ದಿನಭವಿಷ್ಯ 22-05-2024: ಈ ರಾಶಿಯವರಿಗೆ ಇಂದು ಮಕ್ಕಳಿಂದ ಶುಭ ವಾರ್ತೆ

Today Horoscope 22nd May 2024: ಇಂದು ವೈಶಾಖ ಶುಕ್ಲ ಪಕ್ಷದ ಚತುರ್ದಶಿ ತಿಥಿ. ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರ ದಿನ ಭವಿಷ್ಯ ಹೇಗಿದೆ ತಿಳಿಯಿರಿ. 

Written by - Yashaswini V | Last Updated : May 22, 2024, 07:20 AM IST
  • ಮಿಥುನ ರಾಶಿಯವರಿಗೆ ವ್ಯವಹಾರದಲ್ಲಿ ಇಷ್ಟು ದಿನಗಳಿಂದ ತಲೆದೂರಿದ್ದ ಸಮಸ್ಯೆಗಳು ಬಗೆಹರಿಯಲಿವೆ.
  • ಸಿಂಹ ರಾಶಿಯವರಿಗೆ ಇಂದು ದಿನವು ಅಷ್ಟು ಉತ್ತಮವಾಗಿಲ್ಲದ ಕಾರಣ ಜಾಗರೂಕರಾಗಿರಬೇಕು
  • ವೃಶ್ಚಿಕ ರಾಶಿಯ ಜನರು ಇಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ.
ದಿನಭವಿಷ್ಯ 22-05-2024:  ಈ ರಾಶಿಯವರಿಗೆ ಇಂದು ಮಕ್ಕಳಿಂದ ಶುಭ ವಾರ್ತೆ  title=

Budhvara Dina Bhavishya In Kannada: 22ನೇ ಮೇ 2024 ಬುಧವಾರದ ಈ ದಿನ ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ ವರಿಯಾನ್ ಯೋಗ ಇರಲಿದೆ. ಇಂದು ಯಾರಿಗೆ ಶುಭ ಯಾರು  ಜಾಗರೂಕರಾಗಿರಬೇಕು ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯ ಜನರಿಗೆ ಇಂದು ಯಾವುದಾದರೂ ಚಿಂತೆ ನಿಮ್ಮನ್ನು ಬಾಧಿಸಬಹುದು. ಅತಿಯಾದ ಖರ್ಚು ಬಾಧಿಸಬಹುದು. ಇದರಿಂದಾಗಿ, ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಕಂಡುಬರಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯ ಜನರಿಗೆ ಇಂದು ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಆದಾಗ್ಯೂ, ನಿಮ್ಮ ಆರೋಗ್ಯದ ವಿಚಾರದಲ್ಲಿ ಇಂದು ಸ್ವಲ್ಪ ಎಚ್ಚರಿಕೆ ಅಗತ್ಯ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯ ಜನರು ಇಂದು ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಇಷ್ಟು ದಿನಗಳಿಂದ ತಲೆದೂರಿದ್ದ ಸಮಸ್ಯೆಗಳು ಬಗೆಹರಿಯಲಿವೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರಿಗೆ ಇಂದು ಅದೃಷ್ಟದ ಬೆಂಬಲ ದೊರೆಯಲಿದ್ದು ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗಲಿದೆ. ವ್ಯಾಪಾರ ಸಂಬಂಧಿತ ಪ್ರಯಾಣದಲ್ಲಿ ಲಾಭವನ್ನು ನಿರೀಕ್ಷಿಸಬಹುದು. 

