19 ಎಸೆತ… 110 ರನ್! ಕ್ರಿಸ್ ಗೇಲ್ ‘ದೈತ್ಯ’ ವಿಶ್ವದಾಖಲೆ ಮುರಿದೇಬಿಟ್ಟ 19ರ ಹರೆಯದ ಈ ಕ್ರಿಕೆಟಿಗ

Afghanistan Batsman Arif Sengar: ಟಿ-10 ಮಾದರಿ ಪಂದ್ಯಗಳಲ್ಲಿ ಅಫ್ಘಾನಿಸ್ತಾನದ 19 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ಬಿರುಗಾಳಿಯ ಬ್ಯಾಟಿಂಗ್ ಮಾಡಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

Written by - Bhavishya Shetty | Last Updated : Aug 13, 2023, 01:21 PM IST
    • ಇತ್ತೀಚಿನ ದಿನಗಳಲ್ಲಿ ದೇಶ ಮತ್ತು ವಿಶ್ವದ ಎಲ್ಲೆಡೆ ಕ್ರಿಕೆಟ್ ಬಗ್ಗೆ ಕ್ರೇಜ್ ಹೆಚ್ಚಾಗಿದೆ.
    • ಅಫ್ಘಾನಿಸ್ತಾನದ 19 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ಬಿರುಗಾಳಿಯ ಬ್ಯಾಟಿಂಗ್
    • 17 ಆಕಾಶದ ಎತ್ತರದ ಸಿಕ್ಸರ್‌’ಗಳ ಸಹಾಯದಿಂದ 118 ರನ್ ಗಳಿಸಿದ್ದಾರೆ
19 ಎಸೆತ… 110 ರನ್! ಕ್ರಿಸ್ ಗೇಲ್ ‘ದೈತ್ಯ’ ವಿಶ್ವದಾಖಲೆ ಮುರಿದೇಬಿಟ್ಟ 19ರ ಹರೆಯದ ಈ ಕ್ರಿಕೆಟಿಗ title=
Arif Sengar

Afghanistan Batsman Arif Sengar: ಕಳೆದ ಕೆಲವು ವರ್ಷಗಳಿಂದ ಅಫ್ಘಾನಿಸ್ತಾನ ಕ್ರಿಕೆಟ್‌ ಅದ್ಭುತಗಳನ್ನು ಸೃಷ್ಟಿಸುತ್ತಿದೆ. ರಶೀದ್ ಖಾನ್ ಎಂಬ ಕ್ರಿಕೆಟಿಗ ಇತ್ತೀಚಿನ ದಿನಗಳಲ್ಲಿ ವಿಶ್ವದ ಅತಿದೊಡ್ಡ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾನೆ. ಕಳೆದ ಒಂದು ದಶಕದಿಂದ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಸಾಕಷ್ಟು ಪ್ರಗತಿ ಸಾಧಿಸಿದೆ. ಈ ನಡುವೆ ಅಫ್ಘಾನಿಸ್ತಾನದ ಕ್ರಿಕೆಟಿಗರೊಬ್ಬರು ಟಿ-10 ಕ್ರಿಕೆಟ್‌’ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 19 ವರ್ಷದ ಯುವ ಬ್ಯಾಟ್ಸ್‌ಮನ್ ಆರಿಫ್ ಸೆಂಗಾರ್ ಎಂಬಾತ ಕೇವಲ 29 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ: ಒಬ್ಬರಲ್ಲ.. ಮೂವರು 5ನೇ T-20 Playing 11ನಿಂದ ಔಟ್!

ಇತ್ತೀಚಿನ ದಿನಗಳಲ್ಲಿ ದೇಶ ಮತ್ತು ವಿಶ್ವದ ಎಲ್ಲೆಡೆ ಕ್ರಿಕೆಟ್ ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಯುರೋಪಿಯನ್ ಕ್ರಿಕೆಟ್ ಲೀಗ್ ಎಂದು ಹೆಸರಿಸಲಾದ ಯುರೋಪ್‌’ನಲ್ಲಿ ನಡೆಯುವ ಟಿ-10 ಮಾದರಿ ಪಂದ್ಯಗಳಲ್ಲಿ ಅಫ್ಘಾನಿಸ್ತಾನದ 19 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ಬಿರುಗಾಳಿಯ ಬ್ಯಾಟಿಂಗ್ ಮಾಡಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಐಪಿಎಲ್‌’ನಲ್ಲಿ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಪಖ್ತೂನ್ ಝಲ್ಮಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಆರಿಫ್ ಸೆಂಗಾರ್ ಕೇವಲ 29 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. (19 ಎಸೆತಗಳಲ್ಲಿ 110 ರನ್ ಬಾರಿಸಿದ್ದರು). ಆರಿಫ್ ಸೆಂಗಾರ್ ಕೇವಲ 35 ಎಸೆತಗಳಲ್ಲಿ 2 ಬೌಂಡರಿ ಮತ್ತು 17 ಆಕಾಶದ ಎತ್ತರದ ಸಿಕ್ಸರ್‌’ಗಳ ಸಹಾಯದಿಂದ 118 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ODI ಕ್ರಿಕೆಟ್’ನಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಆಗದ ಭಾರತೀಯ ಕ್ರಿಕೆಟಿಗ ಯಾರು?

ಆರಿಫ್ ಸೆಂಗರ್ ಅವರ 118 ರನ್‌’ಗಳ ಅದ್ಭುತ ಇನ್ನಿಂಗ್ಸ್‌ನ ನೆರವಿನಿಂದ ಪಖ್ತುನ್ ಝಲ್ಮಿ ನಿಗದಿತ 10 ಓವರ್‌ಗಳಲ್ಲಿ 185 ರನ್ ಗಳಿಸಿತು. 186 ರನ್‌’ಗಳ ಗುರಿ ಬೆನ್ನತ್ತಿದ ಪವರ್ ಸಿಸಿ ತಂಡ ಕೇವಲ 8.4 ಓವರ್‌’ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಪಖ್ತುನ್ ಝಲ್ಮಿ ಪಂದ್ಯವನ್ನು 82 ರನ್‌’ಗಳಿಂದ ಗೆದ್ದುಕೊಂಡಿತು. ತಮ್ಮ ಅತ್ಯುತ್ತಮ ಬ್ಯಾಟಿಂಗ್‌’ಗಾಗಿ ಆರಿಫ್ ಸೆಂಗಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News