿಯವರ ಮೇಲೆ ಕೂಡಾ ಶನಿಯ ಆಶೀರ್ವಾದ ತುಸು ಹೆಚ್ಚೇ ಇರಲಿದೆ. ಸಮಸ್ಯೆಗಳ ಕಾರಣದಿಂದ ಇಲ್ಲಿಯವರೆಗೆ ಅರ್ಧಕ್ಕೇ ನಿಂತಿದ್ದ ಯಾವುದಾದರೂ ಕೆಲಸವಿದ್ದರೆ ಈ ಸಮಯದಲ್ಲಿ ಪೂರ್ಣಗೊಳ್ಳುವುದು. ಇಲ್ಲಿಯವರೆಗಿನ ಎಲ್ಲಾ ನಷ್ಟಗಳು ಸರಿದೂಗಲಿವೆ. ಜೀವನದಲ್ಲಿ ಪ್ರೀತಿ, ಹಣ, ಪ್ರಗತಿ ಒಲಿದು ಬರುವುದು. 

3 /4

ಧನು ರಾಶಿ: ಶನಿ ಸಂಕ್ರಮಣದ ಮೂಲಕ ಸಾಡೇ ಸಾತಿಯಿಂದ ಮುಕ್ತಿ ಸಿಗಲಿದೆ. ಕಳೆದ ಏಳೂವರೆ ವರ್ಷ ಅನುಭವಿಸಿದ ಕಷ್ಟ ಕೊನೆಯಾಗಲಿದೆ. ಇನ್ನೇನಿದ್ದರೂ ನಿಮ್ಮ ಪಾಲಿಗೆ ಯಶಸ್ಸು ಮಾತ್ರ. ಯಾವ ಕೆಲಸ ಮಾಡುವುದಾದರೂ ಶನಿ ದೇವ ಹರಸುತ್ತಾನೆ. ಇಲ್ಲಿಯವರೆಗೆ ಕಳೆದುಕೊಂಡಿದ್ದ ಆಸ್ತಿ, ಪಾಸ್ತಿ ಹಣ, ಗೌರವ ಎಲ್ಲವೂ ಮರಳಿ ಸಿಗಲಿದೆ.  

4 /4

ಕುಂಭ ರಾಶಿ : ಶನಿ ಸಂಕ್ರಮಣವು ಕುಂಭ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ದೊಡ್ಡ ಮಟ್ಟದ ಸಾಧನೆಗಳನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)