ಇದನ್ನೂ ಓದಿ- Shani Vakri: 135 ದಿನಗಳವರೆಗೆ ಶನಿ ಹಿಮ್ಮುಖ ಚಲನೆ, ಈ ರಾಶಿಯವರಿಗೆ ಭಾಗ್ಯೋದಯ, ಅಪಾರ ಸಂಪತ್ತು

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರಿಗೆ ಇಂದು ದಿನವು ಅಷ್ಟು ಉತ್ತಮವಾಗಿಲ್ಲದ ಕಾರಣ ಜಾಗರೂಕರಾಗಿರಬೇಕು. ಆರೋಗ್ಯ ಸ್ಥಿತಿಯೂ ಮಧ್ಯಮವಾಗಿರುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ದಿನ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರಿಗೆ ಇಂದು ನಿಮ್ಮ ಕೆಲಸಗಳಲ್ಲಿ ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ದೊರೆಯಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಬಹುದು. ಆರೋಗ್ಯ ಉತ್ತಮವಾಗಿರುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರಿಗೆ ಇಂದು ಶತ್ರುಗಳ ವಿರುದ್ಧ ಜಯ ಪ್ರಾಪ್ತಿಯಾಗಲಿದೆ. ಆರೋಗ್ಯ ಸ್ಥಿತಿ ಮಧ್ಯಮವಾಗಿರುತ್ತದೆ. ಆದಾಗ್ಯೂ, ಸ್ವಂತ ವ್ಯಾಪಾರ-ವ್ಯವಹಾರ ಮಾಡುವವರಿಗೆ ಇಂದು ಪರಿಸ್ಥಿತಿ ಉತ್ತಮವಾಗಿರುತ್ತದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯ ಜನರು ಇಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ವ್ಯವಹಾರದಲ್ಲಿ ಜಾಗರೂಕರಾಗಿದ್ದರೆ ಲಾಭ ಖಂಡಿತವಾಗಿಯೂ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ. 

ಇದನ್ನೂ ಓದಿ- Shasha Malavya Rajyoga 2024: ಶಶ-ಮಾಲವ್ಯ ರಾಜಯೋಗದಿಂದ ಈ ರಾಶಿಯವರ ಮೇಲೆ ಹಣದ ಮಳೆ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯವರು ಯಾವುದೇ ವಿಚಾರದ ಬಗ್ಗೆ ಹೆಚ್ಚು ಚಿಂತಿಸಬೇಡಿ. ಬೇರೆಯವರೊಂದಿಗೆ ಘರ್ಷಣೆಯನ್ನು ತಪ್ಪಿಸಿ. ಮನೆಯಲ್ಲಿ ಉತ್ತಮ ವಾತಾವರಣವನ್ನು ಅನುಭವಿಸುವಿರಿ. ವ್ಯಾಪಾರಸ್ಥರಿಗೆ ಶುಭ ದಿನ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರಿಗೆ ಇಷ್ಟು ದಿನಗಳ ಪರಿಶ್ರಮಕ್ಕೆ ತಕ್ಕ ಫಲವನ್ನು ಅನುಭವಿಸುವಿರಿ. ಉದ್ಯೋಗದಲ್ಲಿ ಪ್ರಗತಿ ಕಂಡು ಬರಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಆದಾಗ್ಯೂ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನಹರಿಸಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯ ಜನರಿಗೆ ಇಂದು ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಆದಾಗ್ಯೂ, ಭವಿಷ್ಯದ ದೃಷ್ಟಿಯಿಂದ ಹಣ ಉಳಿತಾಯ, ಹೂಡಿಕೆ ಬಗ್ಗೆ ಗಮನಹರಿಸಿ. ಪ್ರೀತಿ-ಪ್ರೇಮದಲ್ಲಿರುವವರಿಗೆ ಉತ್ತಮ ಸಮಯ. ಆರೋಗ್ಯವೂ ಉತ್ತಮವಾಗಿರುತ್ತದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯ ಜನರಿಗೆ ಇಂದು ಅದೃಷ್ಟದ ದಿನ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ವ್ಯಾಪಾರದಲ್ಲಿ ಬಂಪರ್ ಲಾಭವನ್ನು ಕಾಣುವಿರಿ. ಸಮಾಜದಲ್ಲಿ ಕೀರ್ತಿ- ಗೌರವರ ಹೆಚ್ಚಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News