Mangala Gochar: ಮುಂದಿನ ಮೂರು ತಿಂಗಳು ಈ ರಾಶಿಯವರಿಗೆ ಬಂಪರ್ ಧನಲಾಭ

Mangala Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಿಗೂ ಸಹ ತನ್ನದೇ ಆದ ಪ್ರಾಮುಖ್ಯತೆ ಇದೆ. ನವಗ್ರಹಗಳಲ್ಲಿನ ಒಂದು ಸಣ್ಣ ಬದಲಾವನೆಯೂ ಸಹ ಪ್ರತಿ ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಇದೀಗ ಶೀಘ್ರದಲ್ಲೇ ಮಂಗಳ ಗ್ರಹ ರಾಶಿ ಪರಿವರ್ತನೆ ಮಾಡಲಿದ್ದು ಇದರಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Apr 12, 2023, 03:26 PM IST
  • ಮಂಗಳನು ಮೇ 10, 2023ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಮಂಗಳ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
  • ಆದರೂ, ನಾಲ್ಕು ರಾಶಿಯವರು ಮುಂದಿನ ಮೂರು ತಿಂಗಳುಗಳ ಕಾಲ ಬಂಪರ್ ಲಾಭವನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Mangala Gochar: ಮುಂದಿನ ಮೂರು ತಿಂಗಳು ಈ ರಾಶಿಯವರಿಗೆ ಬಂಪರ್ ಧನಲಾಭ  title=

Mars Transit Effect: ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಕಮಾಂಡರ್ ಗ್ರಹ ಎಂದು ಬಣ್ಣಿಸಲಾಗುತ್ತದೆ. ಪ್ರಸ್ತುತ ಮಿಥುನ ರಾಶಿಯಲ್ಲಿರುವ ಮಂಗಳನು ಮೇ 10, 2023ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ನಾಲ್ಕು ರಾಶಿಯವರು ಮುಂದಿನ ಮೂರು ತಿಂಗಳುಗಳ ಕಾಲ ಬಂಪರ್ ಲಾಭವನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಮುಂದಿನ ಮೂರು ತಿಂಗಳು ಈ ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಮಂಗಳ:- 
ಕರ್ಕಾಟಕ ರಾಶಿ: 

ಮೇ ಮಾಸದಲ್ಲಿ ಮಂಗಳನ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ತುಂಬಾ ಮಂಗಳಕರ ಫಲಗಳನ್ನೇ ನೀಡಲಿದೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಆರ್ಥಿಕ ಲಾಭ ಸಾಧ್ಯತೆ ಇದ್ದು ವಿತ್ತೀಯ ಸ್ಥಿತಿ ಸುಧಾರಿಸಲಿದೆ. 

ಇದನ್ನೂ ಓದಿ- Vastu Tips: ಲಕ್ಷ್ಮಿದೇವಿ ಆಶೀರ್ವಾದಕ್ಕಾಗಿ ನಿತ್ಯ ಮುಂಜಾನೆ ಎದ್ದ ಬಳಿಕ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ

ಧನು ರಾಶಿ: 
ಮಂಗಳನ ರಾಶಿ ಬದಲಾವಣೆ ಈ ರಾಶಿಯವರಿಗೂ ಸಹ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಧನು ರಾಶಿಯವರಿಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಮಾತ್ರವಲ್ಲ, ಆಸ್ತಿ ಯೋಗವೂ ಇದೆ. 

ಕುಂಭ ರಾಶಿ: 
ಮಂಗಳ ಸಂಚಾರದಿಂದ ಕುಂಭ ರಾಶಿಯವರು ಶತ್ರುಗಳ ವಿರುದ್ಧ ಜಯ ಸಾಧಿಸಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ವಾದ-ವಿವಾದಗಳಿಂದ ದೂರವಿರಿ. 

ಇದನ್ನೂ ಓದಿ- ಏಪ್ರಿಲ್ 22ರಿಂದ ಸೂರ್ಯ, ರಾಹು, ಗುರು ಮೈತ್ರಿ: ಈ ರಾಶಿಯವರು ತುಂಬಾ ಎಚ್ಚರದಿಂದಿರಬೇಕು

ಮೀನ ರಾಶಿ: 
ಮಂಗಳ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೂ ಉತ್ತಮ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಮೀನ ರಾಶಿಯವರು ವಿದ್ಯಾಭ್ಯಾಸ, ಉದ್ಯೋಗ, ವ್ಯವಹಾರ ಎಲ್ಲದರಲ್ಲೂ ಸರ್ವತೋಮುಕ ಪ್ರಗತಿ ಕಾಣಲಿದ್ದಾರೆ. ಹಣಕಾಸಿನ ಸ್ಥಿತಿ ಸುಧಾರಿಸಲಿದೆ.

 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News