Rice Remedy : ಒಂದು ಹಿಡಿ ಅಕ್ಕಿ ನಿಮ್ಮ ಅದೃಷ್ಟವನ್ನು ಕ್ಷಣಾರ್ಧದಲ್ಲೇ ಬದಲಿಸಬಹುದು!

Rice Remedy : ಸಾಮಾನ್ಯವಾಗಿ ಜನರು ಕಠಿಣ ಪರಿಶ್ರಮದ ನಂತರವೂ ಅನೇಕ ಬಾರಿ ಯಶಸ್ಸನ್ನು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯದ ಪ್ರಕಾರ ಹೇಳಲಾದ ಕೆಲವು ಪರಿಹಾರಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ಇದು ನಿಮಗೆ ಯಶಸ್ಸನ್ನು ಪಡೆಯಲು ಸಹಾಯಕವಾಗಿದೆ.   

Written by - Chetana Devarmani | Last Updated : Nov 16, 2022, 10:55 PM IST
  • ಒಂದು ಹಿಡಿ ಅಕ್ಕಿ ನಿಮ್ಮ ಅದೃಷ್ಟ ಬದಲಿಸಬಹುದು!
  • ಜ್ಯೋತಿಷ್ಯದ ಪ್ರಕಾರ ಹೇಳಲಾದ ಕೆಲವು ಪರಿಹಾರಗಳು
Rice Remedy : ಒಂದು ಹಿಡಿ ಅಕ್ಕಿ ನಿಮ್ಮ ಅದೃಷ್ಟವನ್ನು ಕ್ಷಣಾರ್ಧದಲ್ಲೇ ಬದಲಿಸಬಹುದು! title=
ಅಕ್ಕಿ

Rice Remedy : ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಹಣ ಸಂಪಾದಿಸಲು ಬಯಸುತ್ತಾನೆ. ಜೊತೆಗೆ ತನ್ನ ಜೀವನವನ್ನು ಸಂತೋಷದಿಂದ ಬದುಕಲು ಬಯಸುತ್ತಾನೆ. ಆದರೆ ಈ ಆಸೆ ಎಲ್ಲರಿಗೂ ಈಡೇರಲ್ಲ. ಅನೇಕ ಸಂದರ್ಭಗಳಲ್ಲಿ ಮನುಷ್ಯನು ನಿರಾಶೆಗೊಳ್ಳುತ್ತಾನೆ. ಹಣ ಸಂಪಾದಿಸಲು ಮತ್ತು ಯಶಸ್ಸನ್ನು ಪಡೆಯಲು ಹಗಲಿರುಳು ಶ್ರಮಿಸುವವರು ಅನೇಕರಿದ್ದಾರೆ, ಆದರೆ ಅವರು ಮತ್ತೆ ಮತ್ತೆ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಇದು ನಿಮಗೆ ಆಗುತ್ತಿದೆ ಮತ್ತು ಅದೃಷ್ಟವು ನಿಮ್ಮೊಂದಿಗೆ ಇಲ್ಲದಿದ್ದರೆ, ಅಡುಗೆಮನೆಯಲ್ಲಿರುವ ಅಕ್ಕಿಯಿಂದ ಮಾಡುವ ಉಪಾಯ ನಿಮಗೆ ಸಹಕಾರಿಯಾಗಲಿದೆ. ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.  

ಇದನ್ನೂ ಓದಿ : ಸ್ನೇಹ ಮಾಡುವ ಮೊದಲು ಈ ವಿಷಯ ನೆನಪಿನಲ್ಲಿಡಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು!

ಅಕ್ಕಿಯ ಈ ಪರಿಹಾರವು ಅದೃಷ್ಟವನ್ನು ಬದಲಾಯಿಸುತ್ತದೆ : 

ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ನೀವು ಮತ್ತೆ ಮತ್ತೆ ವೈಫಲ್ಯವನ್ನು ಎದುರಿಸುತ್ತಿದ್ದರೆ ಅಕ್ಕಿಯ ಈ ವಿಶೇಷ ಪರಿಹಾರವನ್ನು ಮಾಡಿಕೊಳ್ಳಿ. ನಿಮ್ಮ ಅದೃಷ್ಟವನ್ನು ಜಾಗೃತಗೊಳಿಸಲು ಅಕ್ಕಿ ತುಂಬಾ ಸಹಾಯಕವಾಗುತ್ತದೆ. ನೀವು ದುರಾದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸಲು ಬಯಸಿದರೆ, ಇದಕ್ಕಾಗಿ ತಾಮ್ರದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ. ನಂತರ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಈ ನೀರಿನಿಂದ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಈ ಪರಿಹಾರವನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡಿದರೆ, ಅದೃಷ್ಟವು ಬದಲಾಗುತ್ತದೆ.

ಇದಲ್ಲದೇ ನೀವು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರೆ ಪ್ರತಿ ಸೋಮವಾರದಂದು ಸ್ನಾನ ಇತ್ಯಾದಿಗಳನ್ನು ಮುಗಿಸಿ ಅರ್ಧ ಕಿಲೋ ಅಕ್ಕಿಯನ್ನು ತೆಗೆದುಕೊಂಡು ಶಿವನ ದೇವಸ್ಥಾನಕ್ಕೆ ಹೋಗಿ, ಶಿವಲಿಂಗದ ಮೇಲೆ ಒಂದು ಹಿಡಿ ಅಕ್ಕಿಯನ್ನು ಅರ್ಪಿಸಿ. ಇದರ ನಂತರ, ಉಳಿದ ಅಕ್ಕಿಯನ್ನು ನಿರ್ಗತಿಕರಿಗೆ ದಾನ ಮಾಡಿ. ಈ ಪರಿಹಾರವನ್ನು 5 ಸೋಮವಾರಗಳ ಕಾಲ ನಿರಂತರವಾಗಿ ಮಾಡಿದರೆ, ನೀವು ಆರ್ಥಿಕ ತೊಂದರೆಗಳಿಂದ ಮುಕ್ತರಾಗುತ್ತೀರಿ. 

ಇದನ್ನೂ ಓದಿ : ಅದೃಷ್ಟವಂತ ಮಹಿಳೆಯರ ಮೈಮೇಲೆ ಈ ಚಿಹ್ನೆಗಳಿರುತ್ತವೆ!

Disclaimer: ​ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News