Mangal Gochar: ಸಂಕ್ರಾತಿಗೂ ಮೊದಲು ಈ 4 ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಮಂಗಳ

Sankranti 2023: 2023ರ ಸಂಕ್ರಾಂತಿ ಹಬ್ಬಕ್ಕೂ ಮೊದಲು ಅಂದರೆ ಜನವರಿ 13, 2023 ರಂದು ಮಂಗಳ ರಾಶಿ ಪರಿವರ್ತನೆ ನಡೆಯಲಿದೆ. ಈ ಸಮಯದಲ್ಲಿ ಮಂಗಳನು ರಾಶಿಯನ್ನು ಬದಲಾಯಿಸುವ ಮೂಲಕ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳ ಸಂಚಾರದಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ. 

Written by - Yashaswini V | Last Updated : Jan 11, 2023, 11:32 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ.
  • ಸಂಕ್ರಾಂತಿಗೂ ಮೊದಲು ವೃಷಭ ರಾಶಿಗೆ ಮಂಗಳನ ಪ್ರವೇಶವು ಕೆಲವು ರಾಶಿಯವರಿಗೆ ಬಹಳ ಮಂಗಳಕರ ಫಲಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
Mangal Gochar: ಸಂಕ್ರಾತಿಗೂ ಮೊದಲು ಈ 4 ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಮಂಗಳ  title=
Mangal Gochar before Makar Sankranti

Sankranti 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹದ ಚಲನೆಗೂ ಕೂಡ ಪ್ರಾಮುಖ್ಯತೆಯನ್ನು ನೀಡಲಾಗಿದೆ. ನವಗ್ರಹಗಳಲ್ಲಿ ಯಾವುದೇ ಗ್ರಹದ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಕೂಡ ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮವನ್ನು ಬೀರುತ್ತದೆ. ಇದೀಗ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೂ ಮೊದಲು ಮಂಗಳ ರಾಶಿ ಪರಿವರ್ತನೆ ನಡೆಯಲಿದೆ. ಮಕರ ಸಂಕ್ರಾಂತಿಗೂ ಮೊದಲು ಜನವರಿ 13, 2023 ರಂದು ಮಂಗಳನು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ. ಸಂಕ್ರಾಂತಿಗೂ ಮೊದಲು ವೃಷಭ ರಾಶಿಗೆ ಮಂಗಳನ ಪ್ರವೇಶವು ಕೆಲವು ರಾಶಿಯವರಿಗೆ ಬಹಳ ಮಂಗಳಕರ ಫಲಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.

ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಮಂಗಳ:
ಮೇಷ ರಾಶಿ:

ಜನವರಿ 13ರಂದು ಮಂಗಳ ಗೋಚಾರವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಸಮಯದಲ್ಲಿ ಮೇಷ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗಲಿದ್ದಾರೆ. ನಿಮ್ಮ ವಾಕ್ ಚಾತುರ್ಯದಿಂದ ಎಂತಹ ಕಠಿಣ ಕೆಲಸಗಳಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಅತ್ಯುತ್ತಮ ಸಮಯವಾಗಿದೆ.

ಇದನ್ನೂ ಓದಿ- Shani Gochar 2023: ಇನ್ನೊಂದು ವಾರದಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ ನಿಮ್ಮ ಮೇಲೆ ಏನು ಪರಿಣಾಮ

ಮಿಥುನ ರಾಶಿ:
ಮಂಗಳ ರಾಶಿ ಪರಿವರ್ತನೆಯಿಂದ ಮಿಥುನ ರಾಶಿಯವರ ಜೀವನದಲ್ಲಿ ಮಂಗಳಕರ ಫಲಿತಾಂಶಗಳನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ ನಿಮ್ಮ ಬಹಳ ದಿನಗಳ ಕನಸು ನನಸಾಗಲಿದೆ. ಹೊಸ ಜವಾಬ್ಧಾರಿಗಳು ಹೆಗಲೆರಲಿದೆ. ಇದರ ಹೊರತಾಗಿ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭವೂ ಲಭ್ಯವಾಗಲಿದೆ.

ಕರ್ಕಾಟಕ ರಾಶಿ:
ಮಕರ ಸಂಕ್ರಾಂತಿಗೂ ಮೊದಲು ಮಂಗಳ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯ ಉದ್ಯೋಗಸ್ಥರಿಗೆ ಬಹಳ ಪ್ರಯೋಜನಕಾರಿ ಆಗಿದೆ. ಈ ಸಮಯದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ದೊರೆಯಲಿದ್ದು, ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಹಣವೂ ಪ್ರಯೋಜನಕಾರಿ ಆಗಿದೆ.

ಇದನ್ನೂ ಓದಿ- Rahu Gochar: 2023ರಲ್ಲಿ ಈ ರಾಶಿಯವರಿಗೆ ದಯೆ ತೋರಲಿದ್ದಾನೆ ರಾಹು

ತುಲಾ ರಾಶಿ:
ಮಂಗಳ ಸಂಚಾರದ ಪರಿಣಾಮವಾಗಿ ತುಲಾ ರಾಶಿಯವರಿಗೆ ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಈ ಸಮಯದಲ್ಲಿ ಮನೆ, ವಾಹನ ಖರೀದಿ ಯೋಗವೂ ಇದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News