T20 ವಿಶ್ವಕಪ್’ಗೂ ಮುನ್ನ ಹೊಸ ನಾಯಕ: ಅಂದು ನಾಯಕತ್ವ ತ್ಯಜಿಸಿ ಹೊರನಡೆದಿದ್ದ ಸ್ಟಾರ್ ಪ್ಲೇಯರ್’ಗೆ ಮತ್ತೆ ಕ್ಯಾಪ್ಟನ್ಸಿ!

Pakistan Cricket Team: ಕಳೆದ ವರ್ಷ, ಭಾರತದಲ್ಲಿ ನಡೆದ ODI ವಿಶ್ವಕಪ್‌’ನಲ್ಲಿ ಪಾಕಿಸ್ತಾನವು ಗುಂಪು ಹಂತದಿಂದ ಹೊರಗುಳಿದಿತ್ತು. ಅದಾದ ನಂತರ ಬಾಬರ್ ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು.

Written by - Bhavishya Shetty | Last Updated : Mar 27, 2024, 03:53 PM IST
    • ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ನಾಯಕ ಬಾಬರ್ ಅಜಂ
    • ಅಜಂನನ್ನು ಮತ್ತೊಮ್ಮೆ ತಂಡದ ನಾಯಕನನ್ನಾಗಿ ಮಾಡಲು ಅಂದಾಜಿಸಿದೆ
    • ಬಾಬರ್ ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು.
T20 ವಿಶ್ವಕಪ್’ಗೂ ಮುನ್ನ ಹೊಸ ನಾಯಕ: ಅಂದು ನಾಯಕತ್ವ ತ್ಯಜಿಸಿ ಹೊರನಡೆದಿದ್ದ ಸ್ಟಾರ್ ಪ್ಲೇಯರ್’ಗೆ ಮತ್ತೆ ಕ್ಯಾಪ್ಟನ್ಸಿ! title=
File Photo

Pakistan Cricket Team: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ನಾಯಕ ಬಾಬರ್ ಅಜಂನನ್ನು ಮತ್ತೊಮ್ಮೆ ತಂಡದ ನಾಯಕನನ್ನಾಗಿ ಮಾಡಲು ಅಂದಾಜಿಸಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಮುಂಬರುವ ಟಿ20 ವಿಶ್ವಕಪ್‌’ಗೂ ಮೊದಲು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವವನ್ನು ಬಾಬರ್ ಅಜಂಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಮದ್ವೆಗೂ ಮುನ್ನ 34 ಮಕ್ಕಳಿಗೆ ತಾಯಿಯಾದ ಈಕೆ ಇಂದು ಶ್ರೀಮಂತ IPL ತಂಡವೊಂದರ ಒಡತಿ! 49 ವರ್ಷ ವಯಸ್ಸಿನ ಆ ಬ್ಯೂಟಿ ಯಾರು ಗೊತ್ತಾ?

ಕಳೆದ ವರ್ಷ, ಭಾರತದಲ್ಲಿ ನಡೆದ ODI ವಿಶ್ವಕಪ್‌’ನಲ್ಲಿ ಪಾಕಿಸ್ತಾನವು ಗುಂಪು ಹಂತದಿಂದ ಹೊರಗುಳಿದಿತ್ತು. ಅದಾದ ನಂತರ ಬಾಬರ್ ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು.

ಬಾಬರ್ ಅಜಂ ನಾಯಕತ್ವವನ್ನು ತೊರೆದ ನಂತರ, ಶಾನ್ ಮಸೂದ್ ಅವರನ್ನು ಟೆಸ್ಟ್ ತಂಡದ ನಾಯಕನಾಗಿ ನೇಮಿಸಲಾಯಿತು. ಇನ್ನೊಂದೆಡೆ, ಶಾಹೀನ್ ಅಫ್ರಿದಿಯನ್ನು ಟಿ 20 ತಂಡದ ನಾಯಕರನ್ನಾಗಿ ಮಾಡಲಾಯಿತು. ಇದೀಗ ಮತ್ತೊಮ್ಮೆ ಬಾಬರ್ ಆಜಮ್ ನಾಯಕತ್ವ ವಹಿಸಿಕೊಳ್ಳುವ ಚರ್ಚೆ ಜೋರಾಗಿದೆ.

ಇದನ್ನೂ ಓದಿ:  ಇದು ಅನ್ನವೋ…? ಚಿನ್ನವೋ…? ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ 1 ಕೆಜಿಗೆ ಎಷ್ಟು ಗೊತ್ತಾ? ತಿಳಿದರೆ ಹೌಹಾರೋದು ಗ್ಯಾರಂಟಿ

ಯಾವುದೇ ಕಾರ್ಯಸಾಧ್ಯವಾದ ಪರ್ಯಾಯ ಲಭ್ಯವಿಲ್ಲದ ಕಾರಣ, ಮತ್ತೊಮ್ಮೆ ತಂಡದ ನಾಯಕತ್ವಕ್ಕೆ ಬಾಬರ್ ಅತ್ಯುತ್ತಮ ಆಯ್ಕೆ ಎಂಬ ತೀರ್ಮಾನಕ್ಕೆ ಮಂಡಳಿ ಬಂದಿದೆ ಎಂದು ಪಿಸಿಬಿ ಥಿಂಕ್ ಟ್ಯಾಂಕ್‌’ನ ಮೂಲಗಳು ತಿಳಿಸಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News