Astro Tips: ರಾತ್ರಿ ಮಲಗುವಾಗ ಈ ಎಲೆ ಸುಟ್ಟರೆ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ!

Bay Leaf Manifestation: ಯಾವುದೇ ಒಬ್ಬ ವ್ಯಕ್ತಿಗೆ ಕೆಟ್ಟ ಕನಸುಗಳು ನಿರಂತರವಾಗಿ ಕಾಡುತ್ತಿದ್ದರೆ, ರಾತ್ರಿ ವೇಳೆ ಅಡುಗೆಮನೆಯಲ್ಲಿ ಲವಂಗದ ಎಲೆಯನ್ನು ಸುಟ್ಟುಹಾಕಿ. ಹೀಗೆ ಮಾಡುವುದರಿಂದ ಕೆಟ್ಟ ಕನಸುಗಳ ಜೊತೆಗೆ ನಕಾರಾತ್ಮಕ ಶಕ್ತಿಯೂ ದೂರವಾಗುತ್ತದೆ.

Written by - Puttaraj K Alur | Last Updated : Dec 28, 2023, 11:09 AM IST
  • ಕೆಟ್ಟ ದೃಷ್ಟಿಯಿಂದ ರಕ್ಷಣೆ ಬೇಕಾದ್ರೆ ರಾತ್ರಿ ಲಂವಗದ ಎಲೆಗಳನ್ನು ಸುಡಬೇಕು
  • ಟೆನ್ಷನ್ ಇದ್ದರೆ ಅಡುಗೆಮನೆಯಲ್ಲಿ ಲವಂಗದ ಎಲೆಗಳನ್ನು ಸುಟ್ಟು ಹೊಗೆಯಾಡಿಸಬೇಕು
  • ಅಡುಗೆ ಮನೆಯಲ್ಲಿ ಲವಂಗದ ಎಲೆ ಸುಡುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ
Astro Tips: ರಾತ್ರಿ ಮಲಗುವಾಗ ಈ ಎಲೆ ಸುಟ್ಟರೆ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ!   title=
ಲವಂಗದ ಎಲೆಗಳ ಪ್ರಯೋಜನ

ನವದೆಹಲಿ: ಮನೆಯ ಅಡುಗೆ ಮನೆಯಲ್ಲಿ ಹಲವಾರು ಅಡುಗೆ ಪದಾರ್ಥಗಳಿರುತ್ತವೆ. ಇವುಗಳ ಬಳಕೆಯಿಂದ ಆಹಾರದ ರುಚಿ ಹೆಚ್ಚುವುದಲ್ಲದೆ ವ್ಯಕ್ತಿಯನ್ನು ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿಗೊಳಿಸುತ್ತದೆ. ಇಂತಹ ಆಹಾರ ಪದಾರ್ಥಗಳ ಪೈಕಿ ಆಹಾರದ ರುಚಿ ಹೆಚ್ಚಿಸುವ ಲವಂಗದ ಎಲೆಯೂ ಒಂದಾಗಿದೆ. ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ವಾಸ್ತವವಾಗಿ ಲವಂಗದ ಎಲೆಗಳನ್ನು ಸುಟ್ಟರೆ ಅದರ ಹೊಗೆ ವ್ಯಕ್ತಿಯ ಒತ್ತಡವನ್ನು ನಿವಾರಿಸುತ್ತದೆ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಆಹಾರದ ರುಚಿ ಹೆಚ್ಚಿಸುವ ಈ ಎಲೆಗಳು ಹೇಗೆ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.

ಕೆಟ್ಟ ದೃಷ್ಟಿಯಿಂದ ಮುಕ್ತಿ: ನೀವು ಕೆಟ್ಟ ದೃಷ್ಟಿಯಿಂದ ರಕ್ಷಣೆ ಬಯಸಿದರೆ, ರಾತ್ರಿ ವೇಳೆ ಲಂವಗದ ಎಲೆಗಳೊಂದಿಗೆ ಲವಂಗವನ್ನು ಸುಟ್ಟುಹಾಕಿ. ಹೀಗೆ ಮಾಡುವುದರಿಂದ ದುಷ್ಟರ ಕಣ್ಣು ದೂರವಾಗುತ್ತದೆ.

ಒತ್ತಡ ತೆಗೆದುಹಾಕುತ್ತದೆ: ನಿಮಗೆ ಯಾವುದೇ ರೀತಿಯ ಟೆನ್ಷನ್ ಇದ್ದರೆ ಅಡುಗೆಮನೆಯಲ್ಲಿ ಲವಂಗದ ಎಲೆಗಳನ್ನು ಸುಟ್ಟು ಹೊಗೆಯಾಡಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: New Year Gift: ಹೊಸ ವರ್ಷದ ಗಿಫ್ಟ್ ನೀಡುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಆರ್ಥಿಕ ಬಿಕ್ಕಟ್ಟು ನಿವಾರಿಸುತ್ತದೆ: ಯಾವುದೇ ಒಬ್ಬ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟಿನಲ್ಲಿದ್ದರೆ, ಅಡುಗೆಮನೆಯಲ್ಲಿ ಲವಂಗದ ಎಲೆಗಳನ್ನು ಸುಟ್ಟುಹಾಕಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿದೇವಿಯು ಮನೆಗೆ ಬರುತ್ತಾಳೆ.

ಆಯಾಸದಿಂದ ಮುಕ್ತಿ ಸಿಗುತ್ತದೆ: ದಿನವಿಡೀ ದಣಿದ ಕಾರಣ ನಿಮಗೆ ಕಿರಿಕಿರಿಯಾಗಿದ್ದರೆ, ಅಡುಗೆಮನೆಯಲ್ಲಿ ಲವಂಗದ ಎಲೆಗಳನ್ನು ಸುಟ್ಟು ರಾತ್ರಿ ಧೂಪ ಬೆಳಗಿಸಿ. ಲವಂಗದ ಎಲೆಗಳ ಹೊಗೆ ವ್ಯಕ್ತಿಯ ಆಯಾಸವನ್ನು ನಿವಾರಿಸುತ್ತದೆ.

ಕೆಟ್ಟ ಕನಸುಗಳನ್ನು ನಿವಾರಿಸುತ್ತದೆ: ಯಾವುದೇ ಒಬ್ಬ ವ್ಯಕ್ತಿಗೆ ಕೆಟ್ಟ ಕನಸುಗಳು ನಿರಂತರವಾಗಿ ಕಾಡುತ್ತಿದ್ದರೆ, ರಾತ್ರಿ ವೇಳೆ ಅಡುಗೆಮನೆಯಲ್ಲಿ ಲವಂಗದ ಎಲೆಯನ್ನು ಸುಟ್ಟುಹಾಕಿ. ಹೀಗೆ ಮಾಡುವುದರಿಂದ ಕೆಟ್ಟ ಕನಸುಗಳ ಜೊತೆಗೆ ನಕಾರಾತ್ಮಕ ಶಕ್ತಿಯೂ ದೂರವಾಗುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಗರಂ ಮಸಾಲ ತಿನ್ನುವವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News