2018 ಐಪಿಎಲ್ : ಕೆಕೆಆರ್ ನಿಂದ ಗಂಭೀರ್ ಔಟ್, ಸಿಎಸ್ಕೆ ಗೆ ಮರಳಿದ ಧೋನಿ

ಮುಂಬೈನಲ್ಲಿ ಇಂದು ನಡೆದ ಐಪಿಎಲ್‌ ಉಳಿಕೆ ಆಟಗಾರರ ಪಟ್ಟಿಯಲ್ಲಿ ಗೌತಮ್ ಗಂಭೀರ್ ಮತ್ತು ಮಹೇಂದ್ರ ಸಿಂಗ್ ಧೋನಿ ಮೊದಲ ಸ್ಥಾನ ಗಳಿಸಿದ್ದಾರೆ. 

Last Updated : Jan 4, 2018, 09:08 PM IST
2018 ಐಪಿಎಲ್ : ಕೆಕೆಆರ್ ನಿಂದ ಗಂಭೀರ್ ಔಟ್, ಸಿಎಸ್ಕೆ ಗೆ ಮರಳಿದ ಧೋನಿ title=
Pic : PTI

ಮುಂಬೈನಲ್ಲಿ ಇಂದು ನಡೆದ ಐಪಿಎಲ್‌ ಉಳಿಕೆ ಆಟಗಾರರ ಪಟ್ಟಿಯಲ್ಲಿ ಗೌತಮ್ ಗಂಭೀರ್ ಮತ್ತು ಮಹೇಂದ್ರ ಸಿಂಗ್ ಧೋನಿ ಮೊದಲ ಸ್ಥಾನ ಗಳಿಸಿದ್ದಾರೆ. 

ಇದರಂತೆ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡವು ತಮ್ಮ ಹಳೆಯ ನಾಯಕರುಗಳನ್ನು ಉಳಿಸಿಕೊಂಡಿದ್ದಾರೆ. ಅಂದರೆ ಮುಂದಿನ ಮೂರು ವರ್ಷಗಳ ಕಾಲ ಸಿಎಸ್‌ಕೆ ತಂಡವನ್ನು ಧೋನಿ, ಆರ್‌ಸಿಬಿಯನ್ನು ಕೊಹ್ಲಿ ಹಾಗೂ ಮುಂಬೈ ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ.

ಎರಡು ವರ್ಷಗಳ ನಿಷೇಧದ ಬಳಿಕ ಚೆನ್ನೈ ಹಾಗೂ ರಾಜಸ್ತಾನ ರಾಯಲ್ಸ್ ಐಪಿಎಲ್‌ಗೆ ಎಂಟ್ರಿ ಕೊಡುತ್ತಿದೆ. ಅತ್ತ ರಾಜಸ್ತಾನ ತಂಡವು ನಾಯಕ ಸ್ಟೀವ್ ಸ್ಮಿತ್‌ಗೆ ಅವಕಾಶ ನೀಡಿದೆ. ಅಂದರೆ ಕಳೆದ ವರ್ಷಗಳಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದ ಧೋನಿ ಹಾಗೂ ಸ್ಮಿತ್ ತಮ್ಮ ಹಳೆಯ ಫ್ರಾಂಚೈಸಿಗಳನ್ನು ಸೇರಿದ್ದಾರೆ.

ಆರ್‌ಸಿಬಿ ತಂಡವು ಕೊಹ್ಲಿ ಹೊರತಾಗಿ ಎಬಿಡಿ ವಿಲಿಯರ್ಸ್ ಮತ್ತು ಅಚ್ಚರಿಯ ಆಯ್ಕೆಯೆಂಬಂತೆ ಸರ್ಫರಾಜ್ ಖಾನ್ ಅವರನ್ನು ಉಳಿಸಿಕೊಂಡಿದೆ. ಹಾಗೆಯೇ ನಿರೀಕ್ಷೆಯಂತೆಯೇ ಚೆನ್ನೈ ತಂಡವು ಧೋನಿ ಜತೆಗೆ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಅವರನ್ನು ಬರಮಾಡಿಕೊಂಡಿದೆ.

ಸನ್ ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್(12 ಕೋಟಿ ರೂ.) ಮತ್ತು ಭುವನೇಶ್ವರ್ ಕುಮಾರ್ (8.5 ಕೋಟಿ ರೂ.)

ಡೆಲ್ಲಿ ಡೇರ್'ಡೆವಿಲ್ಸ್ : ರಿಶಬ್ ಪಂಟ್(8 ಕೋಟಿ ರೂ.), ಚಿರ್ ಮೊರಿಸ್(7.1 ಕೋಟಿ ರೂ.), ಶ್ರೇಯಾಸ್ ಅಯ್ಯರ್(7 ಕೋಟಿ ರು.)

ಚೆನ್ನೈ ಸೂಪರ್ ಕಿಂಗ್ಸ್ : ಎಂ.ಎಸ್.ಧೋನಿ(15 ಕೋಟಿ ರೂ.), ಸುರೇಶ್ ರೈನ(11 ಕೋಟಿ ರೂ.), ರವಿಂದ್ರ ಜಡೇಜ(7 ಕೋಟಿ ರೂ.)

ರಾಜಸ್ಥಾನ್ ರಾಯಲ್ಸ್ : ಸ್ಟೀವನ್ ಸ್ಮಿತ್ (12 ಕೋಟಿ ರೂ.)

ಕೊಲ್ಕತ್ತಾ ನೈಟ್ ರೈಡೆರ್ಸ್ : ಸುನಿಲ್ ನರೈನ್(8.5 ಕೋಟಿ ರೂ.), ಆಂಡ್ರೆ ರುಸ್ಸೇಲ್(7 ಕೋಟಿ ರೂ.)

ಕಿಂಗ್ಸ್  XI ಪಂಜಾಬ್ : ಅಕ್ಸರ್ ಪಟೇಲ್ (6.75 ಕೋಟಿ ರೂ.)

ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮ(15 ಕೋಟಿ ರೂ.), ಹಾರ್ದಿಕ್ ಪಾಂಡ್ಯ(11 ಕೋಟಿ ರೂ.), ಜಸ್ಪ್ರಿತ್ ಬುಮ್ರ(7 ಕೋಟಿ ರೂ)

ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ(17 ಕೋಟಿ ರೂ.), ಎಬಿ ಡಿ ವಿಲ್ಲೆರ್ಸ್(11 ಕೋಟಿ ರೂ), ಸರ್ಫರಾಜ್ ಖಾನ್ (1.75 ಕೋಟಿ ರೂ.)

Trending News